ಹಾವೇರಿ: ವಿಎಒ ಪರೀಕ್ಷೆಯಲ್ಲಿ (VAO Exam) 151 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಬಂದಿದ್ದ ಅಭ್ಯರ್ಥಿಯ ಪರೀಕ್ಷಾ ಕೇಂದ್ರದ (Exan Centre) ಮುಖ್ಯಸ್ಥ ಸೇರಿ ಮೂವರನ್ನು ಸಸ್ಪೆಂಡ್ ಮಾಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ಆರೋಪಿ ಶಂಕರ್ ಬನ್ನೂರು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ (Police Constable Exam) 25 ಹಾಗೂ ಗ್ರಾಮಲೆಕ್ಕಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ (Village Accountant Exam) 151 ಅಂಕ ಪಡೆದು ರಾಜ್ಯಕ್ಕೆ ಫಸ್ಟ್ ಬಂದಿದ್ದ. ಇದರಿಂದ ಅನುಮಾನ ಉಂಟಾಗಿ ತನಿಖೆ ನಡೆಸಿದಾಗ ಪರೀಕ್ಷಾ ಕೇಂದ್ರದಲ್ಲಿ ಗೂಗಲ್ ಲೆನ್ಸ್ ಬಳಸಿರುವುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ 25, VAOನಲ್ಲಿ 151 ಅಂಕ – ಗೂಗಲ್ ಲೆನ್ಸ್ ಬಳಸಿದ್ದ ಆರೋಪಿ ವಿರುದ್ಧ FIR
ಆರೋಪಿ ಮೊಬೈಲ್ ಬಳಸಿ ಅಕ್ರಮ ಎಸಗಿರುವ ಕಾರಣ ಪರೀಕ್ಷಾ ಕೇಂದ್ರದ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಆರೋಪದ ಮೇಲೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಹಾಗೂ ಶಿಗ್ಗಾಂವಿಯ ಖಾಸಗಿ ಪಿಯು ವಿದ್ಯಾಲಯವೊಂದರ ಪ್ರಾಚಾರ್ಯ ರಮಾಕಾಂತ ಭಟ್, ಪರೀಕ್ಷಾ ಕೊಠಡಿಯ ಮೇಲ್ವಿಚಾರಕ ಬಸವರಾಜ ಸವಡಿ ಮತ್ತು ಡ್ರೆಸ್ಕೋಡ್ ಕರ್ತವ್ಯ ನಿರ್ವಹಿಸಿದ ಉಪನ್ಯಾಸಕ ರಾಜು ದುಂಡಪ್ಪನವರ ಮೂವರನ್ನು ಅಮಾನತು ಮಾಡಿ, ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
