– ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ
ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಮತ್ತು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಜಪಾನ್ ಪ್ರವಾಸದಲ್ಲಿರುವ ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ರಾಜ್ಯ ನಿಯೋಗವು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಅವರೊಂದಿಗೆ ಜಪಾನ್ನ ಮೊಟೊಮಾಚಿ (Motomachi) ಘಟಕದಲ್ಲಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ನ ಉನ್ನತ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದೆ.
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (FDI) ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಬಿಯಾಂಡ್ ಬೆಂಗಳೂರು (Beyond Bengaluru) ದೂರದೃಷ್ಟಿಯ ಮೂಲಕ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಯನ್ನು ಬೆಂಗಳೂರಿನಿಂದ ಹೊರಗೂ ರಾಜ್ಯದ ಎಲ್ಲಾ ಭಾಗಗಳಿಗೆ ಕೊಂಡೊಯ್ಯಲು ಸರ್ಕಾರ ಶ್ರಮಿಸುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಮೊಟೊಮಾಚಿ ಘಟಕದಲ್ಲಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಸಕಾಜು ಯೋಶಿಮುರಾ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕರ್ನಾಟಕದಲ್ಲಿ ತನ್ನ ವಾಹನ ಉತ್ಪಾದನಾ ಸಾಮರ್ಥ್ಯವನ್ನು 10 ಲಕ್ಷಕ್ಕೆ ವಿಸ್ತರಿಸುವ ಟೊಯೋಟಾ ಯೋಜನೆಯ ಕುರಿತು ಮಾತುಕತೆ ನಡೆಯಿತು. ಕಂಪನಿಯ ಈ ವಿಸ್ತರಣೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಲಾಗಿದೆ. ಅಲ್ಲದೆ, ಟೊಯೋಟಾದ ಕೈಗೆಟುಕುವ ದರದ ಹೈಬ್ರಿಡ್ ಟ್ಯಾಕ್ಸಿ ಮಾದರಿಯನ್ನು ಕರ್ನಾಟಕಕ್ಕೆ ತರುವುದು ಮತ್ತು ಫ್ಲೆಕ್ಸ್-ಫ್ಯೂಯೆಲ್ (Flex-fuel) ವಾಹನ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಯಿತು.
Visited the Sakae underground network in Nagoya, which connects metro stations, commercial spaces and major buildings through an integrated underground system. It is an interesting example of how urban spaces can be designed for convenience, connectivity and better everyday experiences. Also explored Toyota’s JPN TAXI, an LPG-hybrid taxi designed with spacious interiors, wide sliding doors, low-floor access and wheelchair-friendly features.
As we work towards building more efficient, sustainable and liveable cities, our focus is on learning from global best practices and adapting solutions to Karnataka’s needs – improving urban mobility, strengthening connectivity and making our cities better places to live.
— DK Shivakumar (@DKShivakumar) November 23, 2026
ಈ ಭೇಟಿಯ ಸಂದರ್ಭದಲ್ಲಿ, ಟೊಯೋಟಾದ ‘ಗ್ಲೋಬಲ್ ಸ್ಕಿಲ್-ಅಪ್’ ಕಾರ್ಯಕ್ರಮದಡಿ ವಿಶೇಷ ತರಬೇತಿ ಮತ್ತು ಇಂಟರ್ನ್ಶಿಪ್ಗಾಗಿ ಜಪಾನ್ಗೆ ಬಂದಿರುವ ಬಿಡದಿ ಘಟಕದ 20ಕ್ಕೂ ಹೆಚ್ಚು ತರಬೇತುದಾರರೊಂದಿಗೆ ಸಂವಾದ ನಡೆಸಲಾಯಿತು. ಈ ತರಬೇತಿಯು ನಮ್ಮ ಯುವಕರಿಗೆ ಆಧುನಿಕ ಉತ್ಪಾದನಾ ಕ್ಷೇತ್ರದಲ್ಲಿ ಅಮೂಲ್ಯ ಕೌಶಲ್ಯ ಮತ್ತು ಜ್ಞಾನವನ್ನು ನೀಡಲಿದೆ. ಇದೇ ವೇಳೆ, ರಾಜ್ಯದಲ್ಲಿ ನಡೆಯಲಿರುವ ಮುಂಬರುವ ‘ಜಾಗತಿಕ ಹೂಡಿಕೆದಾರರ ಸಮಾವೇಶ’ಕ್ಕೆ (Global Investors Meet) ಟೊಯೋಟಾ ನಾಯಕರಿಗೆ ಅಧಿಕೃತ ಆಹ್ವಾನ ನೀಡಲಾಯಿತು ಎಂದು ಡಿಕೆಶಿ ಹೇಳಿದ್ದಾರೆ.
Visited the Toyota Kaikan Museum in Toyota City, Japan, along with Minister Shri M. B. Patil, and members of our delegation.
It was fascinating to experience Toyota’s innovations in automotive technology, manufacturing and future mobility, and see how the company is shaping the future of transportation.
Karnataka is keen to strengthen its engagement with global industry leaders, foster innovation and build partnerships that create new opportunities for our state.
— DK Shivakumar (@DKShivakumar) November 23, 2026
ಈ ಸಂದರ್ಭದಲ್ಲಿ ಜಪಾನ್ನ ಟೊಯೋಟಾ ಸಿಟಿಯಲ್ಲಿರುವ ‘ಟೊಯೋಟಾ ಕೈಕನ್ ಮ್ಯೂಸಿಯಂ’ಗೆ ಭೇಟಿ ನೀಡಿ, ಆಟೋಮೋಟಿವ್ ತಂತ್ರಜ್ಞಾನ ಮತ್ತು ಭವಿಷ್ಯದ ಸಾರಿಗೆ ವ್ಯವಸ್ಥೆಯಲ್ಲಿನ ಆವಿಷ್ಕಾರಗಳನ್ನು ವೀಕ್ಷಿಸಿದ್ದಾರೆ.
ಇದರ ಜೊತೆಗೆ, ನಗೋಯಾದಲ್ಲಿರುವ ‘ಸಕೇ’ (Sakae) ಭೂಗತ ಜಾಲಕ್ಕೆ ಭೇಟಿ ನೀಡಲಾಯಿತು. ಮೆಟ್ರೋ ನಿಲ್ದಾಣಗಳು, ವಾಣಿಜ್ಯ ಮಳಿಗೆಗಳು ಮತ್ತು ಪ್ರಮುಖ ಕಟ್ಟಡಗಳನ್ನು ಭೂಗತ ಮಾರ್ಗದ ಮೂಲಕ ಸಂಪರ್ಕಿಸುವ ಈ ವ್ಯವಸ್ಥೆಯು ನಗರ ವಿನ್ಯಾಸಕ್ಕೆ ಉತ್ತಮ ಉದಾಹರಣೆಯಾಗಿದೆ. ಅಲ್ಲದೆ, ವಿಶಾಲವಾದ ಒಳಾಂಗಣ, ಸ್ಲೈಡಿಂಗ್ ಬಾಗಿಲುಗಳು, ಲೋ-ಫ್ಲೋರ್ ಮತ್ತು ವೀಲ್ಚೇರ್ ಸ್ನೇಹಿ ಸೌಲಭ್ಯಗಳನ್ನು ಹೊಂದಿರುವ ಟೊಯೋಟಾದ ಎಲ್ಪಿಜಿ-ಹೈಬ್ರಿಡ್ ‘ಜೆಪಿಎನ್ ಟ್ಯಾಕ್ಸಿ’ಯನ್ನು (JPN TAXI) ಪರಿಶೀಲಿಸಲಾಯಿತು. ಜಾಗತಿಕ ಮಟ್ಟದ ಇಂತಹ ಅತ್ಯುತ್ತಮ ಮಾದರಿಗಳನ್ನು ಅಳವಡಿಸಿಕೊಂಡು ಕರ್ನಾಟಕದ ನಗರಗಳ ಸಾರಿಗೆ ವ್ಯವಸ್ಥೆ ಮತ್ತು ಸಂಪರ್ಕವನ್ನು ಮತ್ತಷ್ಟು ಸುಧಾರಿಸುವುದು ನಮ್ಮ ಉದ್ದೇಶವಾಗಿದೆ ಡಿಕೆಶಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
