ಚಿಕ್ಕಮಗಳೂರು: ಹಾಸನದ (Hassan) ಬೇಲೂರು (Beluru) ಭಾಗದಿಂದ ಮೂಡಿಗೆರೆಯ (Mudigere) ಕಡೆಗೆ ಕಾಡಾನೆ (Elephant) ಹಿಂಡುಗಳನ್ನು ಅಟ್ಟಿದ್ದರಿಂದ ಆ ಭಾಗದ ನೂರಾರು ಗ್ರಾಮಗಳ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಗ್ರಾಮಗಳ ಕಡೆಗೆ ಆನೆ ಹಿಂಡು ನುಗ್ಗದಂತೆ ತಡೆಯಲು ಇಡೀ ರಾತ್ರಿ ಇಟಿಎಫ್ ಸಿಬ್ಬಂದಿ ನಿಗಾ ಇಡಲು ಮುಂದಾಗಿದ್ದಾರೆ.
ಮೂಡಿಗೆರೆಯಲ್ಲಿ ಬೇಲೂರಿನ ಆನೆಗಳ ಆಪರೇಷನ್ ಗಜ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ. ಮೂಡಿಗೆರೆ ತಾಲೂಕಿನ ಬಾರದ ಹಳ್ಳಿಯಲ್ಲಿ 17 ಕಾಡಾನೆಗಳು ಬೀಡುಬಿಟ್ಟಿವೆ. 2 ತಂಡಗಳಾಗಿ 38ಕ್ಕೂ ಅಧಿಕ ಕಾಡಾನೆಗಳು ವಿಂಗಡಣೆಯಾಗಿವೆ. ಕಾಡಾನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ನೂರಾರು ಇಟಿಎಫ್ ಸಿಬ್ಬಂದಿ ಇಡೀ ರಾತ್ರಿ ಕಾಡಾನೆಗಳ ಮೇಲೆ ನಿಗಾ ಇಡಲಿದ್ದಾರೆ. ಇದನ್ನೂ ಓದಿ: ನಯನಾ ಮೋಟಮ್ಮ ಅಕ್ರೋಶ ಅರ್ಥ ಆಗುತ್ತೆ, ಆದ್ರೆ ರಾಜೀನಾಮೆ ಪರಿಹಾರ ಅಲ್ಲ: ಪೊನ್ನಣ್ಣ
ಡ್ರೋನ್ ಕ್ಯಾಮೆರಾದಲ್ಲಿ ಕಾಡಾನೆಗಳ ಹಿಂಡಿನ ಸಂಚಾರ ಸೆರೆಯಾಗಿದೆ. ಕತ್ತಲಾಗುತ್ತಿದ್ದಂತೆ ಕಾಡಾನೆಗಳ ಹಿಂಡು ಸಂಚಾರ ಆರಂಭಿಸಿವೆ. ಆನೆಗಳ ಸ್ವಾಭಾವಿಕ ನಡೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾಯುತ್ತಿದ್ದಾರೆ. ಕಾಡಾನೆಗಳ ಹಿಂಡಿನ ಹಿಂದೆ-ಮುಂದೆ ಇಟಿಎಫ್ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಆನೆಗಳ ಹಿಂಡು ಜನವಸತಿ ಪ್ರದೇಶದತ್ತ ಬಾರದಂತೆ ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಇದನ್ನೂ ಓದಿ: ನಮ್ಮ ಮಾತಿಗೆ ಬೆಲೆ ಇಲ್ಲ ಅಂದ್ರೆ ನಾವ್ಯಾಕೆ ಶಾಸಕರಾಗಿರಬೇಕು: ನಯನಾ ಮೋಟಮ್ಮ ಬೇಸರ
