– ಉದ್ಯೋಗಾವಕಾಶ ಕಲ್ಪಿಸದಿದ್ದರೆ ಡಿ.12ಕ್ಕೆ ಬೃಹತ್ ರ್ಯಾಲಿ ಎಚ್ಚರಿಕೆ
ಬೆಂಗಳೂರು: ನಗರದ (Bengaluru) ಐಟಿ – ಬಿಟಿ ಕಂಪನಿಗಳಲ್ಲಿ `ಕನ್ನಡಿಗರಿಗೆ ಉದ್ಯೋಗ’ ಅಭಿಯಾನವನ್ನು ಕರವೇ ನಾರಾಯಣಗೌಡ (Karave Narayanagowda) ತೀವ್ರಗೊಳಿಸಿದ್ದಾರೆ.
ಹೆಬ್ಬಾಳ ಬಳಿಯ ಮಾನ್ಯತಾ ಟೆಕ್ಪಾರ್ಕ್ಗೆ ನಾರಾಯಣಗೌಡ ಭೇಟಿ ನೀಡಿದ್ದರು. ಈ ವೇಳೆ ಸುಮಾರು 20ಕ್ಕೂ ಹೆಚ್ಚು ಕಂಪನಿಗಳ ಹೆಚ್ಆರ್ಗಳ ಜೊತೆ ಸಂವಾದ ನಡೆಸಿದರು. ಕನ್ನಡದ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸದಿದ್ದರೆ ಡಿ.12ಕ್ಕೆ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಡಿ.4 ರಿಂದ 13 ರವರೆಗೆ ‘ಬೆಂಗಳೂರು ಜಾತ್ರೆʼ– ಊರಹಬ್ಬ: ನಗರದಾದ್ಯಂತ 200ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು
ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧವೂ ಗರಂ ಆದ ನಾರಾಯಣಗೌಡ, ಎಲ್ಲೋ ಕೂತುಕೊಂಡು ಬೇರೆ ರಾಜ್ಯಕ್ಕೆ ಹೋಗ್ತೀವಿ ಅಂತ ಹೆದರಿಸಿದ್ರೆ ನಾವು ಹೆದರುವುದಿಲ್ಲ. ಹಿಂದಿಯವರು, ಮಲೆಯಾಳಿ, ತಮಿಳು ಇದ್ರೇ ಅವರನ್ನೇ ಕರೆದು ಕೆಲಸ ಕೊಡ್ತಾ ಇದ್ದೀರಿ. ಕನ್ನಡದ ಮಕ್ಕಳಿಗೆ ಉದ್ಯೋಗ ಮೀಸಲಾತಿ ಯಾಕೆ ಕೊಡ್ತಿಲ್ಲ? ಹೀಗೆ ಪರಿಸ್ಥಿತಿ ಮುಂದುವರೆದು ಇಲ್ಲಿನ ಜನ ಭುಗಿಲೆದ್ರೇ ಏನು ಮಾಡ್ತೀರಾ? ಆಗ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಕನ್ನಡ ಗೊತ್ತಿಲ್ಲ ಅಂತಾ ಹೇಳ್ಕೊಂಡು ದರ್ಪ ಮೆರೆದ್ರೇ ಇನ್ನು ಸಹಿಸಲ್ಲ. ಮೋಹನ್ ದಾಸ್ ಪೈ ಕುತ್ಕೊಂಡು ಬೆದರಿಕೆ ಹಾಕೋದು. ನಾವು ಬೇರೆ ರಾಜ್ಯಕ್ಕೆ ಹೋಗ್ತೀವಿ ಅನ್ನೋದು. ಹೋಗಿ ನೀವು ಯಾರು ಬೇಡ ಅಂದ್ರು? ಯಾರು ಕಟ್ಟಿಹಾಕಿದ್ರು. ಮಾನ್ಯತಾ ಟೆಕ್ ಪಾರ್ಕ್ ನ ಒಂದು ಕಂಪನಿಯಲ್ಲಿ ಶೂನ್ಯ ಕನ್ನಡಿಗರು. 70% ಹಿಂದಿಯವರು, ಉಳಿದವರು ಮಲೆಯಾಳಿ ಭಾಷಿಕರು ಕನ್ನಡಿಗರು ಇಲ್ವೇ ಇಲ್ಲ. ನೀವು ಬಂದು ಬೆಂಗಳೂರು ಉದ್ಧಾರ ಮಾಡ್ತೀವಿ ಅಂತೀರಿ. ಹಾಗಿದ್ರೇ ನಿಮ್ಮ ಬಿಹಾರ ಕೇರಳ ತಮಿಳುನಾಡು ಪಶ್ಚಿಮ ಬಂಗಾಳವನ್ನು ಮೊದಲು ಉದ್ಧಾರ ಮಾಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಯನಾ ಮೋಟಮ್ಮ ಅಕ್ರೋಶ ಅರ್ಥ ಆಗುತ್ತೆ, ಆದ್ರೆ ರಾಜೀನಾಮೆ ಪರಿಹಾರ ಅಲ್ಲ: ಪೊನ್ನಣ್ಣ
