– ಈ ಬಾರಿ ಇನ್ನಷ್ಟು ಉತ್ತಮ ಸಿಇಒ ಆಗಲಿದ್ದೇನೆ ಎಂದು ಭರವಸೆ
– ಅಪ್ಪುಗೆ ನೀಡಿ ಬರಮಾಡಿಕೊಂಡ ಮಹಿಳಾ ಉದ್ಯೋಗಿಗಳು
ವಾಷಿಂಗ್ಟನ್: ಚೀನಾದ ಸ್ಪೈ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆ ಎನ್ವಿಡಿಯಾ (Nvidia) ಕಂಪನಿಯ ಸಿಇಒ ಹಾಗೂ ಕಂಪನಿಯು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್ (Jensen Huang) ಅವರನ್ನ ಮತ್ತೆ ಅದೇ ಹುದ್ದೆಗೆ ನೇಮಿಸಲಾಗಿದೆ.
ಸಿಇಒ ಆಗಿ ಮರುನೇಮಕ ಆದ ಬಳಿಕ ಸಾಂಟಾ ಕ್ಲಾರಾದಲ್ಲಿರುವ ಪ್ರಧಾನ ಕಚೇರಿಗೆ ಮರಳಿದ ಜೆನ್ಸನ್ ಹುವಾಂಗ್ ಅವರಿಗೆ ಉದ್ಯೋಗಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. ಅವರು ಕಚೇರಿಗೆ ಆಗಮಿಸುತ್ತಿದ್ದಂತೆ ಉದ್ಯೋಗಿಗಳು ಚಪ್ಪಾಳೆ ತಟ್ಟಿ, ಅವರ ಹೆಸರನ್ನು ಕೂಗುತ್ತಾ ಸಂಭ್ರಮಿಸಿದ್ದಾರೆ. ಈ ವೇಳೆ ಕೆಲ ಮಹಿಳಾ ಉದ್ಯೋಗಿಗಳು ಹುವಾಂಗ್ಗೆ ಅಪ್ಪುಗೆ ನೀಡಿ ಬರಮಾಡಿಕೊಂಡಿದ್ದಾರೆ. ಈ ವಿಡಿಯೋಗಳು ಈ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Jensen Huang PULLED into LONG, TIGHT HUG by FEMALE EMPLOYEE moments after APOLOGIZING to NVIDIA STAFF https://t.co/eDfw3ZzRx6
— RT (@RT_com) November 23, 2026
ʻಈ ಬಾರಿ ಉತ್ತಮ ಸಿಇಒ ಆಗುತ್ತೇನೆʼ
ಉದ್ಯೋಗಿಗಳ ಪ್ರೀತಿಯ ಸ್ವಾಗತಕ್ಕೆ ಪ್ರತಿಕ್ರಿಯಿಸಿದ ಜೆನ್ಸನ್ ಹುವಾಂಗ್, ನೀವೆಲ್ಲರೂ ನನಗೆ ಮತ್ತೊಂದು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಈ ಬಾರಿ ನಾನು ಇನ್ನಷ್ಟು ಉತ್ತಮ ಸಿಇಒ ಆಗಲಿದ್ದೇನೆ ಎಂದು ಭರವಸೆ ನೀಡಿದರು. ಈ ವೇಳೆ ಜೆನ್ಸನ್ ತಮ್ಮ ಎದೆ ಮೇಲೆ ಕೈಯಿಟ್ಟು ಮಾತನಾಡಿದ್ದು, ಉದ್ಯೋಗಿಗಳು ತಮ್ಮ ಮೊಬೈಲ್ಗಳಲ್ಲಿ ಈ ಕ್ಷಣವನ್ನು ಸೆರೆಹಿಡಿದಿದ್ದಾರೆ.
ಈ ವೇಳೆ ʻWE Love You ಜೆನ್ಸನ್ʼ ಎಂದು ಕೂಗಿದ್ರೆ, ಮತ್ತೊಬ್ಬರು ʻಬನ್ನಿ, ಕೆಲಸ ಆರಂಭಿಸೋಣ!ʼ ಎಂದು ಹುರಿದುಂಬಿಸಿದರು. ಈ ನಡುವೆ ಉದ್ಯೋಗಿಗಳ ಗುಂಪು ನಿರಂತರವಾಗಿ ʻಜೆನ್ಸನ್! ಜೆನ್ಸನ್! ಜೆನ್ಸನ್!ʼ ಎಂದು ಜೈಕಾರ ಕೂಗುತ್ತಿತ್ತು.
ಈ ವೇಳೆ ಹಾಸ್ಯ ಚಟಾಕಿ ಹಾರಿಸಿದ ಜೆನ್ಸನ್, ಧನ್ಯವಾದಗಳು, ಇದು ನನ್ನ ಕೆಲಸದ ಮೊದಲ ದಿನ. ನನ್ನ ಬಳಿ ಕಂಪ್ಯೂಟರ್ ಇಲ್ಲ. ಹೀಗಾಗಿ ಐಟಿ ವಿಭಾಗದವರು ನನಗೆ ಹೊಸ ಪಿಸಿ ನೀಡಬೇಕಿದೆ ಎಂದು ಹೇಳಿ ನೆರೆದಿದ್ದವರಲ್ಲಿ ನಗೆ ಮೂಡಿಸಿದರು.
Scenes from Nvidia headquarters as Jensen comes back. The Nvidia employees wanted him back more than anything.
Grateful to the President, everyone in the administration, everyone who signed the petition, everyone who supported Jensen publicly, everyone who called the board, everyone on the board who fought for him, everyone.
This is why America is the greatest country on earth.
Every part of Jensen’s story would have only been possible in America.
And remember that Gandalf the White was even better than Gandalf the Grey in every way.
“Let’s get to work.” 🇺🇸
— Gavin Baker (@GavinSBaker) November 23, 2026
ಜೆನ್ಸನ್ ಹುವಾಂಗ್ ಅವರನ್ನು ಮರುನೇಮಕ ಮಾಡಿದ ಎನ್ವಿಡಿಯಾ ಮಂಡಳಿ
ಸೋಮವಾರ ಎನ್ವಿಡಿಯಾ ಮಂಡಳಿಯು ಜೆನ್ಸನ್ ಹುವಾಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಹಾಗೂ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಮರುನೇಮಕ ಮಾಡಿರುವುದಾಗಿ ಘೋಷಿಸಿತ್ತು.
ಮಂಡಳಿಯ ಹೇಳಿಕೆಯ ಪ್ರಕಾರ, ಹುವಾಂಗ್ ಅವರೊಂದಿಗೆ ಹಲವು ಸುತ್ತಿನ ಚರ್ಚೆ ಮತ್ತು ಸಭೆಗಳನ್ನು ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಅವರ ಪ್ರಾಮಾಣಿಕತೆ ಹಾಗೂ ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯದ ಬಗ್ಗೆ ಮಂಡಳಿ ತೃಪ್ತಿ ವ್ಯಕ್ತಪಡಿಸಿದ್ದು, ಮರುನೇಮಕಾತಿಗೆ ಸರ್ವಾನುಮತದ ಒಪ್ಪಿಗೆ ನೀಡಿದೆ.
ಇದೇ ನವೆಂಬರ್ 12ರಂದು ಜೆನ್ಸನ್ ಹುವಾಂಗ್ ಅವರು ಎನ್ವಿಡಿಯಾದ ಸಿಇಒ, ಅಧ್ಯಕ್ಷ ಮತ್ತು ನಿರ್ದೇಶಕರ ಮಂಡಳಿಯ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಅವರ ವೈಯಕ್ತಿಕ ನಡವಳಿಕೆಯು ಕಂಪನಿಯ ನೀತಿ ಸಂಹಿತೆ ಹಾಗೂ ಕೆಲಸದ ಸ್ಥಳದ ಮಾನದಂಡಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ಕಳವಳವನ್ನು ಕಂಪನಿಯ ಮಂಡಳಿ ವ್ಯಕ್ತಪಡಿಸಿತ್ತು.
