ಕೊಪ್ಪಳ: ಜಿಲ್ಲೆಯ ಶಾಲಾ ಮಕ್ಕಳಿಗೆ ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದ್ರೂ 20 ಸಾವಿರಕ್ಕೂ ಅಧಿಕ ಮಕ್ಕಳಿಗೆ ಶೂ, ಸಾಕ್ಸ್ (Shoe, School) ತಲುಪಿರಲಿಲ್ಲ. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ (Education Department) ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ ಮುಂದಾಗಿದೆ.
ಶಾಲಾ ಮಕ್ಕಳ ಮುಖದಲ್ಲಿ ಮಂದಹಾಸ. ಕೈ ಸೇರಿದ ಶೂ, ಸಾಕ್ಸ್ ನೋಡಿ ಮಕ್ಕಳ ಖುಷಿಗೆ ಪಾರವೇ ಇಲ್ಲ. ಆದ್ರೆ, ಇದೇ ಮಕ್ಕಳಿಗೆ ಸಿಗಬೇಕಿದ್ದ ಶೂ, ಸಾಕ್ಸ್ ವಿತರಣೆಯಲ್ಲಿ ವಿಳಂಬವಾಗಿತ್ತು. ಕೊಪ್ಪಳ (Koppal) ಜಿಲ್ಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಒಟ್ಟು 1 ಲಕ್ಷ 67 ಸಾವಿರ ವಿದ್ಯಾರ್ಥಿಗಳಿದ್ದಾರೆ. ಆದ್ರೆ, ಈ ಪೈಕಿ ಬರೋಬ್ಬರಿ 20 ಸಾವಿರದ 143 ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಯಾಗಿರಲಿಲ್ಲ. ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದರೂ ಮಕ್ಕಳಿಗೆ ಶೂ, ಸಾಕ್ಸ್ ಸಿಗದಿರುವ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿತ್ತು. ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರ ವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಕೊಪ್ಪಳದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಡಿಡಿಪಿಐ ಶೂ, ಸಾಕ್ಸ್ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಶೂ, ಸಾಕ್ಸ್ ವಿತರಣೆಗಾಗಿ ಮನವಿ ನೀಡಲು ಬಂದವರ ಮೇಲೆ ಸಚಿವ ಮಧು ಬಂಗಾರಪ್ಪ ದರ್ಪ? – ವಿಡಿಯೋ ವೈರಲ್!
ಕಳೆದ 3 ದಿನಗಳ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಕೊಪ್ಪಳಕ್ಕೆ ಭೇಟಿ ನೀಡಿದ್ದರು. ಆಗ ಎಸ್ಡಿಎಂಸಿ ಅಧ್ಯಕ್ಷ ದೇವರಾಜ ಕಿನ್ನಾಳ ಎಂಬುವರು ಮನವಿ ಸಲ್ಲಿಸಿದ್ದರು, ಆಗ ಸಚಿವ ಮಧು ಬಂಗಾರಪ್ಪ ಅವರ ಅನುಚಿತ ವತ9ನೆ ಮಾಡಿದ ವಿಡಿಯೋ ವೈರಲ್ ಆಗಿತ್ತು, ಇದನ್ನು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತು.
ಶೂ, ಸಾಕ್ಸ್ ವಿತರಣೆಯ ರಿಯಾಲಿಟಿ ಚೆಕ್ ಕೂಡ ಪಬ್ಲಿಕ್ ಟಿವಿ ನಡೆಸಿತ್ತು. ಜಿಲ್ಲೆಯ 20 ಸಾವಿರ ವಿದ್ಯಾರ್ಥಿಗಳಿಗೆ ವಿತರಣೆಯಾಗದಿರುವುದು ಬಯಲಾಗಿತ್ತು. ಪಬ್ಲಿಕ್ ವರದಿ ಬೆನ್ನಲ್ಲೆ ಎಚ್ಚೆತ್ತ ಶಿಕ್ಷಣ ಇಲಾಖೆ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ ಮುಂದಾಗಿದೆ. ವಿದ್ಯಾರ್ಥಿಗಳು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಹಾವೇರಿಯಲ್ಲಿ 14 ಗಂಟೆಗಳ ಮ್ಯಾರಥಾನ್ ಸಭೆ ಯಶಸ್ವಿ – ಪ್ರತಿಟನ್ ಕಬ್ಬಿಗೆ 3,225 ದರ ನಿಗದಿ
ಒಟ್ಟಾರೆ. ಪಬ್ಲಿಕ್ ಟಿವಿ ವರದಿಯ ಬೆನ್ನಲ್ಲೇ ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ವಿತರಣೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.ಇದನ್ನೂ ಓದಿ: VAO ಪರೀಕ್ಷೆಯಲ್ಲಿ 151 ಅಂಕ ಪಡೆದ ಕೇಸ್ – ಪ್ರಾಂಶುಪಾಲ ಸೇರಿ ಮೂವರು ಸಸ್ಪೆಂಡ್
