ಬಿಗ್ಬಾಸ್ (Bigg Boss) ಮನೆ ಇದೀಗ ಕಾಡಿನ ರೂಪ ಪಡೆದುಕೊಂಡಿದೆ. ಅದರಲ್ಲಿ ಅಧಿಕಾರದಲ್ಲಿರುವ ಇಬ್ಬರು.. ಓರ್ವ ಜೋಕರ್.. ಇದೀಗ ಬಿಗ್ಬಾಸ್ ಚಾಣಾಕ್ಷತೆಯಿಂದ ನಂಬಿಕೆಯ ಮುಖವಾಡ ಧರಿಸಿ, ದ್ರೋಹ ಬಗೆದು ಅಧಿಕಾರ ಪಡೆಯಲು ಗುಳ್ಳೆನರಿಯ (Jackal) ಟಾಸ್ಕ್ ಅನ್ನು ನೀಡುತ್ತಿದ್ದಾರೆ.
ಬಿಗ್ಬಾಸ್ 13ರ ಫಿನಾಲೆಗೆ ಇನ್ನೂ ಕೆಲವೇ ವಾರಗಳು ಬಾಕಿ. ಈ ಸಮಯದಲ್ಲಿ ಆಟ ಟಫ್ ಆಗೋದಂತೂ ಪಕ್ಕಾ. ಹೀಗಿರುವಾಗ ಈ ವಾರ ಬಿಗ್ಬಾಸ್ ನೀಡಿರುವ ಬಲು ರೋಚಕವಾಗಿದೆ. ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಮನೆಯವರ ಪೈಕಿ ಒಬ್ಬರು ತಮ್ಮ ಚಾಣಾಕ್ಷ ಯುಕ್ತಿಯನ್ನು ಉಪಯೋಗಿಸಿ, ನಂಬಿಕೆಯ ಮುಖವಾಡ ಧರಿಸಿ ಅಧಿಕಾರಿ ಪಡೆಯುವ ಅವಕಾಶವನ್ನು ಪಡೆಯುತ್ತಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬಗ್ಗೆ ಸಣ್ಣದಾಗಿ ಮಾತನಾಡಬೇಡಿ – ನಿಶ್ಚಲಾನಂದನಾಥ ಸ್ವಾಮೀಜಿ ವಿರುದ್ಧ ರೇವಣ್ಣ ವಾಗ್ದಾಳಿ
ಗುಳ್ಳೆನರಿ ಯಶಸ್ವಿ ಆಗುತ್ತಾ?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/hp17y08ptB
— Colors Kannada (@ColorsKannada) November 24, 2026
ಅದರಂತೆ ಬಿಗ್ಬಾಸ್ ಒಬ್ಬೊಬ್ಬರನ್ನೇ ಕನ್ಫೇಶನ್ ರೂಮ್ಗೆ ಕರೆದು, ಕಾಡಿನಲ್ಲಿ ತನ್ನ ಚಾಣಾಕ್ಷ ಯುಕ್ತಿಯನ್ನು ಉಪಯೋಗಿಸಿ, ನಂಬಿಕೆಯ ಮುಖವಾಡ ಧರಿಸಿ ಅಧಿಕಾರಿ ಪಡೆಯುವಲ್ಲಿ ಯಶಸ್ವಿಯಾಗುವ ಒಂದು ಪ್ರಾಣಿಯೆಂದರೆ ಅದು ಗುಳ್ಳೆನರಿ.. ಆ ಗುಳ್ಳೆನರಿ ಪಾತ್ರಧಾರಿ ನೀವು ಎನ್ನುತ್ತಾರೆ.
ಈ ಮನೆಯಲ್ಲಿ ಗುಳ್ಳೆನರಿ ತನ್ನ ಆಟವನ್ನು ಆರಂಭಿಸಿದ್ದು, ತನ್ನ ತಂಡವನ್ನು ಸೋಲಿಸುವುದು ಬಿಗ್ಬಾಸ್ ಅದಕ್ಕೆ ನೀಡುತ್ತಿರುವ ಮೊದಲ ಟಾಸ್ಕ್. ಯಾರಾಗ್ತಾರೆ ಆ ಗುಳ್ಳೆನರಿ, ಹೇಗೆ ಅಧಿಕಾರ ಪಡೆದುಕೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.ಇದನ್ನೂ ಓದಿ: ಮೈಕೊರೆವ ಚಳಿಯಲ್ಲಿ ಹೋರಾಟ; ʻಆಶಾʼಗಳಿಗೆ ಆರೋಗ್ಯ ಸಮಸ್ಯೆ ಆತಂಕ – ಈವರೆಗೆ 18 ಮಂದಿ ಅಸ್ವಸ್ಥ
