ಬಾಗಲಕೋಟೆ: ಪ್ರಿಯಕರ (Lover) ಕರೆ ಮಾಡದೇ ಇದ್ದಿದ್ದಕ್ಕೆ ಹಾಗೂ ಕರೆ ಮಾಡಿದ್ರೂ ಸ್ವೀಕರಿಸದೇ ಇದ್ದಿದ್ದಕ್ಕೆ ಮನನೊಂದು ಎರಡು ಮಕ್ಕಳ ತಾಯಿಯೊಬ್ಬಳು ನೇಣಿಗೆ ಶರಣಾದ ಘಟನೆ ಬಾಗಲಕೋಟೆಯ (Bagalkote) ಬಾಂಬೆ ಕಾಲೋನಿಯಲ್ಲಿ ನಡೆದಿದೆ.
ಮೆಹಬೂಬ್ ಬಿ (27) ನೇಣಿಗೆ ಶರಣಾದ ಮಹಿಳೆ. ಆತ್ಮಹತ್ಯೆಗೂ ಮುನ್ನ, ನೇಣು ಬಿಗಿದುಕೊಳ್ಳುವುದನ್ನು ವಿಡಿಯೋ ಮಾಡಿ, ಪ್ರಿಯಕರನಿಗೆ ಕಳಿಸಿದ್ದಾಳೆ. ಅಲ್ಲದೇ ಫೋನ್ ಮಾಡದೆ ಇದ್ದರೆ ನೇಣು ಹಾಕಿಕೊಂಡು ಸಾಯುತ್ತೇನೆ. ನಿನಗೂ ಹಾಗೂ ಎಲ್ಲರಿಗೂ ವಿಡಿಯೋ ಕಳಿಸುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದು ಅಡಿಯೊ ಮೆಸೇಜ್ ಕೂಡ ಮಾಡಿದ್ದಳು. ಇದನ್ನೂ ಓದಿ: ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನ
ಮಹಿಳೆ (Woman) ಯುವಕನೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಕೆಲ ದಿನಗಳಿಂದ ಪ್ರಿಯಕರ ಕರೆ ಮಾಡುತ್ತಿರಲಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಬಾಗಲಕೋಟೆಯ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರೀಲ್ಸ್ ವಿಚಾರಕ್ಕೆ ಗಲಾಟೆ; ಬೆಂಗಳೂರಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

