– ಕಸದ ಬ್ಲಾಕ್ ಸ್ಪಾಟ್ ತೆರವು ಕಾರ್ಯಾಚರಣೆ ಸ್ಥಳದಲ್ಲಿ ಕಣ್ಣು; ಮಾರ್ಷಲ್‌ಗಳ ನಿಯೋಜನೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಜಿಬಿಎ (GBA) ಮತ್ತೊಂದು ಶಾಕ್ ನೀಡಿದೆ. ಸಿಕ್ಕಸಿಕ್ಕಲ್ಲಿ ಕಸ ಎಸೆದರೆ ಬರೀ ದಂಡ ಅಲ್ಲ, ಕೇಸ್ ಕೂಡ ಬೀಳುತ್ತೆ. ಕಸದ ಬ್ಲಾಕ್ ಸ್ಪಾಟ್ ತೆರವು ಆದ ಮೇಲೆ ಮತ್ತೆ ಕಸ ಹಾಕಿದರೆ ಪ್ರಕರಣ ದಾಖಲಾಗುತ್ತದೆ. ಈಗಾಗಲೇ ಕಸ ಕ್ಲೀನ್ ಮಾಡಿದ ಜಾಗದಲ್ಲಿ ಕಸ ಹಾಕಿದ ನಾಲ್ಕು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಕಸ ಸ್ವಚ್ಛತಾ ಕಾರ್ಯಾಚರಣೆ ಜಿಬಿಎ ವ್ಯಾಪ್ತಿಯಲ್ಲಿ ನಡೆಯುತ್ತಾ ಇದೆ. ಕಸ ಬ್ಲಾಕ್ ಸ್ಪಾಟ್ ಇರುವ ಕಡೆ ಕಸ ತೆಗೆಯುವಂತಹ ಕೆಲಸ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ಮಾಡುತ್ತಿದೆ. ಕಸ ತೆರವು ಮಾಡಿದ ಜಾಗದಲ್ಲಿ ಮತ್ತೆ ಕಸ ಎಸೆದರೆ ಅಂತಹವರ ಮೇಲೆ ಪೊಲೀಸ್ ಕೇಸ್ ಮಾಡಿ ಎಫ್‌ಐಆರ್ ದಾಖಲು ಮಾಡಲಿದ್ದಾರೆ. ಜೊತೆಗೆ ಬ್ಲಾಕ್ ಸ್ಪಾಟ್ ತೆರವು ಆದ ಜಾಗದಲ್ಲಿ ಮಾರ್ಷಲ್ ಅವರು ಗಸ್ತು ತಿರುಗುತ್ತಾ ಇದ್ದು, ಕಸ ಎಸೆದಿದ್ದು ಪತ್ತೆಯಾದರೆ ಪೊಲೀಸ್ ಕೇಸ್ ಆಗಲಿದೆ. ಇದನ್ನೂ ಓದಿ: RTO ಅಧಿಕಾರಿಗಳ ವಿಶೇಷ ಕಾರ್ಯಾಚರಣೆ – 390 ಖಾಸಗಿ ಶಾಲಾ ವಾಹನಗಳು ಸೀಜ್
ಬೆಂಗಳೂರಿನ ಉತ್ತರ ನಗರಪಾಲಿಕೆಯ ಸರ್ವಜ್ಞ ನಗರ ವಾರ್ಡ್ ಸಂಖ್ಯೆ 26 ರ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಕಸವನ್ನ ತೆರವು ಮಾಡಲಾಗಿತ್ತು. ರಸ್ತೆಯನ್ನ ಸೌಂದರ್ಯೀಕರಣ ಮಾಡಲಾಗಿತ್ತು. ರಾತ್ರಿ ವೇಳೆ ಮಾರ್ಷಲ್‌ಗಳು ಗಸ್ತು ತಿರುಗುವಾಗ ಕಸ ತೆಗೆದಿರೋ ಜಾಗದಲ್ಲಿ ನಾಲ್ಕು ಮಂದಿ ಕಸ ಎಸೆದಿರೋದು ಪತ್ತೆಯಾಗಿದೆ. ದಂಡ ಕಟ್ಟಿ ಅಂದರೆ ದಂಡ ಕಟ್ಟಲು ನಿರಾಕರಣೆ ಮಾಡಿದ್ದಾರೆ. ಹೀಗಾಗಿ, ನಾಲ್ಕು ಜನರ ಮೇಲೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದು, ಎಫ್‌ಐಆರ್ ಕೂಡ ಹಾಕಲಾಗಿದೆ.
ಶಾಶ್ವತವಾಗಿ ಕಸದ ಬ್ಲಾಕ್ ಸ್ಪಾಟ್‌ಗಳನ್ನ ತೆರವುಗೊಳಿಸಿ ಕಸ ಇದ್ದ ಜಾಗವನ್ನ ಸೌಂದರ್ಯೀಕರಣಗೊಳಿಸಿರುವ ಜಾಗದಲ್ಲಿ ಕಸ ಎಸೆದರೆ ದಂಡದ ಜೊತೆ ಕೇಸ್ ಬುಕ್ ಆಗೋದು ಫಿಕ್ಸ್ ಆಗಿದ್ದು, ಜನ ಎಚ್ಚರಿಕೆ ವಹಿಸಬೇಕಿದೆ. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿವಾದ; ಸರ್ಕಾರದ ವಿರುದ್ದ ಹೈಕೋರ್ಟ್ ಮೊರೆ ಹೋದ ರೈತರು..!
