ಆಗಸ್ಟ್‌ನಲ್ಲಿ ಥಿಯೇಟರ್ ಮೆರವಣಿಗೆ ಹೋಗೋಕೆ ರೆಡಿಯಾಗಿದ್ದಾರೆ ರಾಕಿಂಗ್ ಸ್ಟಾರ್ ಯಶ್ (Yash). ಈಗಾಗಲೇ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಸಿನಿಮಾದ ಎರಡು ಹಾಡುಗಳು, ಟೀಸರ್ ಮತ್ತು ಪಾತ್ರಗಳ ಪರಿಚಯದ ಪೋಸ್ಟರ್‌ಗಳು ಬಿಡುಗಡೆ ಆಗಿ ಸಖತ್ ಕ್ಯೂರಿಯಾಸಿಟಿ ಮೂಡಿಸಿವೆ. ಇದೀಗ ಮತ್ತೊಂದು ಹೊಸ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅದನ್ನು ಕಂಡ ಫ್ಯಾನ್ಸ್ ಚಿಂದಿ ಅಂತಿದ್ದಾರೆ.
ಬಿಡುಗಡೆಯಾದ ಪೋಸ್ಟರ್‌ನಲ್ಲಿ ರಕ್ತಸಿಕ್ತ ಬೆರಳುಗಳು ಮತ್ತು ಬೆರಳುಗಳ ಮಧ್ಯ ಸಿಗರೇಟು ಹಿಡಿದಿರುವ ಯಶ್ ಅವರನ್ನು ಕಾಣಬಹುದು. ಈ ಸಿನಿಮಾದಲ್ಲಿ ಯಶ್ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಇದು ರಾಯನ ಲುಕ್ ಎಂದೇ ಅಭಿಮಾನಿಗಳು ಗುರುತಿಸುತ್ತಿದ್ದಾರೆ. ಆ ಲುಕ್‌ಗೆ ಅನೇಕರು ಫಿದಾ ಆಗಿದ್ದಾರೆ. ಇದನ್ನೂ ಓದಿ: ಸರ್ಜರಿಗೆ ಒಳಗಾಗಲಿದ್ದಾರೆ ಸ್ಟಾರ್ ನಟ ರಾಮ್ ಚರಣ್
ಗೀತು ಮೋಹನದಾಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಟಾಕ್ಸಿಕ್ (Toxic) ಸಿನಿಮಾ ಆಗಸ್ಟ್ ಕೊನೆಯ ವಾರದಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಮತ್ತೆರಡು ಹಾಡುಗಳನ್ನೂ ಬಿಡುಗಡೆ ಮಾಡುತ್ತಾರಂತೆ ಯಶ್. ಜೊತೆಗೆ ಆಗಸ್ಟ್ 14ರಂದು ಬೆಂಗಳೂರಿನಲ್ಲಿ ಮೆಗಾ ಇವೆಂಟ್ ಅನ್ನೂ ಆಯೋಜನೆ ಮಾಡಲಾಗುತ್ತಿದೆ.
