ಒಟ್ಟಾವೋ: ಕೆನಡಾದ (Canada) ಟೊರೊಂಟೊದಲ್ಲಿ 26 ವರ್ಷದ ಭಾರತೀಯ ಮೂಲದ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ನವನೀತ್ ಕೌರ್ ಹತ್ಯೆಯಾದ ಯುವತಿ. ಹಂಬರ್‌ವುಡ್ ಬೌಲೆವಾರ್ಡ್ ಮತ್ತು ರೆಕ್ಸ್‌ಡೇಲ್ ಬೌಲೆವಾರ್ಡ್ ಬಳಿ ಗುಂಡಿನ ದಾಳಿಗೆ ಒಳಗಾಗಿ ಯುವತಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಅಮೆರಿಕದ ಸಿಯಾಟಲ್ ಆಹಾರ ಉತ್ಸವದಲ್ಲಿ ಗುಂಡಿನ ದಾಳಿ: ಇಬ್ಬರು ಸಾವು
ಕೌರ್ ಹತ್ಯೆಗೆ ಸಂಬಂಧಿಸಿದಂತೆ ಟೊರೊಂಟೊ ಪೊಲೀಸರು ಬ್ರಾಂಪ್ಟನ್‌ನ 37 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶರಣಜಿತ್ ಸಿಂಗ್ ಎಂದು ಗುರುತಿಸಲಾದ ಶಂಕಿತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.
ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸಿದ್ದ. ಈ ವೇಳೆ ಆತ ಯುವತಿಯನ್ನು ಮಾತನಾಡಿಸಿದ್ದಾನೆ. ಇಬ್ಬರ ನಡುವೆ ಒಂದಷ್ಟು ಹೊತ್ತು ಮಾತುಕತೆಯಾಯಿತು. ಈ ವೇಳೆ ಯುವತಿಗೆ ಆರೋಪಿ ಶೂಟ್ ಮಾಡಿ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 114 ರಫೇಲ್ ಜೆಟ್ ಖರೀದಿಗೆ ಭಾರತ ವಿನಂತಿ – ಬಿಗ್ ಡೀಲ್‌ಗೆ ಆಗಸ್ಟ್‌ನಲ್ಲೇ ಫ್ರಾನ್ಸ್‌ನಿಂದ ಸಿಗುತ್ತಾ ಒಪ್ಪಿಗೆ?
ಮಾರಕ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಶಂಕಿತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮಾಹಿತಿ ಇರುವ ಯಾರಾದರೂ ಪೊಲೀಸರನ್ನು ಅಥವಾ ಕ್ರೈಮ್ ಸ್ಟಾಪರ್ಸ್ ಅನ್ನು ಸಂಪರ್ಕಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ.
