– ಯಾರಿಗೂ ತಿಳಿಯದಂತೆ ಶವ ಹೂತು ಹಾಕಿದ್ದ ಆರೋಪಿಗಳು
ಚಿಕ್ಕಮಗಳೂರು: ಕಾಡುಹಂದಿ ಬೇಟೆಗೆ ಇರಿಸಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಕಡೂರು (Kadur) ತಾಲೂಕಿನ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕರಿಯಪ್ಪ (52) ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ ವ್ಯಕ್ತಿ. ಈ ಸಂಬಂಧ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ ಎಂಬ ಮೂವರು ಆರೋಪಿಗಳನ್ನು ಯಗಟಿ ಪೊಲೀಸರು (Yagati Police) ಬಂಧಿಸಿದ್ದಾರೆ. ಆರೋಪಿಗಳು ಕಾಡುಹಂದಿ ಬೇಟೆಗೆ ಜಮೀನಿನಲ್ಲಿ ವಿದ್ಯುತ್ ತಂತಿ ಅಳವಡಿಸಿದ್ದರು. ಆ ಸ್ಥಳಕ್ಕೆ ಹೋಗಿದ್ದ ಕರಿಯಪ್ಪ ವಿದ್ಯುತ್ ಶಾಕ್‌ಗೆ ಬಲಿಯಾಗಿದ್ದರು. ಈ ವಿಚಾರ ಯಾರಿಗೂ ಗೊತ್ತಾಗದಂತೆ ಆರೋಪಿಗಳು ಶವವನ್ನು ಜಮೀನಿನಲ್ಲಿ ಹೂತು ಹಾಕಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹೊತ್ತಿ ಉರಿದ ಗ್ಯಾರೇಜ್ – 20ಕ್ಕೂ ಹೆಚ್ಚು ಕಾರು, 8 ಆಟೋಗಳು ಸುಟ್ಟು ಕರಕಲು
ಕರಿಯಪ್ಪ ಮನೆಯಿಂದ ತೆರಳಿದ್ದವರು ವಾಪಸ್ ಆಗದೇ ಇದ್ದಾಗ ಕುಟುಂಬಸ್ಥರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದರು. ಅವರು ಪತ್ತೆಯಾಗದೇ ಇದ್ದಾಗ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ಜಮೀನಿನ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಕರಿಯಪ್ಪ ಅವರ ಓಡಾಟ ಪತ್ತೆಯಾಗಿತ್ತು. ಕೆಲ ಗಂಟೆಗಳ ಬಳಿಕ ಅದೇ ಮಾರ್ಗದಲ್ಲಿ ಮತ್ತೋರ್ವ ವ್ಯಕ್ತಿ ಓಡಾಡಿದ್ದು ಸೆರೆಯಾಗಿತ್ತು. ಪೊಲೀಸರು ಆ ವ್ಯಕ್ತಿಯನ್ನ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತರೀಕೆರೆ ತಹಶೀಲ್ದಾರ್ ಎದುರು ಹೂತಿರುವ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಸ್ಥಳಕ್ಕೆ ಯಾರೂ ಹೋಗದಂತೆ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
