ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru) ಟ್ರಾಫಿಕ್ ದಟ್ಟಣೆ ನಿವಾರಣೆಗೆ ಎಲಿವೇಟೆಡ್ ಕಾರಿಡಾರ್‌ಗಳ(Elevated Corridors) ನಿರ್ಮಾಣಕ್ಕೆ ಜಿಬಿಎ ಮಹತ್ವದ ಹೆಜ್ಜೆ ಇಟ್ಟಿದೆ.
ಒಟ್ಟು 9 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್,
ಸಿರ್ಸಿ ಸರ್ಕಲ್‌ನಿಂದ ನಾಯಂಡಹಳ್ಳಿವರೆಗೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕಾರಿಡಾರ್ ನಿರ್ಮಾಣವಾಗಲಿದೆ.
ಒಟ್ಟು 29.1 ಕಿಲೋಮೀಟರ್ ಉದ್ದದ ಈ ಯೋಜನೆ ನಗರದ ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳ ಮೇಲಿನ ಒತ್ತಡ ಕಡಿಮೆ ಮಾಡುವ ನಿರೀಕ್ಷೆಯಿದೆ. ಜಿಬಿಎಯ ಎರಡನೇ ಸಭೆಯಲ್ಲಿ ಚರ್ಚೆಯಾಗಿ ಅನುಮೋದನೆ ಪಡೆದಿರುವ ಈ ಯೋಜನೆ, ಬೆಂಗಳೂರಿನ ಸಂಚಾರ ವ್ಯವಸ್ಥೆಗೆ ಹೊಸ ರೂಪ ನೀಡುವ ಗುರಿ ಹೊಂದಿದೆ.
ಎಲ್ಲಿ ಎಲಿವೇಟೆಡ್ ಕಾರಿಡಾರ್?
1. ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ – ಸಿಲ್ಕ್ ಬೋರ್ಡ್ – 5.2 ಕಿ.ಮೀ
2. ಸಿರ್ಸಿ ಸರ್ಕಲ್ – ನಾಯಂಡಹಳ್ಳಿ – 5 ಕಿ.ಮೀ
3. ಮಿನರ್ವಾ – ಹಡ್ಸನ್ ಸರ್ಕಲ್ – 2.7 ಕಿ.ಮೀ
4. ಶೂಲೆ ಸರ್ಕಲ್ – ಹೊಸೂರು ರಸ್ತೆ – 7.4 ಕಿ.ಮೀ
5. ಪೈಪ್‌ಲೈನ್ ರಸ್ತೆ – ಲಾಗರ್ / ಮಹಾಲಕ್ಷ್ಮಿಲೇಔಟ್ – 2.0 ಕಿ.ಮೀ
6. ಕೋಣನಕುಂಟೆ ಕ್ರಾಸ್ – ಕನಕಪುರ ರಸ್ತೆ – 0.9 ಕಿ.ಮೀ
7. ರಘುವನಹಳ್ಳಿ ಜಂಕ್ಷನ್ ಕನಕಪುರ ರಸ್ತೆ – 0.8 ಕಿ.ಮೀ
8. ಯಲಹಂಕ ಪೊಲೀಸ್ ಠಾಣೆ ಟು ಕೋಗಿಲು ಕ್ರಾಸ್ ಏರ್‌ಪೋರ್ಟ್ -1.8 ಕಿ.ಮೀ
9. ತುಮಕೂರು ರಸ್ತೆ ಟು ಎಂಇಐ ಜಂಕ್ಷನ್ – 0.5 ಕಿ.ಮೀ

