ಹಾಸನ: ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಸಹಿತ ಸಾಧಾರಣ ಮಳೆಯಾಗುತ್ತಿದೆ (Rain). ಈ ಮಧ್ಯೆ ಬಿರುಗಾಳಿಗೆ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಘಟನೆ ಹಾಸನ (Hassan) ತಾಲ್ಲೂಕಿನ, ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ತಾಂತಯ್ಯ ಎಂಬುವವರು ಕುಟುಂಬಸ್ಥರೊಂದಿಗೆ ತಮ್ಮ ಜಮೀನಿನ ಬಳಿ ಮನೆಯಲ್ಲಿ ವಾಸವಾಗಿದ್ದು ಬಿರುಗಾಳಿ ಸಹಿತ ಮಳೆಗೆ ಮನೆ ಮೇಲೆ ಮರ ಬಿದ್ದಿದೆ. ಇದನ್ನೂ ಓದಿ: ಮುಂಬೈನಲ್ಲಿ ಮಹಾ ಮಳೆಗೆ ಕುಸಿದ 4 ಅಂತಸ್ತಿನ ಕಟ್ಟಡ – 6 ಮಂದಿ ದುರ್ಮರಣ

ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಸದ ಮನೆಗೆ ಹಾನಿಯಾಗಿದ್ದರುವುದರಿಂದ ಬಡ ಕುಟುಂಬ ಕಂಗಾಲಾಗಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಎಲ್ ನಿನೋ ಎಫೆಕ್ಟ್ ಮಳೆಗಷ್ಟೇ ಅಲ್ಲ – ವಸ್ತುಗಳ ಮೇಲೂ ಬೀಳುತ್ತೆ.. ಜೇಬಿಗೆ ಕತ್ತರಿ ಹಾಕುತ್ತೆ ಯಾಕೆ?
