ಮುಂಬೈ: ಕಳೆದ ತಿಂಗಳು ಬಾಲಿವುಡ್ ಲೈಲಾ ಸನ್ನಿ ಲಿಯೋನ್ ಮತ್ತು ಆಕೆಯ ಪತಿ ವೆಬರ್ ಹೆಣ್ಣು ಮಗುವೊಂದನ್ನು ದತ್ತು ಪಡೆದುಕೊಂಡು ಎಲ್ಲರನ್ನು ಚಕಿತಗೊಳಿಸಿದ್ದರು. ಸನ್ನಿ ಮಗುವನ್ನು ದತ್ತು ಪಡೆದುಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ ಅದೇ ಫೋಟೋ ಇಂದು ಭಾರೀ ಚರ್ಚೆಗೊಳಗಾಗಿದೆ.
ಮಗುವನ್ನು ದತ್ತು ಪಡೆದ ಸನ್ನಿಯನ್ನು ಎಲ್ಲರೂ ಟ್ವಿಟರ್‍ನಲ್ಲಿ ಹೊಗಳುತ್ತಿದ್ದಾರೆ. ಹಾಗೆಯೇ ಮಗು ದತ್ತು ಸಂಪನ್ಮೂಲ ಸಂಸ್ಥೆ(ಸಿಎಆರ್‍ಎ)ಯ ಕಮೆಂಟ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಮಗುವಿನ ಚಿತ್ರಕ್ಕೆ ಕಮೆಂಟ್ ಮಾಡುವಾಗ ಸಿಎಆರ್‍ಎ ಜುವೆನೈಲ್ ಜಸ್ಟಿಸ್ (ಜೆಜೆ) ಕಾನೂನನ್ನು ಉಲ್ಲಂಘನೆ ಮಾಡಿದೆ.
Advertisement
ಸಿಎಆರ್‍ಎ ಹೇಳಿದ್ದೇನು?:
ಮಗುವಿನ ಬಣ್ಣ, ಹಿನ್ನೆಲೆ ಹಾಗೂ ಆರೋಗ್ಯದ ಬಗ್ಗೆ ಯೋಚಿಸದೆ ಸನ್ನಿ ಲಿಯೋನ್ ಸಂತೋಷದಿಂದ ಮಗುವನ್ನು ದತ್ತು ಪಡೆದಿದ್ದಾರೆ. ಅವರು ಸಂಸ್ಥೆಯ ಯಾವುದೇ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲಾ ಪೋಷಕರಂತೆ ಸರದಿಯಲ್ಲಿ ನಿಂತು ಮಗುವನ್ನು ದತ್ತು ಪಡೆದುಕೊಂಡಿದ್ದನ್ನು ನಾವು ಗೌರವಿಸುತ್ತೇವೆ ಎಂದು ಮಗು ದತ್ತು ಸಂಪನ್ಮೂಲ ಸಂಸ್ಥೆಯ ಸಿಇಒ ದೀಪಕ್ ಕುಮಾರ್ ತಿಳಿಸಿದ್ದರು.
Advertisement
Advertisement
ಜುವೆನೈಲ್ ಜಸ್ಟಿಸ್ (ಜೆಜೆ) ಕಾನೂನಿನ ಪ್ರಕಾರ ಒಂದು ಹೆಣ್ಣು ಮಗುವಿನ ಬಣ್ಣ, ಆರೋಗ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುವುದು ತಪ್ಪಾಗುತ್ತದೆ. ಈ ಸಂಬಂಧ ಸ್ಟಾರ್ ಚೈಲ್ಡ್ ಸುರಕ್ಷಾ ಸಮಿತಿ ಸಿಎಆರ್‍ಎ ಸಂಸ್ಥೆಯ ವಿರುದ್ಧ ರಾಷ್ಟ್ರೀಯ ಆಯೋಗ ರಕ್ಷಣೆ ಹಾಗೂ ಮಕ್ಕಳ ಸಚಿವಾಲಯ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯಲ್ಲಿ ದೂರನ್ನು ದಾಖಲಿಸಿದೆ.
Advertisement
ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆಯ ಸಚಿವೆ ಮನೇಕಾ ಗಾಂಧಿ ಜೆಜೆ ಕ್ರಮವನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಿಎಆರ್‍ಎ ಅಳಿಸಿದ ಆಕ್ಷೇಪಾರ್ಹ ಟ್ವೀಟ್ ಸಹ ಸಿಕ್ಕಿದೆ ಎಂದು ರಾಷ್ಟ್ರೀಯ ಆಯೋಗ ರಕ್ಷಣೆಯ ಸದಸ್ಯರಾದ ಯಶ್‍ವಂತ್ ಜೆನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಸಮೂಹ `ಸನ್ನಿ’ – ಸನ್ನಿ ಲಿಯೋನ್ ನೋಡಲು ಮುಗಿಬಿದ್ದ ಲಕ್ಷ-ಲಕ್ಷ ಜನ
ಕಳೆದ ತಿಂಗಳು ಸನ್ನಿ ಮತ್ತು ವೆಬರ್ ಮಗುವನ್ನು ದತ್ತು ಪಡೆದುಕೊಂಡು ನಿಶಾ ಕೌರ್ ವೆಬರ್ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಒದಿ: ಸನ್ನಿ ಬಗ್ಗೆ ನಿಮಗೆ ಗೊತ್ತಿರದ 13 ಸಂಗತಿಗಳು ಇಲ್ಲಿವೆ
Pic : @SunnyLeone enjoying every moment of motherhood with daughter #Nisha pic.twitter.com/XbCO7nunXu
— Ravindra Gautam (@RavindraGautam_) August 22, 2017
#JioMami Sunny Leone’s Picture With Her Adopted Daughter Stirs A Controversy! https://t.co/Emiamlr4i7 pic.twitter.com/HIITRm7dJ8
— Melanie Biermann (@MelanieBierman) August 24, 2017
Sunny Leone’s Daughter Nisha Playing With Father Daniel Weber | LehrenTV https://t.co/uolvsb4BSF via @YouTube
— Chaitanya (@justchintus) August 24, 2017
Isn't she the cutest addition to the family!https://t.co/yZOJflZpfK
— @zoomtv (@ZoomTV) August 19, 2017
So #happy for @sunnyleone and #danielweber who have welcomed into their lives a little #angel ,… https://t.co/BNtSkp95Ij
— Sherlyn Chopra (शर्लिन चोपड़ा)???????? (@SherlynChopra) July 20, 2017
Thank you so much! So sweet of you! https://t.co/YjCwhm5UZl
— Sunny Leone (@SunnyLeone) July 20, 2017