ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ರಣವೀರ್ ಸಿಂಗ್ (Deepika Ranveer Singh) ಸ್ಟಾರ್ ದಂಪತಿ ಹೊಸ ಮನೆಯ ವಿನ್ಯಾಸ ಪರೀಕ್ಷಿಸುತ್ತಿರುವ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ(Bandra) ಈ ಸ್ಟಾರ್ ದಂಪತಿ 119 ಕೋಟಿ ರೂ. ಬೆಲೆ ಬಾಳುವ ಬೀಚ್ ವೀವ್ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಈಗದರ ವಿನ್ಯಾಸದ ಕಾರ್ಯಗಳು ನಡೆಯುತ್ತಿದೆ. ಈ ವೇಳೆ ಮನೆಯ ಬಾಲ್ಕನಿಯಲ್ಲಿ ನಿಂತು ಸಮುದ್ರದ ವೀವ್ ನೋಡ್ತಿರೋ ವೇಳೆ ಇಬ್ಬರೂ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಗರ್ಭಿಣಿ ದೀಪಿಕಾ ಬೇಬಿ ಬಂಪ್ ಕಾಣಿಸುತ್ತಿದೆ. ಬಿಳಿ ಬಣ್ಣದ ಕ್ಯಾಶುವಲ್ ಡ್ರೆಸ್‌ನಲ್ಲಿ ದೀಪಿಕಾ ಕಾಣಿಸ್ಕೊಂಡಿದ್ದಾರೆ.
ಬಾಂದ್ರಾದಲ್ಲಿ ಕನಸಿನ ಮನೆ ನಿರ್ಮಿಸಿಕೊಂಡಿರುವ ದೀಪ್‌ವೀರ್ ದಂಪತಿ ಸದ್ಯಕ್ಕಿನ್ನೂ ಆ ಮನೆಯಲ್ಲಿ ವಾಸವಿಲ್ಲ, ವಿನ್ಯಾಸಗೊಳಿಸುತ್ತಿದ್ದಾರೆ. ಬಹುಶಃ ಎರಡನೇ ಮಗು ಜನಿಸಿದ ಬಳಿಕ ತಮ್ಮಿಬ್ಬರು ಮಕ್ಕಳೊಂದಿಗೆ ಹೊಸ ಮನೆ ಪ್ರವೇಶಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ವೃತ್ತಿ ಜೊತೆ ವೈಯಕ್ತಿಕ ಬದುಕನ್ನೂ ಸಮದೂಗಿಸಿಕೊಂಡು ಹೋಗ್ತಿದ್ದಾರೆ ದೀಪಿಕಾ. ಎರಡನೇ ಮಗುವಿನ ಗರ್ಭವತಿ ದೀಪಿಕಾ ಈ ಬಾರಿ ಇದುವರೆಗೂ ಕ್ಯಾಮೆರಾ ಮುಂದೆ ತಮ್ಮ ಬೇಬಿ ಬಂಪ್ ಪ್ರದರ್ಶಿಸಿರಲಿಲ್ಲ. ಆದರೀಗ ಅಭಿಮಾನಿಯೊಬ್ಬರು ಸೆರೆ ಹಿಡಿದ ವೀಡಿಯೋದಲ್ಲಿ ಬೇಬಿಬಂಪ್ ಲುಕ್ ರಿವೀಲ್ ಆಗಿದೆ.
