ಬೆಂಗಳೂರು: ರಾಜ್ಯದಲ್ಲಿ ನಡೆದ ನಕಲಿ ಮೆಡಿಸಿನ್ ದಂಧೆ (Fake Medicine) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್ಪಿನ್ ಪ್ರಶಾಂತ್ನನ್ನು ದೆಹಲಿ ಪೊಲೀಸರು (Delhi Police) ವಶಕ್ಕೆ ಪಡೆದಿದ್ದಾರೆ.
ಔಷಧ ನೀಡುವುದಾಗಿ ಹೇಳಿ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಎರಡು ಕೋಟಿ ರೂಪಾಯಿ ವಂಚಿಸಿದ ಆರೋಪ ಪ್ರಶಾಂತ್ ಮೇಲಿದೆ. ಈ ಸಂಬಂಧ ದೆಹಲಿಯ ಮೋತಿಲಾಲ್ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ದಿನದಿಂದಲೂ ಪೊಲೀಸರು ಪ್ರಶಾಂತ್ಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಎಸ್ಐಟಿ ಅಧಿಕಾರಿಗಳು ಆತನನ್ನು ಬಂಧಿಸಿದ ಬೆನ್ನಲ್ಲೇ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಇಂದು ಸಂಜೆ ಬ್ಲ್ಯಾಕ್ಔಟ್ ಮಾಕ್ ಡ್ರಿಲ್; 2 ನಿಮಿಷ ಸೈರನ್ ಮೊಳಗಿಸಲು ಸಿದ್ಧತೆ
ದೆಹಲಿಯ ಮೋತಿಲಾಲ್ ಬಾಗ್ ಪೊಲೀಸರು ಪ್ರಶಾಂತ್ನನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದು, ಎರಡು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬರದ ನಡುವೆ ಗದಗ ಡಿಸಿ ಅದ್ಧೂರಿ ಪಾರ್ಟಿ – ಜಾನಪದ ಹಾಡಿಗೆ ಸಿಬ್ಬಂದಿ ಜೊತೆ ಸ್ಟೆಪ್; ಜನಾಕ್ರೋಶ
