ಬೆಂಗಳೂರು: ಗೋಲ್ಡ್ (Gold) ಖರೀದಿಗೆ ಇದು ಗೋಲ್ಡನ್ ಟೈಂ, ಜನವರಿ ಬಳಿಕ ಮತ್ತೆ ಚಿನ್ನದ ದರ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ (Shree Sai Gold Palace) ಮಾಲೀಕರು ಹಾಗೂ ಕರ್ನಾಟಕ ಗೋಲ್ಡ್ ಅಸೋಸಿಯೇಶನ್ ಅಧ್ಯಕ್ಷ ಡಾ.ಟಿ ಎ ಶರವಣ (TA Sharavana) ಗ್ರಾಹಕರಿಗೆ ಕರೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋಲ್ಡ್ ಖರೀದಿಗೆ ಇದು ಗೋಲ್ಡನ್ ಟೈಮ್. 10 ತಿಂಗಳಲ್ಲಿ ಇದೇ ಮೊದಲ ಚಿನ್ನದ ಬೆಲೆ ಇಷ್ಟು ಕಡಿಮೆಯಾಗಿದೆ. ಡಿಸೆಂಬರ್ 9 ರಂದು ಯುಎಸ್ ಫೆಡರಲ್ (ಫೆಡ್) ಸಭೆಯಲ್ಲಿ ಡಿಪಾಸಿಟ್ ದರ ಹೆಚ್ಚಳದ ಇಂಟರೆಸ್ಟ್ ರೇಟ್ ನಿರ್ಧಾರವಾಗಲಿದೆ. ಡಿಸೆಂಬರ್-13 ರಂದು ಈ ಬಗ್ಗೆ ತೀರ್ಮಾನವಾಗಲಿದೆ. ಒಂದು ವೇಳೆ ಬಡ್ಡಿ ದರ ಕಡಿಮೆಯಾದ್ರೆ ಮತ್ತೆ ಚಿನ್ನದ ಬೆಲೆ ಹೆಚ್ಚಾಗಲಿದೆ, ಬಡ್ಡಿದರ ಹೆಚ್ಚಾದ್ರೆ ಚಿನ್ನ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ ವರೆಗೆ ಇನ್ನೂ 500 ರೂಪಾಯಿ, 5% ಕಡಿಮೆಯಾಗಲಿದೆ, ಜನವರಿ ನಂತರ ಮತ್ತೆ ದರ ಹೆಚ್ಚಾಗುವ ನಿರೀಕ್ಷೆಯಿದೆ. ಅದಾದ ನಂತರ ಮುಂದಿನ ಮಾರ್ಚ್ ವರೆಗೂ ಈ ಏರಿಕೆ ಮುಂದುವರೆಯಲಿದೆ. ಯುದ್ದ ನಿಂತ ಮೇಲೆ ಮತ್ತೆ ಚಿನ್ನದ ಬೆಲೆ ಜಾಸ್ತಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸ್ಕೌಂಟ್, ಸ್ಕೀಮ್ ಕೊಡ್ತಾರೆ ಅಂತಾ ಮೋಸ ಹೋಗಬೇಡಿ
ಚಿನ್ನದ ತೂಕ ಹೆಚ್ಚಿಸಲು ರೀನಿಯಂ, ಇರಿಡಿಯಂ ಎಂಬ ಹೊಸ ಲೋಹದ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಚಿನ್ನ ಖರೀದಿ ಮಾಡುವ ಗ್ರಾಹಕರು ಹಾಲ್ಮಾರ್ಕ್ ಜೊತೆಗೆ HUID ವಿವರಗಳನ್ನ ಕಡ್ಡಾಯವಾಗಿ ಪರಿಶೀಲಿಸಬೇಕು. ಆಭರಣದ ತಯಾರಕರು, ಮಾರಾಟಗಾರರು ಮತ್ತು ಹಾಲ್ಮಾರ್ಕ್ ವಿವರಗಳನ್ನ ಪರಿಶೀಲನೆ ಮಾಡಬೇಕು. ಜೊತೆಗೆ ಬಿಲ್ ಇಲ್ಲದೇ ಚಿನ್ನ ಖರೀದಿಸದಂತೆ ಗ್ರಾಹಕರಿಗೆ ಎಚ್ಚರಿಸಿದ್ದಾರೆ.
GST ಪಾವತಿಸಿದರೂ ಅಧಿಕೃತ ಬಿಲ್ ಪಡೆಯಬೇಕು. ಬಿಲ್ನಲ್ಲಿರುವ ತೂಕವನ್ನು ಆಭರಣದ ತೂಕದೊಂದಿಗೆ ತಾಳೆ ಮಾಡಿ ನೋಡಬೇಕು. 18 ಕ್ಯಾರಟ್, 22 ಕ್ಯಾರಟ್ ಶುದ್ಧತೆ ಬಿಲ್ನಲ್ಲಿ ನಮೂದಾಗಿದೆಯೇ ಪರಿಶೀಲಿಸಿಕೊಳ್ಳಬೇಕು. ನಿಮ್ಮ ನಂಬಿಕೆಯಿರೋ ಆಭರಣ ಮಳಿಗೆಗಳಲ್ಲಿ ಕ್ಲ್ಯಾರಿಟಿ ತಗೊಂಡು ಚಿನ್ನ ಖರೀದಿ ಮಾಡಿ ಯಾವುದೋ ಡಿಸ್ಕೌಂಟ್ ಕೊಡ್ತಾರೆ, ಸ್ಕೀಮ್ ಕೊಡ್ತಾರೆ ಅಂತಾ ಮೋಸ ಹೋಗಬೇಡಿ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.


