– ಹಾಲ್ಮಾರ್ಕ್ ಜೊತೆಗೆ HUID ವಿವರ ಪರಿಶೀಲಿಸುವಂತೆ ಮನವಿ
ಬೆಂಗಳೂರು: ಚಿನ್ನದ ತೂಕ ಹೆಚ್ಚಿಸಲು ರೀನಿಯಂ, ಇರಿಡಿಯಂ ಎಂಬ ಹೊಸ ಲೋಹದ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಆದ್ದರಿಂದ ಡಿಸ್ಕೌಂಟ್ ಕೊಡ್ತಾರೆ, ಸ್ಕೀಂ ಕೊಡ್ತಾರೆ ಅಂತಾ ಮೋಸ ಹೋಗಬೇಡಿ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ (Shree Sai Gold Palace) ಮಾಲೀಕರು ಹಾಗೂ ಕರ್ನಾಟಕ ಗೋಲ್ಡ್ ಅಸೋಸಿಯೇಶನ್ ಅಧ್ಯಕ್ಷ ಡಾ.ಟಿ ಎ ಶರವಣ (TA Sharavana) ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಅವರು, ಚಿನ್ನದ (Gold) ತೂಕ ಹೆಚ್ಚಿಸಲು ರೀನಿಯಂ, ಇರಿಡಿಯಂ ಎಂಬ ಹೊಸ ಲೋಹದ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಚಿನ್ನ ಖರೀದಿ ಮಾಡುವ ಗ್ರಾಹಕರು ಹಾಲ್ಮಾರ್ಕ್ ಜೊತೆಗೆ HUID ವಿವರಗಳನ್ನ ಕಡ್ಡಾಯವಾಗಿ ಪರಿಶೀಲಿಸಬೇಕು. ಆಭರಣದ ತಯಾರಕರು, ಮಾರಾಟಗಾರರು ಮತ್ತು ಹಾಲ್ಮಾರ್ಕ್ ವಿವರಗಳನ್ನ ಪರಿಶೀಲನೆ ಮಾಡಬೇಕು. ಜೊತೆಗೆ ಬಿಲ್ ಇಲ್ಲದೇ ಚಿನ್ನ ಖರೀದಿಸದಂತೆ ಗ್ರಾಹಕರಿಗೆ ಎಚ್ಚರಿಸಿದ್ದಾರೆ.
GST ಪಾವತಿಸಿದರೂ ಅಧಿಕೃತ ಬಿಲ್ ಪಡೆಯಬೇಕು. ಬಿಲ್ನಲ್ಲಿರುವ ತೂಕವನ್ನು ಆಭರಣದ ತೂಕದೊಂದಿಗೆ ತಾಳೆ ಮಾಡಿ ನೋಡಬೇಕು. 18 ಕ್ಯಾರಟ್, 22 ಕ್ಯಾರಟ್ ಶುದ್ಧತೆ ಬಿಲ್ನಲ್ಲಿ ನಮೂದಾಗಿದೆಯೇ ಪರಿಶೀಲಿಸಿಕೊಳ್ಳಬೇಕು. ನಿಮ್ಮ ನಂಬಿಕೆಯಿರೋ ಆಭರಣ ಮಳಿಗೆಗಳಲ್ಲಿ ಕ್ಲ್ಯಾರಿಟಿ ತಗೊಂಡು ಚಿನ್ನ ಖರೀದಿ ಮಾಡಿ ಯಾವುದೋ ಡಿಸ್ಕೌಂಟ್ ಕೊಡ್ತಾರೆ, ಸ್ಕೀಮ್ ಕೊಡ್ತಾರೆ ಅಂತಾ ಮೋಸ ಹೋಗಬೇಡಿ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.


