ಬಿಗ್ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ಮಂಜನ (Manja) ಮಾತಲ್ಲಿ ಮೊದಲಿನ ಗಮ್ಮತ್ತಿಲ್ಲ.. ಆದರೆ ಮಾತ್ರ ತಮ್ಮದಲ್ಲದ ವಿಷಯದಲ್ಲಿ ತಲೆ ಹಾಕಿ ಇಲ್ಲದಿರುವ ಇರುವೆ ಬಿಟ್ಕೊಳ್ಳುತ್ತಿದ್ದಾರೆ. ಅದಕ್ಕೆ ಇಂದು ಕಿಚ್ಚ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವಾರ ಬಿಗ್ಬಾಸ್ (Bigg Boss) ಮನೆಯಲ್ಲಿ ಯುವರಾಣಿಯರು ಮಹರಾಣಿಯ ಪಟ್ಟಕ್ಕಾಗಿ ಮನೆಯವರನ್ನೆಲ್ಲ ಸೇನಾಧಿಪತಿ ಮಾಡಿಕೊಂಡು ಕೊನೆಗೆ ತಮ್ಮ ತಪ್ಪಿನಿಂದ ಸದಸ್ಯರನ್ನು ನಾಮಿನೇಟ್ ಮಾಡುವ ಪರಿಸ್ಥಿತಿ ಎದುರಾಗಿತ್ತು. ಇದರ ನಡುವೆ ಅಲ್ಲಲ್ಲಿ ಕಿತ್ತಾಟ, ಉಸ್ತುವಾರಿಗಳ ಗೊಂದಲದ ನಿರ್ಧಾರ ಮನೆಯಲ್ಲಿನ ವಾತಾವರಣ ಹದಗೆಡಿಸಿತ್ತು. ಇದನ್ನೂ ಓದಿ: ಮಹಾರಾಣಿ ಪಟ್ಟದಿಂದ ಕಳಪೆಗೆ – ಬಿಗ್ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಜೈಲುಪಾಲು
ಗಂಡಸ್ತನದ ಬಗ್ಗೆ ಕಿಚ್ಚನ ಕ್ಲಾಸ್!
ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/KbsWHYmz1i
— Colors Kannada (@ColorsKannada) November 21, 2026
ಒಂದೆಡೆ ಜಗದೀಶ್, ಮಂಜ, ಗಾನವಿ ಹಾಗೂ ಇನ್ನೊಂದೆಡೆ ಸೌಂದರ್ಯ, ಕಿರಣ್ ಶಾಸ್ತ್ರೀ ನಡುವಿವ ಜಗಳ ಅತಿರೇಕಕ್ಕೆ ಹೋಗಿತ್ತು. ಗಾನವಿ ಹಾಗೂ ಜಗದೀಶ್ ನಡುವಿನ ಜಗಳದಲ್ಲಿ ಸುಮ್ಮನೇ ಮೂಗುತೂರಿಸಿ ಇಲ್ಲಸಲ್ಲದ ಮಾತುಗಳನ್ನು ಮಾತನಾಡಿ ಮಂಜ ತಪ್ಪುಮಾಡಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ಮಾತನಾಡಿ, ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ನಿಮ್ಮದಲ್ಲದ ಜಗಳಕ್ಕೆ ನೀವು ಹೋಗಿ ಮಾತನಾಡಿದ್ದು ಯಾಕೆ? ನಿಮ್ಮ ಪ್ರಕಾರ ಗಂಡಸರ ಹಾಗೇ ಮಾತಾಡೋದು ಅಂದ್ರೆ ನೀವು ಆಚೆ ಹೋಗೋಕ್ಕಿಂತ ಮುಂಚೆ ಮಾತಾಡುತ್ತಿದ್ರಲ್ಲ ಹಾಗೇನಾ? ಅವರಿಗೂ ಒಂದೇ ಸಿನಿಮಾ ಮಾಡಿ ಬಂದಿದ್ದೀರಿ, ಮುಸುರೆ ತಿಕ್ಕಿಕೊಂಡು ಬಂದಿದ್ದೀರಿ ಅಂತೀರಲ್ವಾ.. ಹೌದು ಅದೇ ಅವರ ಸಾಧನೆ. ಒಂದು ವೇಳೆ ನಿಮಗೆ ಯಾರಾದರೂ ಹಾಗೇ ಕೇಳಿದ್ರೆ ಹೇಗೆ ಆಗುತ್ತೆ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಆರ್ಭಟ – ಭಾರತದಲ್ಲೇ 900 ಕೋಟಿ ಗಳಿಕೆಯತ್ತ ಯಶ್ ಸಿನಿಮಾ
ಗಾನವಿ ಹಾಗೂ ಜಗದೀಶ್ ಅವರ ನಡುವೆ ಮನೆಯ ಅಡುಗೆ ಮಾಡುವ ವಿಚಾರಕ್ಕೆ ಜಗಳ ಆಗುತ್ತಿರುತ್ತದೆ. ಆಗ ಗಾನವಿ… ನೀನು ಒಠಾರದಲ್ಲಿರುವ ಹೆಂಗಸರ ಹಾಗೇ ಮಾತಾಡೋದನ್ನು ಬಿಟ್ಟು ಸರಿಯಾಗಿ ಮಾತಾಡೋದನ್ನು ಕಲಿ ಎನ್ನುತ್ತಾಳೆ. ಆಗ ಬಂದ ಮಂಜು.. ಗಂಡಸರ ಹಾಗೇ ಮಾತಾಡು ಎನ್ನುತ್ತಾನೆ. ಆಗ ಜಗಳ ತಾರಕಕ್ಕೇರುತ್ತದೆ.ಇದನ್ನೂ ಓದಿ: ಸಂಕಷ್ಟದಿಂದ ಪಾರು ಮಾಡುವಂತೆ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ
ರಾಯಲ್ ಲುಕ್ನಲ್ಲಿ ಕಿಚ್ಚನ ದರ್ಬಾರ್
ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKEngage #CKKichcha https://t.co/tKqHoX7dsq
— Colors Kannada (@ColorsKannada) November 21, 2026
