ಪಶ್ಚಿಮ ಬಂಗಾಳದ (West Bengal) ಖರಗ್ಪುರದಲ್ಲಿರುವ (Kharagpur) ದೇಶದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಯುವಜನರ ಆಲೋಚನೆ, ಸಂಶೋಧನೆ ಮತ್ತು ನಾವೀನ್ಯತೆಗಳ ಪಾತ್ರ ಮಹತ್ವದ್ದಾಗಿದೆ. ದೇಶದ ಸಾಮರ್ಥ್ಯವನ್ನು ಅರಿಯಲು ಸೀಮಿತ ಚಿಂತನೆಗಳನ್ನು ಮೀರಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ಯುವಜನರು ತಮ್ಮ ಕನಸುಗಳಿಗೆ ಮಿತಿಗಳನ್ನು ಹಾಕಿಕೊಳ್ಳಬಾರದು. ಅವರ ಆಲೋಚನೆಗಳು ಮತ್ತು ಪ್ರತಿಭೆ ದೇಶದ ಪ್ರಗತಿಗೆ ನೆರವಾಗಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನಿನಗೊಂದು ಗತಿ ಕಾಣಿಸುತ್ತೇನೆ ಅಂತ ಹೆಂಡತಿ ಸ್ನೇಹಿತನಿಗೆ ಆಸಿಡ್ ಎರಚಿದ ಪತಿ!
ಕಳೆದ 12ರಿಂದ 13 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ದೇಶದ ಚಿಂತನಾ ಕ್ರಮದಲ್ಲಾದ ಬದಲಾವಣೆ ಮತ್ತು ಮಿತಿಗಳನ್ನು ಮೀರುವ ಮನೋಭಾವದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಐಐಟಿ ಖರಗ್ಪುರದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧನದಲ್ಲಿಡಲಾಗಿದ್ದ ಸ್ಥಳದಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಚಿಂತನೆ ಮತ್ತು ಹೋರಾಟದ ಇತಿಹಾಸ ಇಂದಿಗೂ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: 10 ಲಕ್ಷ ಲಂಚ ಪಡೆದ ಕೇಸಲ್ಲಿ CGST ಅಧೀಕ್ಷಕ ಅರೆಸ್ಟ್ – 1.86 ಕೋಟಿ ಮೌಲ್ಯದ ನಗದು, ಚಿನ್ನ, ಬೆಳ್ಳಿ ಪತ್ತೆ
1951ರಲ್ಲಿ ಸ್ಥಾಪನೆಯಾದ ಐಐಟಿ ಖರಗ್ಪುರ ಕಳೆದ 75 ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದೆ. ದೇಶದ ಬಾಹ್ಯಾಕಾಶ, ಅಣುಶಕ್ತಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಯಲ್ಲಿಯೂ ಈ ಸಂಸ್ಥೆಯ ಪದವೀಧರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ಮರಿಸಿದ್ದಾರೆ.
ಭಾರತದ ಸೆಮಿಕಂಡಕ್ಟರ್ ಕ್ಷೇತ್ರದ ಪ್ರಗತಿಯನ್ನು ಉಲ್ಲೇಖಿಸಿದ ಮೋದಿ, ಚಿಪ್ ಉತ್ಪಾದನೆ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಚಿಪ್ಗಳಿಂದ ಹಡಗುಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಯುವಜನರಿಗೆ ಅವಕಾಶಗಳಿವೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಐಐಟಿ ಖರಗ್ಪುರದ 75ನೇ ವರ್ಷದ ಸ್ಮರಣಾರ್ಥ ವಿಶೇಷ ನಾಣ್ಯವನ್ನು ಪ್ರಧಾನಿ ಬಿಡುಗಡೆ ಮಾಡಿದರು. ಅಲ್ಲದೆ, `75 ವಾಯ್ಸಸ್ ಫಾರ್ ವಿಕಸಿತ ಭಾರತ್’ ಕಾರ್ಯಕ್ರಮದಡಿ ಸಂಸ್ಥೆಯ 75 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಇದನ್ನೂ ಓದಿ: ಅಯ್ಯನ ಮನೆ 2 ಸಕ್ಸಸ್ ಮೀಟ್: ಕನ್ನಡ ಒರಿಜಿನಲ್ ವೆಬ್ ಸರಣಿಗೆ ಭರ್ಜರಿ ರೆಸ್ಪಾನ್ಸ್
