– ಮಾರುತಿ ಕಂಪನಿಯ ಮಾಲೀಕತ್ವದ ಬಗ್ಗೆ ಹಲವು ಪ್ರಶ್ನೆ
– ಸಾಲ ನೀಡಲೆಂದೇ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಯಿತೇ?
ನವದೆಹಲಿ: ಸೋನಿಯಾ ಗಾಂಧಿ(Sonia Gandhi) ವಿದೇಶಿ ಪ್ರಜೆಯಾಗಿದ್ದರೂ ಮಾರುತಿ ಕಂಪನಿಯ(Maruti Company) ವ್ಯವಸ್ಥಾಪಕ ನಿರ್ದೇಶಕಿ (MD) ಮತ್ತು ಶೇ. 50ರಷ್ಟು ಷೇರು ಹೊಂದಿದ್ದು ಹೇಗೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ(Nishikant Dubey) ಗಂಭೀರ ಪ್ರಶ್ನೆ ಕೇಳಿದ್ದಾರೆ.
‘ಮಾರುತಿ ಟೆಕ್ನಿಕಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (MTS) ಕಂಪನಿಯ ಮಾಲೀಕತ್ವದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಅವರು, ಅಂದಿನ ಪ್ರಧಾನಿ ಇಂದಿರಾ ಗಾಂಧಿ(Indira Gandhi) ನೇತೃತ್ವದ ಸರ್ಕಾರ ಗಾಂಧಿ ಕುಟುಂಬಕ್ಕೆ ವಿಶೇಷ ಸವಲತ್ತುಗಳನ್ನು ನೀಡಿತ್ತು ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಾಂಗ್ರೆಸ್ನ ಕರಾಳ ಅಧ್ಯಾಯ (Congress’s Dark Chapter) ಎಂಬ ತಮ್ಮ ಸರಣಿಯ 250ನೇ ಪೋಸ್ಟ್ ಮಾಡಿರುವ ದುಬೆ ಇಂದಿರಾ ಗಾಂಧಿ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಹೇಗೆ ಕಂಪನಿಯಲ್ಲಿ ವ್ಯವಹಾರ ನಡೆಸಿತ್ತು ಎಂಬುದನ್ನು ವಿವರಿಸಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
1970ರ ನವೆಂಬರ್ 21ರಂದು ಸಂಜಯ್ ಗಾಂಧಿ ಅವರು ಸೋನಿಯಾ ಗಾಂಧಿ ಅವರ ಮಾರುತಿ ಟೆಕ್ನಿಕಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಸೋನಿಯಾ ಗಾಂಧಿಯೇ ಮಾರುತಿಯ ಅಸಲಿ ಮಾಲೀಕರಾಗಿದ್ದರು. ಭಾರತ ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ವಿದೇಶಿ ಪ್ರಜೆ ಭಾರತೀಯ ಕಂಪನಿಯ ನಿರ್ದೇಶಕರಾಗಲು ಸಾಧ್ಯವಿರಲಿಲ್ಲ. ಹೀಗಿದ್ದರೂ 1970ರಲ್ಲಿ ಅವರು ನಿರ್ದೇಶಕಿ ಮತ್ತು ಶೇ. 50ರಷ್ಟು ಪಾಲುದಾರರಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮಾರುತಿ ಕಂಪನಿ 1970ರಲ್ಲಿ ಸ್ಥಾಪನೆಯಾದರೂ, 1968ರಲ್ಲೇ ಕಾರುಗಳನ್ನು ತಯಾರಿಸಲು ಭಾರತ ಸರ್ಕಾರದಿಂದ ಅನುಮತಿ ಪತ್ರ ಪಡೆದಿತ್ತು. 1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಸೊಸೆ ಸೋನಿಯಾ ಗಾಂಧಿ ಅವರ ಕಂಪನಿಗೆ ಕಾರು ತಯಾರಿಸಲು ಅವಕಾಶ ನೀಡಿ ಸಂಪುಟ ಆದೇಶ ಹೊರಡಿಸಿದ್ದರು. ಅಲ್ಲದೆ 1972ರ ಏಪ್ರಿಲ್ 3ರಂದು ಸಂಜಯ್ ಗಾಂಧಿ ಕಂಪನಿಯ ಕೆಲಸಕ್ಕಾಗಿ ಭಾರತ ಸರ್ಕಾರದ ಖರ್ಚಿನಲ್ಲಿ ವಿಶ್ವ ಪರ್ಯಟನೆ ಮಾಡಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡರ ಸಾಮಾಜಿಕ ಜಾಲತಾಣ ಸಸ್ಪೆಂಡ್ – ಹೈದರಾಬಾದ್ ಮೆಟಾ ಕಚೇರಿ ಮೇಲೆ ಕಾರ್ಯಕರ್ತರಿಂದ ದಾಳಿ
कांग्रेस का काला अध्याय, चैप्टर – 250
250. क्या आपको पता है कि विदेशी नागरिक होने के बावजूद सोनिया गांधी जी मारुति की मैनेजिंग डायरेक्टर और 50 प्रतिशत की हिस्सेदार थीं ? 21 नवंबर 1970 संजय गांधी जी ने सोनिया गांधी जी के मारुति टेक्निकल सर्विस प्राइवेट लिमिटेड के साथ समझौता किया ।मारुति कम्पनी की असली मालकिन सोनिया गांधी जी थी।मारुति कम्पनी 1970 में बनी, कार बनाने का पत्र भारत सरकार को 1968 में ही मिला ।1969 में प्रधानमंत्री इंदिरा गांधी जी ने अपने बहू यानि सोनिया गांधी जी के नेतृत्व वाली कम्पनी को कैबिनेट से कार बनाने का आदेश जारी कर दिया? अप्रैल 3 1972 को भारत सरकार के खर्च पर संजय गांधी जी कम्पनी के लिए दुनिया घुमने गए? सोनिया गॉंधी जी इस कंपनी की प्रबंध निदेशक और 50 प्रतिशत की मालिक कैसे बनी? भारत सरकार के नियमों के अनुसार कोई भी विदेशी नागरिक भारतीय कंपनी में निदेशक नहीं बन सकता था? 1970 में वह निदेशक कैसे बनी ? उनके कम्पनियों को लोन देने के लिए ही बैंकों का राष्ट्रीयकरण हुआ? हरियाणा सरकार के नियमों के अनुसार उस वक़्त ज़मीनों का आवंटन विदेशी के नाम नहीं हो सकता था,सोनिया गांधी जी को 1970 में ज़मीन आवंटित हुआ? प्रधानमंत्री कार्यालय में प्राइवेट कंपनी का दफ्तर कैसे खोला गया? प्रधानमंत्री के निजी सचिव धवन साहब इसके डायरेक्टर कैसे बने? प्रधानमंत्री के सीधे आदेश पर बिना कम्पनी बने सभी राज्य सरकारों ने मारुति को बसों का बॉडी बनाने के लिए अग्रिम भुगतान किया? सीमेंट,स्टील और कोयले सीधे बिना भुगतान के सरकारी कंपनियों ने मारुति को कैसे दिया?
काश सोनिया जी अपनी किताब में बिना अपने पैसे के निवेश के बड़ी कम्पनी कैसे बनी, प्रधानमंत्री इंदिरा गांधी जी ने मुँह दिखाई में उनको मारुति कम्पनी कैसे दिया के बारे में बतातीं
#CongressDarkHistory— Dr Nishikant Dubey (@nishikant_dubey) November 21, 2026
ಅಂದು ಇಂದಿರಾ ಗಾಂಧಿ ನೇತೃತ್ವದ ಪ್ರಧಾನಿ ಕಚೇರಿಯಲ್ಲಿ (PMO) ಖಾಸಗಿ ಕಂಪನಿಯ ಕಚೇರಿಯನ್ನು ತೆರೆಯಲು ಹೇಗೆ ಸಾಧ್ಯವಾಯಿತು? ಪ್ರಧಾನಿಯವರ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್ ಅವರು ಈ ಕಂಪನಿಯ ನಿರ್ದೇಶಕರಾಗಿದ್ದು ಹೇಗೆ? ಆಗಿನ ಹರ್ಯಣ ಸರ್ಕಾರದ ನಿಯಮಗಳ ಪ್ರಕಾರ ವಿದೇಶಿ ಪ್ರಜೆಯ ಹೆಸರಿನಲ್ಲಿ ಭೂಮಿ ಮಂಜೂರು ಮಾಡುವಂತಿರಲಿಲ್ಲ. ಆದರೂ 1970ರಲ್ಲಿ ಸೋನಿಯಾ ಗಾಂಧಿ ಅವರಿಗೆ ಭೂಮಿ ಮಂಜೂರಾಗಿದ್ದು ಹೇಗೆ ಎಂದು ಕೇಳಿದ್ದಾರೆ.
ಇದೇ ವೇಳೆ ಬ್ಯಾಂಕ್ಗಳ ರಾಷ್ಟ್ರೀಕರಣವನ್ನು ಈ ವಿವಾದಕ್ಕೆ ತಳುಕು ಹಾಕಿರುವ ಅವರು, “ಕೇವಲ ಅವರ ಕಂಪನಿಗಳಿಗೆ ಸಾಲ ನೀಡುವ ಉದ್ದೇಶದಿಂದಲೇ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತೇ?” ಎಂದು ಪ್ರಶ್ನಿಸಿದ್ದಾರೆ.
ಇಷ್ಟೇ ಅಲ್ಲದೆ, ಕಂಪನಿ ಕಾರ್ಯಾರಂಭ ಮಾಡುವ ಮೊದಲೇ ಪ್ರಧಾನಿಯವರ ನೇರ ಆದೇಶದ ಮೇರೆಗೆ ಎಲ್ಲಾ ರಾಜ್ಯ ಸರ್ಕಾರಗಳು ಬಸ್ ಬಾಡಿ ನಿರ್ಮಾಣಕ್ಕಾಗಿ ಮಾರುತಿ ಕಂಪನಿಗೆ ಮುಂಗಡ ಹಣ ಪಾವತಿಸಿದ್ದವು. ಸರ್ಕಾರಿ ಸ್ವಾಮ್ಯದ ಕಂಪನಿಗಳು ಯಾವುದೇ ಹಣ ಪಡೆಯದೆ ನೇರವಾಗಿ ಮಾರುತಿಗೆ ಸಿಮೆಂಟ್, ಉಕ್ಕು ಮತ್ತು ಕಲ್ಲಿದ್ದಲನ್ನು ಪೂರೈಸಿದ್ದು ಹೇಗೆ ಎಂದು ದುಬೆ ಕೇಳಿದ್ದಾರೆ.
ಸೋನಿಯಾಗೆ ಸವಾಲು:
ತಮ್ಮ ಪೋಸ್ಟ್ನ ಕೊನೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಸವಾಲು ಹಾಕಿರುವ ನಿಶಿಕಾಂತ್ ದುಬೆ, ತಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡದೆ ಇಷ್ಟು ದೊಡ್ಡ ಕಂಪನಿಯನ್ನು ಹೇಗೆ ಕಟ್ಟಿದರು ಮತ್ತು ಪ್ರಧಾನಿ ಇಂದಿರಾ ಗಾಂಧಿ ಅವರು ಮಾರುತಿ ಕಂಪನಿಯನ್ನು ಅವರಿಗೆ ಹೇಗೆ ಉಡುಗೊರೆಯಾಗಿ ನೀಡಿದರು ಎಂಬುದನ್ನು ಸೋನಿಯಾ ಜಿ ತಮ್ಮ ಪುಸ್ತಕದಲ್ಲಿ ವಿವರಿಸಲಿ ಎಂದು ಒತ್ತಾಯಿಸಿದ್ದಾರೆ. 1977ರಲ್ಲಿ ವಿಚಾರಣಾ ಆಯೋಗದಿಂದ ತನಿಖೆಗೊಳಗಾಗಿದ್ದ ಸಂಜಯ್ ಗಾಂಧಿ ಅವರ ಮಾರುತಿ ಯೋಜನೆಯ ವಿವಾದದ ಹಿನ್ನೆಲೆಯಲ್ಲಿ ದುಬೆ ಈ ಆರೋಪಗಳನ್ನು ಮಾಡಿದ್ದಾರೆ.
