ತಮಗೆ ಎದುರಾಗಿರುವ ಸಂಕಷ್ಟದಿಂದ ಪಾರು ಮಾಡುವಂತೆ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ದರ್ಗಾ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಒಟಿಸಿ ರಸ್ತೆಯಲ್ಲಿರುವ ದರ್ಗಾಕ್ಕೆ ತೆರಳಿ ಅವರು ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅವರನ್ನು ಜೈಲಿಂದ ಹೊರತರಲು ವಿಜಯಲಕ್ಷ್ಮಿಯವರು ಹಲವು ದೇವಾಲಯಗಳ ಮೊರೆ ಹೋಗಿದ್ದರು. ಇದೀಗ ದರ್ಗಾಕ್ಕೆ ತೆರಳಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ ಕೇಸ್| ನಟನಿಗೆ ಬಿಗ್ ರಿಲೀಫ್
ವಿಸಿಯಲ್ಲಿ ಕೊಲೆ ಆರೋಪಿ ದರ್ಶನ್ ಹಾಗೂ ಪವಿತ್ರಗೌಡ ಮಾತಾಡಿಕೊಂಡ ಬಳಿಕ ವಿಜಯಲಕ್ಷ್ಮಿ ಮೌನವಾಗಿದ್ದರು. ಇದೀಗ ದರ್ಗಾ ಮೊರೆ ಹೋಗಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ಧನ್ವೀರ್(Dhanveer) ನಡುವೆ ಜಟಾಪಟಿ ನಡೆದಿತ್ತು. ಇಬ್ಬರ ನಡುವಿನ ವಾಗ್ವಾದ ಮತ್ತು ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್ಗೆ ಹೈಕೋರ್ಟ್ನಿಂದ (Karnataka High Court) ರಿಲೀಫ್ ಸಿಕ್ಕಿತ್ತು. ಧನ್ವೀರ್ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್ಐಆರ್ಗಳ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಇದನ್ನೂ ಓದಿ: ಹುಲಿಯ ರಾಜ ಗಾಂಭೀರ್ಯಕ್ಕೆ ಮನಸೋತ ಶ್ರೇಯಾ ಘೋಷಾಲ್ – ಸಫಾರಿ ಅನುಭವ ಹಂಚಿಕೊಡ ಗಾಯಕಿ

