– ಕಾಗಿಣಾ ನದಿಯಲ್ಲಿ ಅಪೌಷ್ಠಿಕ ಮಕ್ಕಳಿಗೆ ನೀಡುವ ಔಷಧಿಗಳು
ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಮಕ್ಕಳು ಮತ್ತು ತಾಯಂದಿರಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಕೋಟ್ಯಂತರ ಖರ್ಚು ಮಾಡಿ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ (Govt Hospitals) ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಮಾತ್ರೆಗಳನ್ನ ಮತ್ತು ಸಿರಪ್ಗಳನ್ನ ಕೊಡಬೇಕು. ಆದರೆ ಈ ಜಿಲ್ಲೆಯಲ್ಲಿ ಬಡವರಿಗೆ ಸಿಗಬೇಕಾದ ಮಾತ್ರೆಗಳನ್ನ ಮತ್ತು ಸಿರಪ್ಗಳನ್ನ ನದಿಗೆ ಎಸೆಯಲಾಗಿದೆ.
ಆಸ್ಪತ್ರೆಯಲ್ಲಿ ಬಡವರಿಗೆ ಸಿಗಬೇಕಾದ ಮೆಡಿಸಿನ್ (Medicine) ಮತ್ತು ಸಿರಪ್ ಬಾಟಲ್ಗಳು (Syrup Bottle) ಕಲಬುರಗಿ (Kalaburagi) ಜಿಲ್ಲೆ ಶಹಬಾದ್ ಪಟ್ಟಣ ಹೊರವಲಯದ ಕಾಗಿಣ ನದಿಯಲ್ಲಿ (Kagina River) ಪತ್ತೆಯಾಗಿವೆ. ಅಪೌಷ್ಠಿಕತೆಯಿಂದ ಬಳಲುತ್ತಿರೋ ಮಕ್ಕಳಿಗೆ ಉಚಿತವಾಗಿ ನೀಡಬೇಕಾದ ಮೆಟ್ ಫಾರ್ಮಿನ್ ಹೈಡ್ರೋಕ್ಲೋರೈಡ್ 500 ಎಂಜಿ ಮಾತ್ರೆ ಮತ್ತು ಟೆಲ್ಮಿ ಸಾರ್ಟನ್ನ 40 ಎಂಜಿ ಮಾತ್ರೆಗಳು ಕಾಗಿಣ ನದಿ ದಡದಲ್ಲಿ ರಾಶಿರಾಶಿ ಪತ್ತೆಯಾಗಿವೆ. ಈ ರಾಶಿ ರಾಶಿ ಮಾತ್ರೆ ಮತ್ತು ಸಿರಫ್ ಬಾಟಲ್ಗಳು ಇದೇ ವರ್ಷ ಇದೇ ನವೆಂಬರ್ ತಿಂಗಳಲ್ಲಿ ಅವಧಿ ಮುಗಿಯಲಿದೆ. ಆಸ್ಪತ್ರೆಯಲ್ಲಿ ಬಡವರಿಗೆ ವಿತರಣೆ ಮಾಡದೇ, ಡೆಡ್ಸ್ಟಾಕ್ ಇಟ್ಟುಕೊಂಡು ಇದೀಗ ರಾತೋರಾತ್ರಿ ಮಾತ್ರೆ, ಸಿರಪ್ ಅನ್ನು ನದಿಗೆ ಎಸೆಯಲಾಗಿದೆ. ಇದನ್ನೂ ಓದಿ: ಅರ್ನಬ್, ಮುರಸು ಬಳಿಕ ಅಕ್ವಾನ್ – ಬಂಗಾಳಕೊಲ್ಲಿಯಲ್ಲಿ ಪದೇ ಪದೇ ಚಂಡಮಾರುತ ರೂಪುಗೊಳ್ಳುತ್ತಿರುವುದೇಕೆ?
ಈ ಹಿಂದೆ ಇದೇ ಆರೋಗ್ಯ ಇಲಾಖೆಯ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ಅಫಜಲಪುರ್ ಸರ್ಕಾರಿ ಆಸ್ಪತ್ರೆ ಆವರಣ ಹಾಗೂ ಫರ್ತಾಬಾದ್ ಪಿಹೆಚ್ಸಿ ಆವರಣದಲ್ಲಿ ಬಿಸಾಡಲಾಗಿತ್ತು. ಆ ಪ್ರಕರಣಗಳು ಮಾಸುವ ಮುನ್ನವೇ ಶಹಬಾದ್ ಕಾಗಿಣಾ ನದಿಯಲ್ಲಿ ರಾಶಿ ರಾಶಿ ಮೆಡಿಸಿನ್ & ಮಕ್ಕಳ ಸಿರಪ್ ಬಾಟಲ್ಗಳು ಪತ್ತೆಯಾಗಿವೆ. ಇದನ್ನೂ ಓದಿ: ಬೆಂಗಳೂರು | ಮದುವೆ ಮಾಡಿಕೊಡಿ ಅಂತ ಪ್ರೇಯಸಿ ಸಂಬಂಧಿಗೆ ಗನ್ ತೋರಿಸಿ ಫೈರಿಂಗ್ಗೆ ಯತ್ನ
ಇನ್ನೂ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಪೌಷ್ಠಿಕತೆ ಸಾಕಷ್ಟು ಪ್ರಮಾಣದಲ್ಲಿ ಇದೆ. ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳ ಮೂಲಕ ಉಚಿತ ಮಾತ್ರೆ ಮತ್ತು ಸಿರಪ್ಗಳನ್ನ ವಿತರಣೆ ಮಾಡುತ್ತಿದೆ. ಆದರೆ ಕಾಗಿಣಾ ನದಿ ದಡದಲ್ಲಿ ಅಪಾರ ಪ್ರಮಾಣದ ಮಾತ್ರೆ ಮತ್ತು ಸಿರಪ್ಗಳನ್ನ ಬೆಕಾಬಿಟ್ಟಿಯಾಗಿ ಬಿಸಾಕಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: 26 ರನ್ಗೆ ನೇಪಾಳ ಆಲೌಟ್; ಭಾರತಕ್ಕೆ 306 ರನ್ಗಳ ಭರ್ಜರಿ ಜಯ
ಇನ್ನೂ ಅವಧಿ ಮೀರಿದ ಮೆಡಿಸಿನ್ಗಳನ್ನ ವೈಜ್ಞಾನಿಕವಾಗಿ ವಿಲೇವಾರಿ ಮಾಡೋದನ್ನ ಬಿಟ್ಟು ನದಿಯಲ್ಲಿ ಬಿಸಾಕಿರೋದು ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಾಗಿಣಾ ನದಿಯಲ್ಲಿ ಯಾವ ಆಸ್ಪತ್ರೆಯವರು ತಂದು ಬಿಸಾಕಿದ್ದಾರೆ ಅನ್ನೊದರ ಬಗ್ಗೆ ತನಿಖೆ ನಡೆಯುತ್ತಿದೆ. ಕಾಗಿಣಾ ನದಿಯಲ್ಲಿ ಮೆಡಿಸಿನ್ ಮತ್ತು ಸಿರಪ್ ಪತ್ತೆ ಪ್ರಕರಣವನ್ನ ಕಲಬುರಗಿ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇದನ್ನೂ ಓದಿ: ಎಜಿ ಜೊತೆ ಚರ್ಚಿಸಿ ಬೈಕ್ ಟ್ಯಾಕ್ಸಿ ಬಗ್ಗೆ ಅಂತಿಮ ನಿರ್ಧಾರ: ಬೈರತಿ ಸುರೇಶ್
