ರಾಜ್ಯದಲ್ಲಿ ಇಂದು ಒಣ ಹವೆ ಮುಂದುವರಿಯಲಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ಚಳಿಯ ತೀವ್ರತೆ ಇರಲಿದೆ. ಕರಾವಳಿ ಕರ್ನಾಟಕ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಬಿಸಿಲು ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗಗಳಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶುಭ್ರ ಆಕಾಶವಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಹಾಗೂ ಚಳಿ ಹೆಚ್ಚಾಗಿರಲಿದೆ.
ದಕ್ಷಿಣ ಒಳನಾಡು ಭಾಗಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ ಮತ್ತು ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೆಳಗಿನ ಜಾವ ಮಂಜು ಕವಿದ ವಾತಾವರಣವಿದ್ದು, ಹಗಲಿನಲ್ಲಿ ಬಿಸಿಲು ಇರಲಿದೆ. ಈ ಭಾಗದಲ್ಲಿ ನ.23-24ರ ನಂತರ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 33-22
ಶಿವಮೊಗ್ಗ: 31-14
ಬೆಳಗಾವಿ: 28 -16
ಮೈಸೂರು: 29-16
ಮಂಡ್ಯ: 30-16
ಮಡಿಕೇರಿ: 27-17
ರಾಮನಗರ: 29-16
ಹಾಸನ: 28-14
ಚಾಮರಾಜನಗರ: 30-17
ಚಿಕ್ಕಬಳ್ಳಾಪುರ: 28-14
ಕೋಲಾರ: 28-14
ತುಮಕೂರು: 28-14
ಉಡುಪಿ: 32-21
ಕಾರವಾರ: 31-23
ಚಿಕ್ಕಮಗಳೂರು: 26-13
ದಾವಣಗೆರೆ: 31-13
ಹುಬ್ಬಳ್ಳಿ: 30-15
ಚಿತ್ರದುರ್ಗ: 29-14
ಹಾವೇರಿ: 31-14
ಬಳ್ಳಾರಿ: 31-16
ಗದಗ: 29-16
ಕೊಪ್ಪಳ: 30-16
ರಾಯಚೂರು: 32-16
ಯಾದಗಿರಿ: 31-14
ವಿಜಯಪುರ: 29-14
ಕಲಬುರಗಿ: 31-14
ಬಾಗಲಕೋಟೆ: 30-16


