– ಅತಿ ವೇಗವಾಗಿ ಈ ಸಾಧನೆ ಮಾಡಿದ 3ನೇ ಚಿತ್ರ
ಕನ್ನಡದ ನಟ ಯಶ್ (Yash), ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ (Ramayana) ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಶುಕ್ರವಾರ 16ನೇ ದಿನಕ್ಕೆ ಕಾಲಿಟ್ಟಿರುವ ಸಿನಿಮಾ, ಹಿಂದಿನ ದಿನಕ್ಕೆ ಹೋಲಿಸಿದರೆ ಕಲೆಕ್ಷನ್ನಲ್ಲಿ ಕೊಂಚ ಇಳಿಕೆ ಕಂಡಿದ್ದರೂ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ.
ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಹಿಂದಿ, ಮಲಯಾಳಂ, ತಮಿಳು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಕಂಡಿದ್ದು, ಎಲ್ಲಾ ಭಾಷೆಗಳಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. 5 ಭಾಷೆಗಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.
16ನೇ ದಿನ ‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
Sacnilk ವರದಿಯ ಪ್ರಕಾರ, ‘ರಾಮಾಯಣ’ ಸಿನಿಮಾ 16ನೇ ದಿನ ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಒಟ್ಟು 16.30 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಈ ದಿನ ಒಟ್ಟು 15,497 ಪ್ರದರ್ಶನಗಳು ನಡೆದಿವೆ. ಭಾಷಾವಾರು ಕಲೆಕ್ಷನ್ ನೋಡೋದಾದ್ರೆ, ಹಿಂದಿ ಆವೃತ್ತಿ 13,322 ಪ್ರದರ್ಶನಗಳಿಂದ 12 ಕೋಟಿ ರೂ. ಗಳಿಸಿದೆ. ಮಲಯಾಳಂ ಆವೃತ್ತಿ 794 ಪ್ರದರ್ಶನಗಳಿಂದ 1.75 ಕೋಟಿ ರೂ. ಹಾಗೂ ತಮಿಳು ಆವೃತ್ತಿ 533 ಪ್ರದರ್ಶನಗಳಿಂದ 1.10 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ಕನ್ನಡ ಆವೃತ್ತಿ 399 ಪ್ರದರ್ಶನಗಳಿಂದ 1 ಕೋಟಿ ರೂ. ಗಳಿಸಿದರೆ, ತೆಲುಗು ಆವೃತ್ತಿ 449 ಪ್ರದರ್ಶನಗಳಿಂದ 45 ಲಕ್ಷ ರೂ. ಗಳಿಸಿದೆ.
16ನೇ ದಿನದ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 19.45 ಕೋಟಿ ರೂ. ಆಗಿದೆ. ಗುರುವಾರದ 19.35 ಕೋಟಿ ರೂ. ನೆಟ್ ಕಲೆಕ್ಷನ್ಗೆ ಹೋಲಿಸಿದ್ರೆ ಶುಕ್ರವಾರದ ಗಳಿಕೆಯಲ್ಲಿ ಶೇ.15.8ರಷ್ಟು ಇಳಿಕೆ ಕಂಡುಬಂದಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತ ನೆಟ್ ಕಲೆಕ್ಷನ್ 880.05 ಕೋಟಿ ರೂ. ತಲುಪಿದೆ. ಭಾರತದ ಗ್ರಾಸ್ ಕಲೆಕ್ಷನ್ 1,051.60 ಕೋಟಿ ರೂ. ಆಗಿದೆ.
ವಿಶ್ವಾದ್ಯಂತ ‘ರಾಮಾಯಣ’ ಗಳಿಕೆ ಎಷ್ಟು?
ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಗಳಲ್ಲಿಯೂ ‘ರಾಮಾಯಣ’ ಉತ್ತಮ ಪ್ರದರ್ಶನ ಮುಂದುವರಿಸಿದೆ. 16ನೇ ದಿನ ವಿದೇಶಗಳಲ್ಲಿ ಸಿನಿಮಾ 8 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರದ ಒಟ್ಟು ವಿದೇಶಿ ಗ್ರಾಸ್ ಗಳಿಕೆ 523 ಕೋಟಿ ರೂ. ತಲುಪಿದೆ. ಈ ಮೂಲಕ ‘ರಾಮಾಯಣ’ ಚಿತ್ರದ ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ 1,574.60 ಕೋಟಿ ರೂ. ಆಗಿದೆ. 16 ದಿನಗಳ ಪ್ರದರ್ಶನದಲ್ಲಿ ಅಂದಾಜು 3,56,51,737 ಟಿಕೆಟ್ಗಳು ಮಾರಾಟವಾಗಿವೆ.
ಭಾಷಾವಾರು ಭಾರತದ ಒಟ್ಟು ನೆಟ್ ಕಲೆಕ್ಷನ್ ಎಷ್ಟು?
– ಹಿಂದಿ – 669.50 ಕೋಟಿ ರೂ.
– ಕನ್ನಡ – 71.15 ಕೋಟಿ ರೂ.
– ತೆಲುಗು – 54.85 ಕೋಟಿ ರೂ.
– ಮಲಯಾಳಂ – 42.30 ಕೋಟಿ ರೂ.
– ತಮಿಳು – 42.25 ಕೋಟಿ ರೂ.



