ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಐತಿಹಾಸಿ ದಾಖಲೆ ಬರೆದಿದ್ದಾರೆ. ʻಸೇನಾʼ ದೇಶಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರವಾಗಿದ್ದಾರೆ. ಜೊತೆಗೆ ʻಸೇನಾʼ ದೇಶಗಳಲ್ಲಿ ಆರಂಭಿಕನಾಗಿ ಅತಿಹೆಚ್ಚು ಶತಕ ಗಳಿಸಿದ ಭಾರತೀಯರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹೌದು. 3ನೇ ದಿನದಾಟದಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ರಾಹುಲ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ನಾಲ್ಕು ದೇಶಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎನಿಸಿಕೊಂಡರು. ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 13ನೇ ಟೆಸ್ಟ್ ಶತಕ ದಾಖಲಿಸಿದ ಬಳಿಕ ಈ ಸಾಧನೆಗೆ ಪಾತ್ರರಾದರು. ಈ ಇನ್ನಿಂಗ್ಸ್ನಲ್ಲಿ ಒಟ್ಟು 290 ಎಸೆತಗಳನ್ನು ಎದುರಿಸಿದ ರಾಹುಲ್ 136 ರನ್ (2 ಸಿಕ್ಸರ್, 9 ಬೌಂಡರಿ) ಚಚ್ಚಿ ಔಟಾದರು.
ದಿಗ್ಗಜರ ಎಲೈಟ್ ಲಿಸ್ಟ್ ಸೇರಿಕೊಂಡ ರಾಹುಲ್
ಅಷ್ಟೇ ಅಲ್ಲದೇ ಈ ಶತಕದೊಂದಿಗೆ ʻಸೇನಾʼ ದೇಶಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಏಷ್ಯನ್ ಬ್ಯಾಟರ್ಗಳ ಎಲೈಟ್ ಪಟ್ಟಿಗೂ ರಾಹುಲ್ ಸೇರಿಕೊಂಡರು. 34 ವರ್ಷದ ಕೆ.ಎಲ್ ರಾಹುಲ್ ಅವರು, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಸಯೀದ್ ಅನ್ವರ್, ರಾಹುಲ್ ದ್ರಾವಿಡ್, ಯೂನಿಸ್ ಖಾನ್, ಕುಮಾರ್ ಸಂಗಕ್ಕಾರ ಮತ್ತು ವಿರಾಟ್ ಕೊಹ್ಲಿ ನಂತರ ಈ ಸಾಧನೆ ಮಾಡಿದ 8ನೇ ಏಷ್ಯನ್ ಬ್ಯಾಟ್ಸ್ಮನ್ ಆದರು. ಒಟ್ಟಾರೆಯಾಗಿ ಈ ಮೈಲಿಗಲ್ಲು ತಲುಪಿದ 5ನೇ ಬ್ಯಾಟರ್ ಎಂಬ ಹೆಗ್ಗಳಿಗೂ ಪಾತ್ರರಾದರು.
ಸೇನಾ ದೇಶಗಳಲ್ಲಿ ಆರಂಭಿಕನಾಗಿ ಅತಿಹೆಚ್ಚು ಶತಕ ಗಳಿಸಿದ ಭಾರತೀಯರ ಪಟ್ಟಿ
* ಸುನೀಲ್ ಗವಾಸ್ಕರ್ – 8
* ಕೆ.ಎಲ್ ರಾಹುಲ್ – 7
* ವಿನೋದ್ ಮಂಕಡ್ – 3
* ರವಿಶಾಸ್ತ್ರಿ – 3
* ವೀರೇಂದ್ರ ಸೆಹ್ವಾಗ್ – 3
* ಯಶಸ್ವಿ ಜೈಸ್ವಾಲ್ – 3
KL RAHUL IS A SUPERSTAR IN INDIAN TEST CRICKET 🇮🇳 https://t.co/c0nrIS4J7S
— Johns. (@CricCrazyJohns) November 21, 2026
ʻಸೇನಾʼ ಕ್ರೀಡಾಂಗಣದಲ್ಲಿ ಕನ್ನಡಿಗನ ಸಾಮರ್ಥ್ಯಕ್ಕೆ ಸಾಕ್ಷಿಯಾದ ಶತಕಗಳ ಪಟ್ಟಿ
ಸಿಡ್ನಿಯಲ್ಲಿ – 110 ರನ್
ಕೊಲಂಬೊದಲ್ಲಿ – 108 ರನ್
ಕಿಂಗ್ಸ್ಟನ್ನಲ್ಲಿ – 158 ರನ್
ದಿ ಓವಲ್ನಲ್ಲಿ – 149 ರನ್
ಲಾರ್ಡ್ಸ್ನಲ್ಲಿ – 129 ರನ್
ಸೆಂಚುರಿಯನ್ನಲ್ಲಿ – 123 ರನ್
ಸೆಂಚುರಿಯನ್ನಲ್ಲಿ – 101 ರನ್
ಲೀಡ್ಸ್ನಲ್ಲಿ – 137 ರನ್
ಲಾರ್ಡ್ಸ್ನಲ್ಲಿ – 100 ರನ್
ವೆಲ್ಲಿಂಗ್ಟನ್ನಲ್ಲಿ – 136 ರನ್

