– ಜೆಡಿಎಸ್ಗೆ ಟಿಕೆಟ್ ಕೊಟ್ರೂ ಬಿಜೆಪಿ ಕೆಲಸ ಮಾಡುತ್ತೆ ಎಂದ ಆರ್. ಅಶೋಕ್
ಬೆಂಗಳೂರು: ಅಮಿತ್ ಶಾ ಭೇಟಿ ಬೆನ್ನಲ್ಲೇ ಹಿರಿಯೂರು ಉಪಚುನಾವಣೆ (Hiriyur BY Election) ಟಿಕೆಟ್ ವಿಚಾರವಾಗಿ ನಾಳೆ (ಭಾನುವಾರ) ದೋಸ್ತಿ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ನಾನು ನೆನ್ನೆ ಕುಮಾರಸ್ವಾಮಿ (HD Kumaraswamy) ಅವರ ಜೊತೆ ಫೋನ್ನಲ್ಲಿ ಹಿರಿಯೂರು ಬಗ್ಗೆ ಮಾತಾಡಿದೆ. ನಾಳೆ ಭೇಟಿ ಮಾಡಿ ಮಾತಾಡ್ತೇವೆ. ನಾಳೆ ಉಪಚುನಾವಣೆ ಗೆಲ್ಲುವ ಬಗ್ಗೆ, ಟಿಕೆಟ್ ಬಗ್ಗೆ ಮಾತನಾಡೋದಾಗಿ ತಿಳಿಸಿದ್ರು ಎಂದರು.
ಹಿರಿಯೂರು ಗೆಲ್ಲೋದು ಮುಖ್ಯ. ಜಗಳ, ತಕರಾರು, ಮನಸ್ತಾಪ ಇಲ್ಲದೇ ಟಿಕೆಟ್ ಹಂಚಿಕೆ ಆಗಲಿದೆ. ಬಿಜೆಪಿಗೆ ಕೊಟ್ರೂ ಜೆಡಿಎಸ್ ಕೆಲಸ ಮಾಡುತ್ತೆ, ಜೆಡಿಎಸ್ಗೆ ಕೊಟ್ರೂ ಬಿಜೆಪಿ ಕೆಲಸ ಮಾಡುತ್ತೆ. ಏನೋ ಆಗುತ್ತೆ ಅಂತ ಕಾಂಗ್ರೆಸ್ನವ್ರು ಕಾಯ್ತಿದ್ದಾರೆ. ಏನೂ ಆಗಲ್ಲ, ನಮ್ಮ ನಡುವೆ ಸಮನ್ವಯತೆ, ಹೊಂದಾಣಿಕೆ ಇದೆ ಎಂದು ಇದೇವೇಳೆ ಅಶೋಕ್ ತಿಳಿಸಿದರು.
ತಮ್ಮ ಈ ಹಿಂದಿನ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಅಶೋಕ್, ನಾನು ನಮ್ಮ ಪಕ್ಷಕ್ಕೆ ಟಿಕೆಟ್ ತೀರ್ಮಾನವಾಗಿದೆ ಅಂತ ಹೇಳಿಲ್ಲ. ಬೇಕಿದ್ರೆ ನನ್ನ ಹೇಳಿಕೆ ಕೇಳಿಸಿಕೊಳ್ಳಿ. ನಾವು ಸಹ ಟಿಕೆಟ್ ಕೇಳಿದ್ದೀವಿ ಅಂತ ಹೇಳಿದ್ದೆ. ಹೈಕಮಾಂಡ್ ನವ್ರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು.

