ಹಾಸನ: ಜಿಲ್ಲೆಯ ಬೇಲೂರು (Belur) ತಾಲೂಕಿನಿಂದ ಕಾಡಾನೆಗಳನ್ನು (Wild Elephant) ಓಡಿಸುವ ಐದನೇ ದಿನದ ಕಾರ್ಯಾಚರಣೆಯಲ್ಲಿ 38 ಕಾಡಾನೆಗಳು ಹಾಸನ ಜಿಲ್ಲೆಯ ಗಡಿದಾಟಿ ಭದ್ರಾ ಅಭಯಾರಣ್ಯದತ್ತ (Bhadra Sanctuary) ಹೆಜ್ಜೆ ಹಾಕಿವೆ.
ನಾಲ್ಕು ಸಲಗ, ಐದಕ್ಕೂ ಹೆಚ್ಚು ಮರಿಯಾನೆಗಳು ಹಾಗೂ ಇದೇ ಗುಂಪಿನಲ್ಲಿ ಕಾಡಾನೆ ಭೀಮಾ ಕೂಡ ಇದ್ದು, ರಾತ್ರಿಯಿಡೀ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಓಡಿಸಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ, ಕಾರಬೈಲು ಬಳಿ ಕಾಡಾನೆಗಳ ಗುಂಪು ಇದ್ದು, ಇಂದು ತತ್ಕೊಳ ಅರಣ್ಯದ ಮೂಲಕ ಭದ್ರಾ ಅಭಯಾರಣ್ಯದತ್ತ ಮತ್ತೆ ಕಾಡಾನೆಗಳನ್ನ ಅರಣ್ಯ ಇಲಾಖೆ ಓಡಿಸಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ಗಳಿಗೆ ಶಾಕ್ ಶಾಕ್ – 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿ
ಸಾಕಾನೆಗಳಿಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಯಶಸ್ವಿ ಕಾರ್ಯಾಚರಣೆ ನಡೆಯುತ್ತಿದ್ದು, ಸತತ ಐದನೇ ದಿನ ಕಾರ್ಯಾಚರಣೆ ನಡೆಸಿ ಬೇಲೂರು ತಾಲೂಕಿನ, ಕೋಗೋಡು ಗ್ರಾಮದ ಬಳಿಯ ಅರಮನೆ ಗುಡ್ಡದ ಬಳಿಯಿದ್ದ ಕಾಡಾನೆಗಳ ಗುಂಪನ್ನು ಹಾಸನ ಜಿಲ್ಲೆಯ ಗಡಿ ದಾಟಿಸಿದ್ದು, ಸದ್ಯ ತತ್ಕೋಳ ಅರಣ್ಯ ಪ್ರದೇಶದಿಂದ 8.5 ಕಿಲೋಮೀಟರ್ ದೂರದಲ್ಲಿ ಕಾಡಾನೆಗಳಿವೆ. ಇದನ್ನೂ ಓದಿ: ರಾಜಕೀಯ ಒತ್ತಡಕ್ಕೆ ಮಣಿಯಬೇಡಿ – ಜಪಾನ್ ಪ್ರವಾಸಕ್ಕೆ ತೆರಳುವ ಮುನ್ನ ʻಆಶಾʼಗಳಿಗೆ ಸಿಎಂ ಮನವಿ
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿಗಳು ಇಂದು ಮುಂಜಾನೆ 3 ಗಂಟೆಯವರೆಗೆ ಸುಮಾರು 6 ಕಿಲೋಮೀಟರ್ ದೂರ ಕಾಡಾನೆಗಳನ್ನು ಓಡಿಸಿದ್ದು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ತಂಡ ಮತ್ತು ಅಧಿಕಾರಿಗಳ ಸಮನ್ವಯದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಸಿಸಿಎಫ್ ಏಡುಕೊಂಡಲು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ರಸ್ತೆಬದಿ ನಿಂತಿದ್ದ ಟ್ರಕ್ಗೆ ಕ್ರೂಸರ್ ಡಿಕ್ಕಿ – ಒಂದೇ ಕುಟುಂಬದ 9 ಮಂದಿ ಭಕ್ತರು ದುರ್ಮರಣ
