ತಿರುವನಂತಪುರ: ಬಾಲಿವುಡ್ ನಟಿ ಸನ್ನಿ ಲಿಯೋನ್ ಗುರುವಾರ ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದು ಅಭಿಮಾನಿಗಳ ಸಾಗರವೇ ಅಲ್ಲಿ ನೆರೆದಿತ್ತು.
ಶೋ ರೂಂ ಒಂದರ ಉದ್ಘಾಟನೆಗಾಗಿ ಸನ್ನಿ ಲಿಯೋನ್ ಬಂದಿದ್ದು, ಕೊಚ್ಚಿಯ ಹೃದಯಭಾಗವಾದ ಧಾರವಾಹಿ ಎಂಜಿ ರಸ್ತೆಯಲ್ಲಿ ಸನ್ನಿ ಲಿಯೋನ್ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಅಭಿಮಾನಿಗಳು ತಮ್ಮ ಮೊಬೈಲ್‍ಗಳಲ್ಲಿ ಸನ್ನಿಯನ್ನು ಸೆರೆ ಹಿಡಿದುಕೊಂಡರು. ಈ ವೇಳೆ ಸ್ಥಳದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನಸಮೂಹ ಮತ್ತು ಸಂಚಾರವನ್ನು ನಿರ್ವಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
Advertisement
ಭೇಟಿ ಬಳೀಕ ಸನ್ನಿ ಲಿಯೋನ್ ಟ್ವಿಟರ್ ಮತ್ತು ಅವರ ಫೇಸ್‍ಬುಕ್ ಪುಟಗಳಲ್ಲಿ ಪ್ರೇಕ್ಷಕರ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಕೊಚ್ಚಿಯ ಜನರಿಗೆ ಧನ್ಯವಾದ ಹೇಳಲು ಯಾವುದೇ ಪದಗಳಿಲ್ಲ. ಪ್ರೀತಿ ವಿಶ್ವಾಸವಿಟ್ಟ ಕೇರಳವನ್ನು ಎಂದಿಗೂ ಮರೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ. . ಸನ್ನಿಗಾಗಿ ಸಮೂಹ ಸನ್ನಿಯ ದೃಶ್ಯ ಇದೀಗ ಎಲ್ಲೆಡೆ ಸಖತ್ ವೈರಲ್ ಆಗಿದೆ.
Advertisement
Advertisement
Hi! Photography by the most amazing @tomas_moucka truely knows how to capture a moment in time. #kochi #fone4 pic.twitter.com/qtqOjqdK10
— Sunny Leone (@SunnyLeone) August 17, 2017
Advertisement
My car in literally a sea of love in Kochi Kerala!! Thanks #fone4 pic.twitter.com/lLHTo8GyrC
— Sunny Leone (@SunnyLeone) August 17, 2017
No words…Can't thank the people of Kochi.Was so overwhelmed by the love&support.Never will forget Gods own Country Kerala!Thank you #fone4 pic.twitter.com/UTAnjlYvc5
— Sunny Leone (@SunnyLeone) August 17, 2017