ಯಶ್ (Yash), ರಣಬೀರ್ ಕಪೂರ್, ಸಾಯಿ ಪಲ್ಲವಿ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ (Ramayana) ಚಿತ್ರ 23ನೇ ದಿನದಂದು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಚಿತ್ರದ ದೇಶೀಯ ಗಳಿಕೆಯು 1,000 ಕೋಟಿ ರೂ. ದಾಟಿದೆ. ವಿಶ್ವಾದ್ಯಂತ 1,790.10 ಕೋಟಿ ರೂ. ಕ್ಲಬ್ ಸೇರಿದೆ.
ರಾಮಾಯಣ ಅಧಿಕೃತವಾಗಿ ಬಾಹುಬಲಿ 2 (Bahubali 2) ಅನ್ನು ಹಿಂದಿಕ್ಕಿ ಸಾರ್ವಕಾಲಿಕ ಮೂರನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಗಿದೆ. ಬಾಹುಬಲಿ 2 ರ ಲೈಫ್ಟೈಮ್ ಗಳಿಕೆ 1,788.06 ಕೋಟಿ ರೂ. ಆಗಿತ್ತು.
ಸ್ಯಾಕ್ನಿಲ್ಕ್ ಪ್ರಕಾರ, 23 ನೇ ದಿನದಂದು ರಾಮಾಯಣ 6,584 ಪ್ರದರ್ಶನಗಳಲ್ಲಿ 8.45 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಈ ಚಿತ್ರವು ವಿದೇಶಗಳಲ್ಲಿ ಇಲ್ಲಿಯವರೆಗೆ 595 ಕೋಟಿ ರೂ. ಗಳಿಸಿದೆ. ಇದು ವಿಶ್ವಾದ್ಯಂತ ಒಟ್ಟು ಸಂಗ್ರಹವನ್ನು 1,790 ಕೋಟಿ ರೂ.ಗೆ ಏರಿಸಿದೆ. ಇದನ್ನೂ ಓದಿ: ಭಾರತದಲ್ಲೇ 1,000 ಕೋಟಿ ಕಲೆಕ್ಷನ್ ಸಮೀಪದಲ್ಲಿ ರಾಮಾಯಣ; ಬಾಹುಬಲಿ-2 ಗಳಿಕೆ ಬ್ರೇಕ್ಗೆ ಕೌಂಟ್ಡೌನ್
23ನೇ ದಿನದಂದು, ಹಿಂದಿ ಆವೃತ್ತಿಯು 4,976 ಪ್ರದರ್ಶನಗಳಿಂದ ಒಟ್ಟು 5 ಕೋಟಿ ರೂ.ಗಳನ್ನು ಗಳಿಸಿದೆ. ನಂತರ ಕನ್ನಡದಲ್ಲಿ 1.25 ಕೋಟಿ ರೂ., ತಮಿಳಿನಲ್ಲಿ 1.05 ಕೋಟಿ ರೂ., ತೆಲುಗಿನಲ್ಲಿ 15 ಲಕ್ಷ ರೂ. ಮತ್ತು ಮಲಯಾಳಂನಲ್ಲಿ 1 ಕೋಟಿ ರೂ. ಗಳಿಸಿದೆ.
ನಮಿತ್ ಮಲ್ಹೋತ್ರಾ ನಿರ್ಮಾರಣದ ರಾಮಾಯಣ ಚಿತ್ರ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಒಂದು ತಿಂಗಳು ಪೂರೈಸಲಿದೆ. ಮಲ್ಹೋತ್ರಾ ಅವರು ನಿರ್ದೇಶಕ ನಿತೇಶ್ ತಿವಾರಿ, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರೊಂದಿಗೆ ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತ ಸೇರಿದಂತೆ ದೊಡ್ಡ ತಾರಾಗಣವಿದೆ. ಇದನ್ನೂ ಓದಿ: ಕೋರ್ಟ್ ಸಮಯ ವ್ಯರ್ಥ ಮಾಡ್ಬೇಡಿ – ರಾಮಾಯಣ ಸಿನಿಮಾ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ
