ಚೆನ್ನೈ: ಮುಂದಿನ ವಾರ ಕೇಂದ್ರವು ಸಂಸತ್ತಿನಲ್ಲಿ ತರಲು ಯೋಜಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು (Delimitation Bill) ಬೆಂಬಲಿಸುವುದಾಗಿ ಡಿಎಂಕೆ (DMK) ಸ್ಪಷ್ಟಪಡಿಸಿದೆ.
ಶನಿವಾರ ಬೆಳಗ್ಗೆ ನಡೆದ ಪಕ್ಷದ ಸಂಸದರ ಸಭೆಯಲ್ಲಿ, ಡಿಎಂಕೆ ಮಸೂದೆಯನ್ನು ಬೆಂಬಲಿಸಲು ನಿರ್ಧರಿಸಿತು. ಸಭೆಯ ನಂತರ ಪಕ್ಷದ ನಿಲುವನ್ನು ಸಂಸದ ಎ ರಾಜಾ ಸ್ಪಷ್ಟಪಡಿಸಿದರು. ಡಿಎಂಕೆ ಹೊಸ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: PoK ಭಾರತಕ್ಕೆ ಸೇರಿದ ತಕ್ಷಣ ಅಲ್ಲಿ ಕ್ಷೇತ್ರ ಪುನರ್ವಿಂಗಡಣೆ: ಚುನಾವಣಾ ಆಯೋಗಕ್ಕೆ ಪರಮಾಧಿಕಾರ ನೀಡಿದ ಕೇಂದ್ರ
ಡಿಎಂಕೆ ಸಂಸದ ದಯಾನಿಧಿ ಮಾರನ್ ಕೂಡ ಸದನದಲ್ಲಿ ಡಿಲಿಮಿಟೇಶನ್ ಮಸೂದೆಯನ್ನು ಪಕ್ಷ ಬೆಂಬಲಿಸುತ್ತದೆ ಎಂದು ಪುನರುಚ್ಚರಿಸಿದರು.
ತಮಿಳುನಾಡು ಸಂಸತ್ ಸ್ಥಾನಗಳಲ್ಲಿ ತನ್ನ ಪಾಲನ್ನು ಶೇ. 7.2 ರಷ್ಟು ಕಾಯ್ದುಕೊಳ್ಳುವುದರ ಬಗ್ಗೆ ಮತ್ತು ಮರು ರಚನೆಯಾದ ವಿಧಾನಸಭೆಯಲ್ಲಿ ರಾಜ್ಯದ ಪಾಲು ಪ್ರಸ್ತುತ 39 ರಿಂದ 59 ಕ್ಕೆ ಏರಿಕೆಯಾಗುವುದರ ಬಗ್ಗೆ ಪಕ್ಷ ಒಪ್ಪಿಗೆ ಸೂಚಿಸಿದೆ ಎಂದು ಡಿಎಂಕೆ ತಿಳಿಸಿದೆ.
ಶುಕ್ರವಾರ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಡಿಎಂಕೆಯ ನಿಲುವನ್ನು ಪುನರುಚ್ಚರಿಸಿದರು. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಲೋಕಸಭೆಗೆ 850, ವಿಧಾನಸಭೆಗೆ 650 ಗರಿಷ್ಠ ಮಿತಿ – ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಏನಿದೆ?
