-ಕಾರ್ಯಕ್ರಮ ಯಶಸ್ವಿಗೆ ಜೋಶಿ ಸಭೆ, ಸಿದ್ಧತೆ ಪರಿಶೀಲನೆ
ನವದೆಹಲಿ: ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯಲ್ಲಿ ಇಂದಿನಿಂದ ಆರಂಭವಾಗಲಿರುವ “ಕಾಶಿ-ತಮಿಳು ಸಂಗಮಂ 5.0” ಅದ್ಧೂರಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ನಡೆದಿದ್ದು, ಶುಕ್ರವಾರ (ನ.27) ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪರಿಶೀಲನೆ ಸಭೆ ನಡೆಸಿದರು.
ಉತ್ತರ ಪ್ರದೇಶ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ IIT ಮದ್ರಾಸ್ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪೂರ್ವಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ, ನಮೋ ಘಾಟ್ಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ಕಾರ್ಯಕ್ರಮದ ಸುಗಮ ನಿರ್ವಹಣೆ ಮತ್ತು ಯಶಸ್ವಿಗೊಳಿಸುವ ಕುರಿತು ಪರಾಮರ್ಶೆ ನಡೆಸಿದರು. ಇದನ್ನೂ ಓದಿ: ಒಂದು ಬಿಂದಿಗೆ ನೀರಿಗೆ 6 ರೂ., ಡ್ರಮ್ಗೆ 60 ರೂಪಾಯಿ – ಕಲಬುರಗಿ ಜಿಲ್ಲೆಯಲ್ಲಿ ಭೀಕರ ಬರಗಾಲ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನ.28ರಿಂದ ಡಿ.12ರವರೆಗೆ 15 ದಿನಗಳ ಕಾಲ ಜರುಗಲಿರುವ ನಡೆಯಲಿರುವ “ಕಾಶಿ ತಮಿಳ್ ಸಂಗಮಂ 5.0” ಕಾರ್ಯಕ್ರಮ ಕಾಶಿ ಮತ್ತು ತಮಿಳುನಾಡಿನ ನಡುವಿನ ಪುರಾತನ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ನಾಗರಿಕತೆಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ನಮ್ಮ ಸಾಂಸ್ಕೃತಿಕ ಏಕತೆಯನ್ನು ಮತ್ತಷ್ಟು ಬಲಪಡಿಸುವು ವೇದಿಕೆ ಆಗಲಿದೆ ಎಂದು ಅಭಿಪ್ರಾಯಿಸಿದರು.
ಸಕಲ ಸಿದ್ಧತೆ:
ಕಾಶಿ ಮತ್ತು ತಮಿಳುನಾಡಿನ ನಡುವಿನ ಶತಮಾನಗಳ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭಾಷಾ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ ಈ 5ನೇ ಆವೃತ್ತಿಯ `ಕಾಶಿ-ತಮಿಳ್ ಸಂಗಮಂ’ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದು, ಈ ಬಾರಿಯ ಕಾರ್ಯಕ್ರಮ `ತಿರುಕ್ಕುರಳ್ ಕಲಿಯೋಣ’ ಎಂಬ ವಿಶೇಷ ವಿಷಯವಸ್ತುವನ್ನು ಆಧರಿಸಿದೆ ಎಂದು ಹೇಳಿದರು.ಇದನ್ನೂ ಓದಿ: ಭಾರತದಲ್ಲೇ 1,000 ಕೋಟಿ ಕಲೆಕ್ಷನ್ ಸಮೀಪದಲ್ಲಿ ರಾಮಾಯಣ; ಬಾಹುಬಲಿ-2 ಗಳಿಕೆ ಬ್ರೇಕ್ಗೆ ಕೌಂಟ್ಡೌನ್
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ 2022ರಲ್ಲಿ ಆರಂಭವಾದ `ಕಾಶಿ-ತಮಿಳ್ ಸಂಗಮಂʼ ದೇಶದ ವಿವಿಧ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನಡುವಿನ ಬಾಂಧವ್ಯವನ್ನು ಬೆಸೆಯುತ್ತಿದೆ. ಯುವ ಜನತೆಗೆ ಭಾರತದ ಸಾಂಸ್ಕೃತಿಕ ಏಕತೆಯ ಪರಿಚಯ ಮಾಡಿಕೊಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಈ ಬಾರಿಯ ಸಂಗಮದಲ್ಲಿ ತಮಿಳುನಾಡಿನಿಂದ ಸುಮಾರು 1,400 ಪ್ರತಿನಿಧಿಗಳು ಏಳು ತಂಡಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಮಾಧ್ಯಮ ಪ್ರತಿನಿಧಿಗಳು, ರೈತರು, ವೃತ್ತಿಪರರು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ವಾರಾಣಸಿ ಮಾತ್ರವಲ್ಲದೆ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮ ಮತ್ತು ಅಯೋಂದಿಗೆ ನಂಟು ಹೊಂದಿರುವ ಸ್ಥಳಗಳ ವೀಕ್ಷಣೆ, ಶೈಕ್ಷಣಿಕ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಚಾರ ವಿನಿಮಯಕ್ಕೂ ಅವಕಾಶ ಕಲ್ಪಿಸಲಾಗಿದೆ.ಇದನ್ನೂ ಓದಿ: 12ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ – ಮನವೊಲಿಕೆಗೆ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಮುಂದಾದ ಯುಟಿ ಖಾದರ್
ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಈ ವಿಶಿಷ್ಠ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಡಿ.12ರ ಸಮಾರೋಪ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.
ಐಐಟಿ ಮದ್ರಾಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಹಾಗೂ ಉತ್ತರ ಪ್ರದೇಶ ಸರ್ಕಾರ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸುತ್ತಿವೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳ ಮೂಲಕ ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಯಾಗಿ ಕಾಶಿ-ತಮಿಳ್ ಸಂಗಮಂ ರೂಪುಗೊಂಡಿದೆ.ಇದನ್ನೂ ಓದಿ: ವಿಜಯಲಕ್ಷ್ಮಿ ಮ್ಯಾನೇಜರ್ಗೆ ಬೈದಿದ್ದು ನಿಜ: ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಧನ್ವೀರ್


