ಚೆನ್ನೈ: ಸುಪ್ರೀಂಕೋರ್ಟ್ನ (Supreme Court) ನಿರ್ದೇಶನದಂತೆ ಇಂದು (ನ.28) ತಮಿಳುನಾಡಿನ ತಿರುಪ್ಪರಂಕುಂದ್ರಂನಲ್ಲಿರುವ ದೀಪತ್ತೂನ್ ಕಲ್ಲಿನ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲಿದೆ. ಹೀಗಾಗಿ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಟ್ಟದ ಮೇಲಿರುವ ದೀಪತ್ತೂನ್ನಲ್ಲಿ ಸಾಂಪ್ರದಾಯಿಕ ದೀಪ ಬೆಳಗಲು ಅನುಮತಿ ನೀಡಿ, ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ, ನ.24ರಂದು ದೀಪವನ್ನು ಬೆಳಗದ ಕಾರಣ, ತನ್ನ ಹಿಂದಿನ ಆದೇಶ ಪಾಲನೆಯಾಗದಿರುವುದನ್ನು ಸುಪ್ರೀಂ ಗಂಭೀರವಾಗಿ ಪರಿಗಣಿಸಿತ್ತು. ಈ ವಿವಾದ ತೀವ್ರಗೊಂಡ ಬೆನ್ನಲ್ಲೇ, ಶುಕ್ರವಾರ (ನ.27) ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಈ ಭದ್ರತಾ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ವಾಹನದ ನಂಬರ್ ಪ್ಲೇಟ್ ಕಾಣದಿದ್ರೆ 5 ಪಟ್ಟು ದಂಡ; ವಾಹನಗಳಲ್ಲಿ ಫಾಸ್ಟ್ಯಾಗ್ ಕಾಣದಿದ್ರೂ ಫೈನ್
ಈ ಬಗ್ಗೆ ಖಚಿತಪಡಿಸಿರುವ ಹಿರಿಯ ಸಿಆರ್ಪಿಎಫ್ ಅಧಿಕಾರಿಯೊಬ್ಬರು, ಸಿಆರ್ಪಿಎಫ್ನ ಒಂದು ತುಕಡಿಯನ್ನು ನಿಯೋಜಿಸಲಾಗಿದೆ. ಉನ್ನತ ಮಟ್ಟದ ಅಧಿಕಾರಿಗಳು ಮುಂದಿನ ಸೂಚನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಅನುಮತಿ ನೀಡಿದ್ದ ಸುಪ್ರೀಂ:
ಈ ಆಚರಣೆಗೆ ಅನುಮತಿ ನೀಡಿ ಈ ಹಿಂದೆ ಮಧ್ಯಂತರ ಆದೇಶ ಹೊರಡಿಸಿದ್ದರೂ, ನವೆಂಬರ್ 24ರಂದು ದೀಪತ್ತೂನ್ನಲ್ಲಿ ದೀಪ ಬೆಳಗದ ಕಾರಣ ಸುಪ್ರೀಂ ಕೋರ್ಟ್ ಈ ಹೊಸ ನಿರ್ದೇಶನ ನೀಡಿದೆ. ಅಂದು ನಿಗದಿತ ಸ್ಥಳದ ಬದಲಿಗೆ, ಮಂಗಳವಾರ ನಡೆದ ವಾರ್ಷಿಕ ಕಾರ್ತಿಕ ದೀಪಂ ಆಚರಣೆಯ ಭಾಗವಾಗಿ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಬಳಿ ಮಹಾ ದೀಪವನ್ನು ಬೆಳಗಲಾಗಿತ್ತು.ಇದನ್ನೂ ಓದಿ: PUBLiC TV Explainer | ಕಾಡಿನ ಜೀವವೈವಿಧ್ಯ ಪರಿಚಯಿಸಲು ಬರುತ್ತಿದೆ ಮೊಬೈಲ್ ಮ್ಯೂಸಿಯಂ
ದೀಪತ್ತೂನ್ಗೆ ಸಂಬಂಧಿಸಿದ ಹಿಂದಿನ ನಿರ್ದೇಶನವನ್ನು ಜಾರಿಗೊಳಿಸಲು ಅಧಿಕಾರಿಗಳು ವಿಫಲವಾದ ನಂತರ ಈ ವಿವಾದ ತೀವ್ರಗೊಂಡಿತ್ತು. ಬೇರೆ ಸ್ಥಳದಲ್ಲಿ ಆಚರಣೆ ನಡೆದಿದ್ದರೂ, ನಿಗದಿತ ಸಮಾರಂಭಕ್ಕೂ ಮುನ್ನ ವಿವಾದಿತ ಸ್ತಂಭದ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಈ ಹಿಂದೆ, ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಪೀಠವು ಕೆಲವು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ನವೆಂಬರ್ 24ರಂದು ದೀಪ ಬೆಳಗಲು ಅನುಮತಿ ನೀಡಿತ್ತು. ಈ ಅನುಮತಿಯನ್ನು ಪೂರ್ವನಿದರ್ಶನವಾಗಿ ಪರಿಗಣಿಸುವಂತಿಲ್ಲ ಮತ್ತು ಇದು ಸ್ಥಳದ ಮಾಲೀಕತ್ವ ಅಥವಾ ಸಾಂಪ್ರದಾಯಿಕ ಧಾರ್ಮಿಕ ಹಕ್ಕುಗಳ ಕುರಿತಾದ ವ್ಯಾಪಕ ವಿವಾದಗಳನ್ನು ಇತ್ಯರ್ಥಪಡಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.ಇದನ್ನೂ ಓದಿ: PoK ಭಾರತಕ್ಕೆ ಸೇರಿದ ತಕ್ಷಣ ಅಲ್ಲಿ ಕ್ಷೇತ್ರ ಪುನರ್ವಿಂಗಡಣೆ: ಚುನಾವಣಾ ಆಯೋಗಕ್ಕೆ ಪರಮಾಧಿಕಾರ ನೀಡಿದ ಕೇಂದ್ರ
ಮಧ್ಯಂತರ ಆದೇಶ ಪ್ರಶ್ನಿಸಿದ್ದ ತಮಿಳುನಾಡು ಸರ್ಕಾರ:
ದೀಪತ್ತೂನ್ನಲ್ಲಿ ಕಾರ್ತಿಕ ದೀಪಂ ಬೆಳಗಲು ಅನುಮತಿ ನೀಡಿದ್ದ ಮಧ್ಯಂತರ ನಿರ್ದೇಶನವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ನವೆಂಬರ್ 20ರಂದು ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಈ ಕಲ್ಲಿನ ಸ್ತಂಭವು ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ಸಿಕಂದರ್ ಬಾದುಷಾ ದರ್ಗಾದ ಸಮೀಪವಿರುವುದರಿಂದ ಈ ವಿಷಯವು ವಿವಾದಾಸ್ಪದವಾಗಿದೆ.
