ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಎಸ್. ನಾರಾಯಣ್ (S Narayan) ಅವರ ಹೊಸ ಸಿನಿಮಾ (New film) ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ಸಿಂಪಲ್ ಆಗಿ ನಡೆದಿತ್ತು. ಈಗ ಚಿತ್ರತಂಡದಿಂದ ಒಂದು ಬಿಗ್ ಅಪ್ಡೇಟ್ ಸಿಕ್ಕಿದ್ದು, ಹಿರಿಯ ನಟಿ ಶ್ರುತಿ (Shruti) ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ನಟಿ ಶ್ರುತಿ ಮತ್ತು ಎಸ್. ನಾರಾಯಣ್ ಕಾಂಬಿನೇಷನ್ ಅಂದ್ರೆ ಪ್ರೇಕ್ಷಕರಿಗೆ ಯಾವಾಗಲೂ ಒಂದು ವಿಶೇಷ ಕ್ರೇಜ್ ಇರುತ್ತೆ. ಈ ಹಿಂದೆ ಇವರಿಬ್ಬರ ಜೋಡಿಯಲ್ಲಿ ‘ಭಾಮಾ ಸತ್ಯಭಾಮಾ’, ‘ತವರಿನ ತೊಟ್ಟಿಲು’, ‘ವೀರಪ್ಪನಾಯಕ’, ‘ಸಿರಿವಂತ’ ರೀತಿಯ ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಈಗ ಮತ್ತೊಮ್ಮೆ ಇವರಿಬ್ಬರೂ ಒಂದಾಗಿರೋದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಆದ್ರೆ ಶ್ರುತಿ ಅವರ ಪಾತ್ರ ಹೇಗಿರಲಿದೆ ಅನ್ನೋದನ್ನ ಚಿತ್ರತಂಡ ಸದ್ಯಕ್ಕೆ ಸೀಕ್ರೆಟ್ ಆಗಿಟ್ಟಿದೆ.
ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ವಿಶೇಷ ಅಂದ್ರೆ, ಎಸ್. ನಾರಾಯಣ್ ಮತ್ತು ಹರಿಕೃಷ್ಣ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಹಾಗಾಗಿ ಹಾಡುಗಳ ಮೇಲೆ ಈಗಲೇ ನಿರೀಕ್ಷೆ ಶುರುವಾಗಿದೆ.
ಇನ್ನು ತಾಂತ್ರಿಕ ವರ್ಗದಲ್ಲಿ ಗಿರಿಧರ್ ದಿವಾನ್ ಕ್ಯಾಮೆರಾ ಕೆಲಸ, ಶಿವಪ್ರಸಾದ್ ಯಾದವ್ ಎಡಿಟಿಂಗ್ ಮತ್ತು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಅಜಯ್ ಕ್ರಿಯೇಟಿವ್ ಹೆಡ್ ಆಗಿದ್ರೆ, ಪುಷ್ಪಮಾಲಾ ಪ್ರೊಡಕ್ಷನ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ.ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಬಿಲ್ ಮಂಡನೆ ನಿರೀಕ್ಷೆ; ಮ್ಯಾಜಿಕ್ ನಂಬರ್ಗೆ 40 ಮತಗಳ ಕೊರತೆ
ಸದ್ಯಕ್ಕೆ ಸಿನಿಮಾದ ಟೈಟಲ್ ಏನು, ನಿರ್ಮಾಪಕರು ಯಾರು ಮತ್ತು ಉಳಿದ ಕಲಾವಿದರು ಯಾರು ಅನ್ನೋದನ್ನ ಚಿತ್ರತಂಡ ರಿವೀಲ್ ಮಾಡಿಲ್ಲ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಒಟ್ಟಿನಲ್ಲಿ ಎಸ್. ನಾರಾಯಣ್ ನಿರ್ದೇಶನ, ಶ್ರುತಿ ಅವರ ಅಭಿನಯ ಮತ್ತು ಹರಿಕೃಷ್ಣ ಮ್ಯೂಸಿಕ್ ಸೇರಿ ಮತ್ತೊಂದು ಒಳ್ಳೆಯ ಫ್ಯಾಮಿಲಿ ಸಿನಿಮಾ ಬರೋದು ಪಕ್ಕಾ ಆಗಿದೆ.ಇದನ್ನೂ ಓದಿ: ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣ – ಚಾಲಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ KSRTC ಸೂಚನೆ
