– ಕೋರ್ಟ್ ಆದೇಶ ಪ್ರತಿ ಜೈಲು ಅಧಿಕಾರಿಗಳ ಕೈ ಸೇರಿದ ತಕ್ಷಣ ಚಿಕಿತ್ಸೆ ಶುರು
ಬೆಂಗಳೂರು: ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ನಟ ದರ್ಶನ್ಗೆ (Darshan) ಈಗ ಬೆನ್ನುನೋವಿನ ಸಮಸ್ಯೆ ಶುರುವಾಗಿದೆ. ನೋವು ಹೆಚ್ಚಾದ ಕಾರಣ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮಾಡಿಸಿಕೊಳ್ಳೋಕೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.
ದರ್ಶನ್ಗೆ ಬೆನ್ನುನೋವು ಜಾಸ್ತಿ ಆಗಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಅಂತ ಅವರ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದರು. ಜೊತೆಗೆ ಜೈಲಿನ ವೈದ್ಯರು ನೀಡಿದ್ದ ಹೆಲ್ತ್ ರಿಪೋರ್ಟ್ ಕೋರ್ಟ್ ಮುಂದೆ ಇಡಲಾಗಿತ್ತು.
ಅರ್ಜಿ ಮತ್ತು ವೈದ್ಯರ ರಿಪೋರ್ಟ್ ನೋಡಿದ ಬೆಂಗಳೂರಿನ ಸಿಸಿಎಚ್-59 ಕೋರ್ಟ್, ಖಾಸಗಿ ಆಸ್ಪತ್ರೆ ಬದಲು ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮಾಡಿಸಲು ಆದೇಶ ನೀಡಿದೆ.
ಕೋರ್ಟ್ ಆದೇಶ ಪ್ರತಿ ಜೈಲು ಅಧಿಕಾರಿಗಳ ಕೈ ಸೇರಿದ ತಕ್ಷಣ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ಶಿಫ್ಟ್ ಆಗಲಿದ್ದು, ಇವತ್ತೇ ಆಸ್ಪತ್ರೆಗೆ ಕರೆತರುವ ಸಾಧ್ಯತೆ ಇದೆ.ಇದನ್ನೂ ಓದಿ: ಜೈಲಿನಿಂದ ಹೊರಬರುತ್ತಿದ್ದಂತೆ ಎಂಇಎಸ್ ಮುಖಂಡ ಶುಭಂ ಶಳಕೆ ಉದ್ಧಟತನ – ಜೈ ಮರಾಠಿ, ಜೈ ಮಹಾರಾಷ್ಟ್ರ ಘೋಷಣೆ
ವಿಕ್ಟೋರಿಯಾ ಆಸ್ಪತ್ರೆಯ ಜೈಲು ವಾರ್ಡ್ನಲ್ಲಿ ದರ್ಶನ್ಗೆ ಜಿಕಿತ್ಸೆ ಸಿಗಲಿದೆ. ಅಲ್ಲಿನ ನುರಿತ ವೈದ್ಯರು ಫಿಸಿಯೋಥೆರಪಿ ಶುರು ಮಾಡಲಿದ್ದಾರೆ.ಇದನ್ನೂ ಓದಿ: 11ನೇ ತರಗತಿ ಓದಿದ್ದವನಿಗೆ ಡಾಕ್ಟರ್ ಕೆಲಸ – 15 ಲಕ್ಷ ರೂ.ನಂತೆ 300 ಜನಕ್ಕೆ ನಕಲಿ ವೈದ್ಯಕೀಯ ಪದವಿ ಸೇಲ್!
