– ಆಡಿಗೆ ಗಡ್ಡ ಬಿಟ್ಟರೆ ಏನು ಪ್ರಯೋಜನ? ಎಂದು ಲೇವಡಿ
ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ದ್ರಾವಿಡ ಮುನ್ನೇತ್ರ ಕಳಗಂ (DMK) ವಿರುದ್ಧ ಗಂಭೀರ ಆರೋಪ ಮಾಡಿದೆ. ಮಹಿಳಾ ಮೀಸಲಾತಿ ಮಸೂದೆಯನ್ನ ಕ್ಷೇತ್ರ ಮರುವಿಂಗಡಣೆಯೊಂದಿಗೆ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಮುಂದಾಗಿರುವ ಬೆನ್ನಲ್ಲೇ, ಡಿಎಂಕೆ ಬಿಜೆಪಿಯೊಂದಿಗೆ ಕೈಜೋಡಿಸಲು ಸಿದ್ಧತೆ ನಡೆಸುತ್ತಿದೆ ಎಂದು ಟಿವಿಕೆ ಆರೋಪಿಸಿದೆ.
ಕೇಂದ್ರ ಸರ್ಕಾರವು (Central Government) ಇದೇ ನವೆಂಬರ್ 30 ರಿಂದ ಡಿಸೆಂಬರ್ 3ರ ವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಪ್ರಸ್ತಾಪಿಸಿದೆ. ಇದರಂತೆ ನವೆಂಬರ್ 30ರಂದು ಲೋಕಸಭೆ ಹಾಗೂ ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪಗಳು ಪುನರಾರಂಭಗೊಳ್ಳಲಿವೆ.
“ஆட்டுக்குத் தாடியும் நாட்டுக்கு ஆளுநரும் எதற்கு?” என்று கேட்ட பேரறிஞர் அண்ணாவின் திமுகவை கபளீகரம் செய்து, குடும்பக் கட்சியாக மாற்றிய மண்ணாங்கட்டிப் பரம்பரை, தாங்கள் கொள்கைக் குன்றுகள் என்று மேடைக்கு மேடை முழங்குவதெல்லாம் வெறும் வாய்ச்சவடால் என்பதை இன்றைய ஆளுநர் சந்திப்பின் மூலம் நிரூபிக்கிறது.
ஆட்சியில் இருந்தவரை ஆளுநரைப் பேசவிடாமல் செய்துவிட்டோம் என்று கொக்கரித்துவிட்டு, இப்போது “ஆபத்பாந்தவனே” என்று ஆளுநரின் காலில் விழவும் தயாராகிவிட்டனர்.
“கலைஞரின் ஆசி பெற்ற சின்னம் தாமரை” என்ற வரலாறு மீண்டும் அரங்கேறப் போகிறது. அதற்கான அறிகுறிதான், சுமார் 14 ஆண்டுகளுக்குப் பிறகு உதயநிதி தலைமை நிர்வாகியாக இருக்கும் முரசொலியில் பாஜகவின் மாநிலத் தலைவரின் நேர்காணல் இடம்பெற்றிருப்பது.
பாசிசப் பாயாசம் பருகக் கொத்தடிமைகள் தயாராக இருக்கையில், மண்ணாங்கட்டிப் பரம்பரைக்கு கொள்கையாவது, கொய்யாக்காயாவது என்ற மனநிலைதான் !
அன்று போலவே பாஜகவைத் தமிழ்நாட்டில் வளர்க்கும் பணியை திமுக தலைமையேற்று நடத்தவிருக்கிறது.
திமுக ஒரு தீயசக்தி என்பதை மீண்டும் மீண்டும் நிரூபிக்கும் மண்ணாங்கட்டிப் பரம்பரைக்கு வாழ்த்துகள் !
— TVK IT Wing Official (@TVKHQITWingOffl) November 26, 2026
ಡಿಎಂಕೆ ತನ್ನ ಸೈದ್ಧಾಂತಿಕ ನಿಲುವನ್ನು ಕೈಬಿಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ, ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಸಿ.ಎನ್. ಅಣ್ಣಾದುರೈ ಅವರ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸಿದೆ.
‘ಆಡಿಗೆ ಗಡ್ಡವಿದ್ದರೆ ಏನು ಪ್ರಯೋಜನ? ದೇಶಕ್ಕೆ ರಾಜ್ಯಪಾಲರಿದ್ದರೆ ಏನು ಪ್ರಯೋಜನ?’ ಎಂಬ ಅಣ್ಣಾದುರೈ ಅವರ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಟಿವಿಕೆ ಡಿಎಂಕೆ ಪಕ್ಷವನ್ನ ಟೀಕಿಸಿದೆ.
ವಿಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನ ಭೇಟಿಯಾದ ಬೆನ್ನಲ್ಲೇ ಟಿವಿಕೆ ಈ ವಾಗ್ದಾಳಿ ನಡೆಸಿದೆ. ಈ ಭೇಟಿಯು ಡಿಎಂಕೆ ಬಿಜೆಪಿಯತ್ತ ಒಲವು ತೋರುತ್ತಿರುವುದರ ಸೂಚನೆ ಎಂದು ಟಿವಿಕೆ ವ್ಯಾಖ್ಯಾನಿಸಿದೆ.
ಎಕ್ಸ್ನಲ್ಲಿ ಏನಿದೆ ಆರೋಪ?
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಿವಿಕೆ, ʻಮಹಾನ್ ವಿದ್ವಾಂಸ ಅಣ್ಣಾ ಅವರ ಡಿಎಂಕೆಯನ್ನ ನುಂಗಿಹಾಕಿ, ಅದನ್ನು ಕುಟುಂಬದ ಪಕ್ಷವನ್ನಾಗಿ ಪರಿವರ್ತಿಸಿರುವ ಮಣ್ಣಿನ ಗೊಂಬೆಗಳ ವಂಶಸ್ಥರು, ರಾಜ್ಯಪಾಲರೊಂದಿಗಿನ ಇಂದಿನ ಭೇಟಿಯ ಮೂಲಕ ತಮ್ಮ ಸೈದ್ಧಾಂತಿಕ ಬದ್ಧತೆಯ ಬಗ್ಗೆ ವೇದಿಕೆ ವೇದಿಕೆಗಳಲ್ಲಿ ಮಾಡುತ್ತಿರುವ ದೊಡ್ಡ ದೊಡ್ಡ ಹೇಳಿಕೆಗಳೆಲ್ಲವೂ ಕೇವಲ ಬೂಟಾಟಿಕೆ ಎಂಬುದನ್ನ ಸಾಬೀತುಪಡಿಸಿದ್ದಾರೆʼ ಎಂದು ಟೀಕಿಸಿದೆ.
ʻತಾವು ಅಧಿಕಾರದಲ್ಲಿದ್ದಾಗ ರಾಜ್ಯಪಾಲರು ಮಾತನಾಡದಂತೆ ತಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು, ಈಗ ಅದೇ ರಾಜ್ಯಪಾಲರ ಕಾಲಿಗೆ ಬಿದ್ದು, ʻʻಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುವ ರಕ್ಷಕʼʼ ಎಂದು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದೆ. ಇದಲ್ಲದೆ, ಡಿಎಂಕೆ ಮುಖವಾಣಿ ‘ಮುರಸೋಲಿ’ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಸಂದರ್ಶನ ಪ್ರಕಟವಾಗಿದೆ ಎಂದು ಟೀಕಿಸಿದೆ.
ʻಕಲೈಞರ್ ಅವರ ಆಶೀರ್ವಾದ ಪಡೆದ ಕಮಲದ ಚಿಹ್ನೆಯ ಇತಿಹಾಸ ಮತ್ತೊಮ್ಮೆ ಪುನರಾವರ್ತನೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಸುಮಾರು 14 ವರ್ಷಗಳ ಬಳಿಕ, ಉದಯನಿಧಿ ಮುಖ್ಯ ಕಾರ್ಯನಿರ್ವಹಣೆಯಲ್ಲಿರುವ ಮುರಸೋಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನ ಪ್ರಕಟವಾಗಿರುವುದು ಇದಕ್ಕೆ ಸಾಕ್ಷಿʼ ಎಂದು ಟಿವಿಕೆ ಹೇಳಿದೆ.
ತಮಿಳುನಾಡಿನಲ್ಲಿ ಬಿಜೆಪಿಯನ್ನು ಬೆಳೆಸುವ ಹೊಣೆಗಾರಿಕೆಯನ್ನ ಡಿಎಂಕೆ ವಹಿಸಿಕೊಳ್ಳಲು ಮುಂದಾಗಿದೆ. ಫ್ಯಾಸಿಸ್ಟ್ಗಳ ಸಿದ್ಧಾಂತವನ್ನು ಸ್ವೀಕರಿಸಲು ಸಿದ್ಧರಾಗಿರುವವರ ನಡುವೆ, ಮಣ್ಣಿನ ಗೊಂಬೆಗಳ ವಂಶಸ್ಥರು ಕನಿಷ್ಠ ಪಕ್ಷ ಯಾವುದಾದರೂ ಒಂದು ಸಿದ್ಧಾಂತವಿರಲಿ, ಇಲ್ಲವೇ ಎಲೆಮರೆ ಕಾಯಿಯಂತಾದರೂ ಇರಲಿ ಎಂಬ ಮನಸ್ಥಿತಿಯಲ್ಲಿದ್ದಾರೆ. ಹಿಂದಿನಂತೆ ಈಗಲೂ ತಮಿಳುನಾಡಿನಲ್ಲಿ ಬಿಜೆಪಿಯನ್ನ ಬೆಳೆಸುವ ಕೆಲಸಕ್ಕೆ ಡಿಎಂಕೆಯೇ ಮುಂದಾಗುವಂತಿದೆ. ಡಿಎಂಕೆ ಒಂದು ದುಷ್ಟ ಶಕ್ತಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವ ಆ ಪಕ್ಷದ ಕುಟುಂಬ ರಾಜಕಾರಣಕ್ಕೆ ಅಭಿನಂದನೆಗಳು ಎಂದು ಟಿವಿಕೆ ತನ್ನ ಹೇಳಿಕೆಯಲ್ಲಿ ಆಕ್ರೋಶ ಹೊರಹಾಕಿದೆ.

