ಬೆಂಗಳೂರು: ಸರ್ದಾರ್ ಪಟೇಲ್, ನೆಹರೂ ಅವರು ಆರ್‌ಎಸ್‌ಎಸ್ (RSS) ಬ್ಯಾನ್ ಮಾಡಿದಾಗ ಕೈಕಾಲು ಹಿಡಿದವರು ಇದೇ ಆರ್‌ಎಸ್‌ಎಸ್‌ನವರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ಸಿ.ಟಿ ರವಿ (CT Ravi) ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಟಿ ರವಿಯವರಿಗೆ ಆರ್‌ಎಸ್‌ಎಸ್‌ನ ಇತಿಹಾಸವೇ ಗೊತ್ತಿಲ್ಲ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇವರ ಸಂಚಾಲಕರೇ ಪತ್ರ ಬರೆದಿದ್ದರು. ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಅಂದರೆ ಅವರಿಗೆ ಯಾಕಷ್ಟು ಭಯ? ಈ ಸಂವಿಧಾನದ ಅಡಿಯಲ್ಲಿ ಈ ಕಾನೂನಿಗೆ ನಾವು ಒಳಪಡೋದಿಲ್ಲ ಅಂತ ನಂಗೆ ಹೇಳಲಿ. ನಾನೇ ಅವರ ಕೇಶವಕೃಪಗೆ ಹೋಗ್ತೀನಿ, ಇಲ್ಲ ಅವರೇ ನನ್ನ ಆಫೀಸ್‌ಗೆ ಬಂದು ತೋರಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಖ್ಯ ಶಿಕ್ಷಕರ ಕಿರುಕುಳ ಆರೋಪ – ಶಾಲೆಯ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ
ಈ ದೇಶದಲ್ಲಿ ಬೀದಿ ವ್ಯಾಪಾರಿಯೂ ರಿಜಿಸ್ಟರ್ ಮಾಡಿಕೊಳ್ಳಬೇಕು, ದೇವಸ್ಥಾನ ನೋಂದಣಿ ಮಾಡಬೇಕು. ದೇವರು ಲೆಕ್ಕ ಕೊಡಬೇಕು, ಜನರು ಲೆಕ್ಕ ಕೊಡಬೇಕು ಐಟಿ ಮುಂದೆ ಲೆಕ್ಕ ಕೊಡಲೇಬೇಕು. ಇವರು ಮಾತ್ರ ಯಾವ ಲೆಕ್ಕವನ್ನು ಕೊಡುವ ಹಾಗೆ ಇಲ್ವಾ? ಇವರ ದೇಣಿಗೆಗೆ ಯಾವುದೇ ಲೆಕ್ಕವನ್ನು ಕೊಡುವ ಹಾಗಿಲ್ವಾ? ಇವರು ಯಾವ ರೀತಿ ಹೇಡಿಗಳ ರೀತಿ ಕೈಕಾಲಿಗೆ ಬೀಳುತ್ತಾರೆ ಗೊತ್ತಿಲ್ವಾ? ಅವರೇ ಬರೆದಿರೋ ಇತಿಹಾಸ ಇದೆ. ವೀರಸಾವರ್ಕರ್ 60 ರೂಪಾಯಿ ಪಿಂಚಣಿ ತೆಗೆದುಕೊಳ್ಳುತ್ತಿದ್ದರು. ಬ್ರಿಟಿಷರ ಬಳಿ ಪಿಂಚಣಿ ಪಡೆಯುತ್ತಾ ಇದ್ದರು. ಸರ್ದಾರ್ ಪಟೇಲ್ ಹತ್ತಿರ ಕೈಕಾಲಿಗೆ ಬಿದ್ದಿದ್ದಾರೆ ಇವರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಐಸ್‌ಕ್ರೀಂ ಬೇಕಂತ ಹಠ ಮಾಡಿದ್ದಕ್ಕೆ ಮಗುವಿಗೆ ಒದ್ದು, ಉಸಿರುಗಟ್ಟಿಸಿ ಕೊಲೆ: ಪೊಲೀಸರ ಬಳಿ ಸತ್ಯ ಬಿಚ್ಚಿಟ್ಟ ಆರೋಪಿ ಮೋಹನ್
ಪಬ್, ಬಾರ್‌ಗಳಲ್ಲಿ ಐಡಿ ಕಾರ್ಡ್ ಪರಿಶೀಲನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಸಾಕಷ್ಟು ದೂರುಗಳು ಬರುತ್ತಿತ್ತು. ಶಾಲಾ – ಕಾಲೇಜು ಮಕ್ಕಳು ಪಬ್‌ಗೆ ಹೋಗುತ್ತಿದ್ದಾರೆ. ಮಾದಕ ವಸ್ತು ಸೇವಿಸಿ, ಸಿಗರೇಟ್, ಮದ್ಯಪಾನ ಮಾಡುತ್ತಿದ್ದಾರೆ ಎಂದ ದೂರುಗಳು ಬರುತ್ತಿತ್ತು. ಹೀಗಾಗಿ ಒಂದು ಆದೇಶ ಹೊರಡಿಸಲಾಗಿದೆ. ಪಬ್ ಮತ್ತು ಬಾರ್‌ಗಳಲ್ಲಿ ಕಡ್ಡಾಯವಾಗಿ ಐಡಿ ಪರಿಶೀಲನೆ ಮಾಡಲೇಬೇಕು ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: 18 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ – ತೆಲಂಗಾಣದ ಉನ್ನತ ಅಧಿಕಾರಿಯ ಬಂಧನ
ಬಿಟ್ ಕಾಯಿನ್ ವಿಚಾರದಲ್ಲಿ ನಲ್ಪಾಡ್ ಚಾರ್ಜ್ ಶೀಟ್ ವಿಚಾರವಾಗಿ ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಮ್ಮ ಎಸ್‌ಐಟಿ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ನಾವು ಬಿಟ್ ಕಾಯಿನ್ ವಿರುದ್ಧ ಹೋರಾಟ ಮಾಡಿದೆವು. ನಲ್ಪಾಡ್ ಮಾತ್ರ ಅಲ್ಲ ಬೇರೆ ಅವರು ಕೂಡ ಆರೋಪಿಗಳು ಇದ್ದಾರೆ. ಇಡಿ ಅವರು ಸಮನ್ಸ್ ಕೊಟ್ಟಿದ್ದಾರೆ. ಸಮನ್ಸ್‌ಗೆ ನಲ್ಪಾಡ್ ಉತ್ತರ ಕೊಡುತ್ತಿಲ್ಲ ಎಂಬ ಮಾಹಿತಿ ಬಂದಿದೆ. ವಿಚಾರಣೆಗೆ ಬರ್ತಾರಾ, ಇಲ್ವಾ ಅಂತ ಇಡಿ ಅವರ ಬಳಿ ಕೇಳಿ ಎಂದು ಹೇಳಿದರು. ಇದನ್ನೂ ಓದಿ: ಡಿಕೆ ಸರ್ಕಾರದಲ್ಲಿ ಸಂಪುಟ ಕಸರತ್ತು – ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ ಸಿಎಂ
