ಕಳೆದ ಕೆಲವು ದಿನಗಳಿಂದ ನಾದಬ್ರಹ್ಮ ಹಂಸಲೇಖ (Hamsalekha) ಅವರಿಗೆ ಕೇಂದ್ರ ಸರ್ಕಾರದ ಅತ್ಯುನ್ನತ ಗೌರವಗಳಾದ ಜ್ಞಾನಪೀಠ ಹಾಗೂ ಪದ್ಮ ಪ್ರಶಸ್ತಿ ನೀಡಬೇಕು ಎಂದು ನಟ ಪ್ರೇಮ್ (Actor Prem) ಅಭಿಯಾನ ಆರಂಭಿಸಿದ್ದರು. ಈ ಅಭಿಯಾನ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು. ಇದೀಗ ಖುದ್ದು ಹಂಸಲೇಖ ಈ ಚರ್ಚೆಗೆ ತೆರೆ ಎಳೆದಿದ್ದು, ಅಭಿಯಾನವನ್ನೇ ನಿಲ್ಲಿಸುವಂತೆ ಬಹಿರಂಗ ಪತ್ರ ಬರೆದು ಮನವಿ ಮಾಡಿದ್ದಾರೆ.
ಹಂಸಲೇಖ ಅವರಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ ಸಿಗಬೇಕು ಎಂಬ ಅಭಿಯಾನ ಆರಂಭವಾದ ಎರಡೇ ದಿನಕ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ಕನ್ನಡದ ಆಣೆ… ಇದಕ್ಕೆ ನನ್ನ ಒಪ್ಪಿಗೆ ಇಲ್ಲ. ಇದು ಅನಗತ್ಯವಾದ ಅಭಿಮಾನದ ದುಡುಕು. ಇದು ಪ್ರೀತಿಯ ತೊಂದರೆ. ಸೀನ್‌ಗೂ, ಟ್ಯೂನ್‌ಗೂ, ಲಿರಿಕ್ಸ್‌ಗೂ ಹೊಂದಾಣಿಕೆ ಇಲ್ಲದ ಫ್ಲಾಪ್ ಸಾಂಗಿದು. ದಯವಿಟ್ಟು ಇದನ್ನು ನಿಲ್ಲಿಸಿ. ನೆನಪಿರಲಿ ಪ್ರೀತಿಯ ಪ್ರೇಮ್” ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಶಿವಮೊಗ್ಗದಲ್ಲೂ ಪ್ರತಿಭಟನೆಯ ಕಿಚ್ಚು – 1 ಕಿಮೀ ಓಡಿ ಬಿಜೆಪಿ ಕಚೇರಿಗೆ ನುಗ್ಗಿದ ʻಕೈʼ ಕಾರ್ಯಕರ್ತರು

300ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ಸಂಗೀತ ಮತ್ತು ಸಾಹಿತ್ಯ ನೀಡಿರುವ ಹಂಸಲೇಖ ಅವರಿಗೆ ಇದುವರೆಗೂ ಕೇಂದ್ರ ಸರ್ಕಾರದ ಪ್ರಮುಖ ಪ್ರಶಸ್ತಿಗಳು ಲಭಿಸಿಲ್ಲ. ಇತ್ತೀಚೆಗೆ ಎಸ್. ಜಾನಕಿ ಅವರ ನಿಧನದ ಬಳಿಕ, ಗೌರವಗಳು ಬದುಕಿರುವಾಗಲೇ ಸಲ್ಲಬೇಕು ಎಂಬ ಚರ್ಚೆ ಮತ್ತೆ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ನೀಡಬೇಕು ಎಂದು ನಟ ಪ್ರೇಮ್ ಅಭಿಯಾನ ಆರಂಭಿಸಿದ್ದರು. ಆದರೆ ಇದೀಗ “ಕನ್ನಡದ ಆಣೆ” ಎಂದು ಹೇಳುವ ಮೂಲಕ ಹಂಸಲೇಖ ಸ್ವತಃ ಅಭಿಯಾನವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಸೌದಿಯ ಎರಡು ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದ್ದು ನಾವೇ – ಹೊಣೆ ಹೊತ್ತ ಹೌತಿ ಬಂಡುಕೋರರು
