ಟೊಕಿಯೊ: ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು (Mirabai Chanu) ಕೊನೆಗೂ ಏಷ್ಯನ್ ಗೇಮ್ಸ್ ಪದಕದ ಬರ ನೀಗಿಸಿಕೊಂಡಿದ್ದಾರೆ.
2026ರ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ (Asian Games 2026) ಬುಧವಾರ ನಡೆದ ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಚಾನು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದು ಏಷ್ಯನ್ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಅವರ ಚೊಚ್ಚಲ ಪದಕವಾಗಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ – ಮಹಿಳಾ ಕ್ರಿಕೆಟ್ ತಂಡಕ್ಕೆ ಸತತ 2ನೇ ಪದಕ
Mirabai Chanu nails all her three Snatch attempts, successfully lifting 83kg, 85kg and 87kg in a perfect start to her Asian Games campaign! 🔥
Watch the 20th Asian Games Aichi-Nagoya LIVE on Sony Sports Network TV channels & Sony LIV.#SonySportsNetwork #SonyLIV #AsianGames… pic.twitter.com/E1DnrjOhuB
— Sony Sports Network (@SonySportsNetwk) September 23, 2026
ಸ್ನ್ಯಾಚ್‌ನಲ್ಲಿ 87 ಕೆ.ಜಿ., ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 111 ಕೆ.ಜಿ ಒಟ್ಟು 198 ಕೆಜಿ ಭಾರ ಎತ್ತುವ ಮೂಲಕ ಚಾನು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಒಟ್ಟು 215 ಕೆಜಿ ಭಾರ ಎತ್ತಿದ ಉತ್ತರ ಕೊರಿಯಾದ ರಿ ಸಾಂಗ್-ಗಮ್ ಸತತ 3ನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ರೆ, ಇಂಡೋನೇಷ್ಯಾದ ಲುಲುಕ್ ಡಯಾನಾ ಟ್ರಿ ವಿಜಯಾನಾ 191 ಕೆ.ಜಿ. ಒಟ್ಟು ಭಾರ ಎತ್ತಿ ಕಂಚಿನ ಪದಕ ಗೆದ್ದರು. ಇದನ್ನೂ ಓದಿ: ಭಾರತಕ್ಕೆ 2 ರನ್ ರೋಚಕ ಜಯ – 16 ರನ್ ಹೊಡೆದ ಅಯ್ಯರ್‌ಗೆ ಪಂದ್ಯಶ್ರೇಷ್ಠ

ಮೀರಾಬಾಯಿ ಮೈಲಿಗಲ್ಲು
ಈ ಬೆಳ್ಳಿ ಪದಕದೊಂದಿಗೆ ಮೀರಾಬಾಯಿ ಚಾನು ಮತ್ತೊಂದು ಮಹತ್ವದ ಮೈಲಿಗಲ್ಲನ್ನೂ ತಲುಪಿದ್ದಾರೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್, ಏಷ್ಯನ್ ಹಾಗೂ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಕೂಟಗಳಲ್ಲಿ ಪದಕ ಗೆದ್ದ 2ನೇ ಭಾರತೀಯ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೂ ಚಾನು ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯರು ಕರ್ಣಂ ಮಲ್ಲೇಶ್ವರಿ.
8ನೇ ಸ್ಥಾನಕ್ಕೆ ಏರಿಕೆ
ಈ ಬೆಳ್ಳಿ ಪದಕದ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನಕ್ಕೆ ಜಿಗಿದಿದೆ. 1 ಚಿನ್ನ, ತಲಾ 4 ಬೆಳ್ಳಿ ಹಾಗೂ 4 ಕಂಚಿನೊಂದಿಗೆ 9 ಪದಕಗಳನ್ನ ಭಾರತ ಗೆದ್ದುಕೊಂಡಿದೆ.

