– ‘ಹನುಮಾನ್ ಅಂಶ್’ ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿಗೆ ಮನ್ನಣೆ
ಗೋವಾ: 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI 2026) ಇಂದು ಗೋವಾದಲ್ಲಿ ನಡೆದ ಅದ್ಧೂರಿ ಸಮಾರಂಭದೊಂದಿಗೆ ತೆರೆಕಂಡಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ದೇಶ-ವಿದೇಶಗಳ ಹಲವು ಅತ್ಯುತ್ತಮ ಚಿತ್ರಗಳು ಹಾಗೂ ಕಲಾವಿದರನ್ನ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಬಾರಿಯ ಪ್ರಮುಖ ಪ್ರಶಸ್ತಿಗಳಲ್ಲಿ ಕನ್ನಡದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ (ಪುರುಷ) ವಿಭಾಗದ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡರು. ಮತ್ತೊಂದೆಡೆ, ‘ಹನುಮಾನ್ ಅಂಶ್’ ಚಿತ್ರ ನಿರ್ದೇಶನಕ್ಕಾಗಿ ವಿಶಾಲ್ ಚತುರ್ವೇದಿ ಅವರು ಭಾರತೀಯ ಚಲನಚಿತ್ರ ವಿಭಾಗದ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರು.
ಇನ್ನು ಪೋರ್ಚುಗೀಸ್-ಫ್ರೆಂಚ್ ಚಿತ್ರ ‘Aquí’ ಅತ್ಯುತ್ತಮ ಚಿತ್ರದ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಟಿಯಾಗೊ ಗುಡೆಸ್ ನಿರ್ದೇಶನದ ಈ ಚಿತ್ರ ಅಂತಾರಾಷ್ಟ್ರೀಯ ವಿಭಾಗದಲ್ಲಿ ಗಮನ ಸೆಳೆಯಿತು
ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
* ಅತ್ಯುತ್ತಮ ಚಿತ್ರ – ಗೋಲ್ಡನ್ ಪೀಕಾಕ್: ‘Aquí’ – ನಿರ್ದೇಶನ: ಟಿಯಾಗೊ ಗುಡೆಸ್
* ಅತ್ಯುತ್ತಮ ನಿರ್ದೇಶಕ – ಸಿಲ್ವರ್ ಪೀಕಾಕ್: ವೋಲ್ಕರ್ ಶ್ಲೊಂಡಾರ್ಫ್ – ‘Visitation’
* ಸ್ಪೆಷಲ್ ಮೆನ್ಷನ್ (ವಿಶೇಷ ಉಲ್ಲೇಖ): ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’
* ಅತ್ಯುತ್ತಮ ಚೊಚ್ಚಲ ಚಿತ್ರ – ಸಿಲ್ವರ್ ಪೀಕಾಕ್: ‘The Golden Age’ – ಬೆರೆಂಜರ್ ಥೌಯಿನ್
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಸಿಲ್ವರ್ ಪೀಕಾಕ್: ‘The River Train’
* ಅತ್ಯುತ್ತಮ ನಟಿ – ಸಿಲ್ವರ್ ಪೀಕಾಕ್: ಮಾಯಾ ಓ’ರೂರ್ಕ್ – ‘The Meltdown’
* ಅತ್ಯುತ್ತಮ ನಟ – ಸಿಲ್ವರ್ ಪೀಕಾಕ್: ರಿಷಬ್ ಶೆಟ್ಟಿ – ‘ಕಾಂತಾರ: ಚಾಪ್ಟರ್ 1’
* ಅತ್ಯುತ್ತಮ ವೆಬ್ ಸರಣಿ OTT ಪ್ರಶಸ್ತಿ: ‘Made In India: A Titan Story’ – ನಿರ್ದೇಶನ: ರಾಬಿ ಗ್ರೆವಾಲ್
* ಅತ್ಯುತ್ತಮ ಚೊಚ್ಚಲ ನಿರ್ದೇಶಕ: ವಿಶಾಲ್ ಚತುರ್ವೇದಿ – ‘ಹನುಮಾನ್ ಅಂಶ್’
