ಸನೊ: ಜಪಾನ್(Japan) ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ (Team India) 2 ರನ್ಗಳ ರೋಚಕ ಜಯ ಸಾಧಿಸಿದೆ.
ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಭಾರತ 5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಜಪಾನ್ 5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿ ಅಲೌಟ್ ಆಯ್ತು. ಜಪಾನ್ ಪರ ನಾಯಕ ಕೆಂಡೆಲ್ ಕಡೊವಾಕಿ-ಫ್ಲೆಮಿಂಗ್ 12 ಎಸೆತಗಳಲ್ಲಿ 12 ರನ್ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನ – ಮಹಿಳಾ ಕ್ರಿಕೆಟ್ ತಂಡಕ್ಕೆ ಸತತ 2ನೇ ಪದಕ
📸📸 Picture-perfect frames with the Captains 🏆
The stage is set for a historic clash between #TeamIndia and Japan 🤝#TeamIndiaInJapan | @CricketJapan pic.twitter.com/5mGTm42RZj
— BCCI (@BCCI) September 21, 2026
ಭಾರತದ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರೆ ಲಾಚ್ಲಾನ್ ಯಮಮೊಟೊ-ಲೇಕ್ ಅವರನ್ನು ಇಶನ್ ಕಿಶನ್ ರನೌಟ್ ಮಾಡಿದರು.
ಭಾರತದ ಪರ ನಾಯಕ ಶ್ರೇಯಸ್ ಅಯ್ಯರ್(Shreyas Iyer) 12 ಎಸೆತಗಳಲ್ಲಿ ಅಜೇಯ 16 ರನ್ ಹೊಡೆದರೆ ಸಂಜು ಸ್ಯಾಮ್ಸನ್ 9 ರನ್ ಹೊಡೆದು ಔಟಾದರು. ಅಜೇಯ 16 ರನ್ ಹೊಡೆದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

