– ದಕ್ಷಿಣ ಭಾರತಕ್ಕೆ ಇದು ಸಮಸ್ಯೆ ತರಲಿದೆ ಎಂದ ವಿಪಕ್ಷ ನಾಯಕ
ಚೆನ್ನೈ: ಕ್ಷೇತ್ರ ಮರುವಿಂಗಡಣೆ ಮಸೂದೆ (Delimitation Bill) ಜಾರಿಗೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಂತೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಿರೋಧ ವ್ಯಕ್ತಪಡಿಸಿದ್ದಾರೆ.
ಮಸೂದೆ ವಿರುದ್ಧ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ (M.K.Stalin) ಮನವೊಲಿಸುವಲ್ಲಿ ವಿಫಲವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆಯ ಸಂಖ್ಯೆಯನ್ನು 850 ಸ್ಥಾನಗಳಿಗೆ ವಿಸ್ತರಿಸುವ ಮೂಲಕ ಬಿಜೆಪಿಗೆ ಸಂಸದೀಯ ಕ್ಷೇತ್ರಗಳನ್ನು ಪುನರ್ರಚಿಸಲು ಅವಕಾಶ ನೀಡಿದರೆ ಭಾರತದಲ್ಲಿ ಪ್ರಜಾಪ್ರಭುತ್ವ ಅಳಿದುಹೋಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶೇಷ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ನಿವಾಸದಲ್ಲಿ ʻಟೀ ಪಾರ್ಟಿʼ – ಕೇಂದ್ರ ಸಚಿವರು, ಬಿಜೆಪಿ ಸಂಸದರ ಭೇಟಿ
850 ಸ್ಥಾನಗಳ ಸಂಸತ್ತಿನ ಕ್ಷೇತ್ರ ಪುನರ್ವಿಂಗಡಣೆ ಮತ್ತು ಬಿಜೆಪಿಗೆ ಆ 850 ಸ್ಥಾನಗಳನ್ನು ಸಂಪೂರ್ಣವಾಗಿ ರೂಪಿಸಲು ಅವಕಾಶ ನೀಡುವುದು, ಭಾರತದಲ್ಲಿನ ಕ್ಷೇತ್ರಗಳ ಸ್ವರೂಪವನ್ನು ಬದಲಾಯಿಸುವುದು ಭಾರತೀಯ ರಾಷ್ಟ್ರಕ್ಕೆ ಮಾತ್ರವಲ್ಲದೆ ದಕ್ಷಿಣ ಭಾರತಕ್ಕೆ ಮತ್ತು ವಿಶೇಷವಾಗಿ ತಮಿಳುನಾಡಿಗೆ ಹಾನಿಕಾರಕವಾಗಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಸಂಸತ್ ಸದಸ್ಯರ ಹೆಚ್ಚಳದಿಂದ ದಕ್ಷಿಣ ಭಾರತಕ್ಕೆ ಸಮಸ್ಯೆ ತರಲಿದೆ. ಇದರ ಬಗ್ಗೆ ಸ್ಟಾಲಿನ್ಗೆ ಮನವರಿಕೆ ಸಹ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ʻಇಂಡಿʼ ನಾಯಕರ ಕೊನೇ ಪ್ರಯತ್ನವೂ ವಿಫಲ – ಕೇಂದ್ರ ಲಿಖಿತ ಭರವಸೆ ಕೊಟ್ಟಿದೆ; ಡಿಎಂಕೆ ನಿಲುವು ಸ್ಪಷ್ಟಪಡಿಸಿದ ಸ್ಟಾಲಿನ್
