ಬಳ್ಳಾರಿ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಬಳ್ಳಾರಿ ಜೈಲಿನಿಂದ (Ballari Jail) ಪರಾರಿಯಾಗಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಕಲ್ಮಂಗಿ ಗ್ರಾಮದ ಯಲ್ಲಪ್ಪ ಪರಾರಿಯಾದ ವ್ಯಕ್ತಿ. ಹೊರಗ್ಯಾಂಗ್ ಕೆಲಸಕ್ಕೆ ತೆಗೆದಾಗ ಸಿಬ್ಬಂದಿ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ.
2024ರಲ್ಲಿ ರಾಯಚೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಯಲ್ಲಪ್ಪನನ್ನು ಶಿಫ್ಟ್ ಮಾಡಲಾಗಿತ್ತು. ಇಂದು ಬೆಳಗ್ಗೆ ಗೊರಗ್ಯಾಂಗ್ ಕೆಲಸಕ್ಕೆ ಕರೆದೊಯ್ಯುವಾಗ ಪರಾರಿಯಾಗಿದ್ದಾನೆ. ಕಳೆದ 4 ತಿಂಗಳಿಂದ ಹೊರಗ್ಯಾಂಗ್ ಕೆಲಸಕ್ಕೆ ಹೋಗುತ್ತಿದ್ದ.
ಜೈಲು ಸಿಬ್ಬಂದಿಗೆ ಅನುಮಾನ ಬಾರದಂತೆ ಹೊರಗೆ ಬಂದು ಯಲ್ಲಪ್ಪ ಎಸ್ಕೇಪ್ ಆಗಿದ್ದಾನೆ. ಸಜಾ ಬಂಧಿ ಯಲ್ಲಪ್ಪ ಎಸ್ಕೇಪ್ ಆಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೈಲಿನಿಂದ ಹೊರಗೆ ಬಂದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಬಳ್ಳಾರಿ ಸೆಂಟ್ರಲ್ ಜೈಲಾಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಕೈದಿ ಎಸ್ಕೇಪ್ ಆಗಿದ್ದಾನೆ. ಯಲ್ಲಪ್ಪನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
