– ರಾಹುಲ್ ಗಾಂಧಿ ವಾದಕ್ಕೂ ಮಣಿಯದ ಸ್ಟಾಲಿನ್
ಚೆನ್ನೈ: ಕ್ಷೇತ್ರ ಪುನರ್ವಿಂಗಡಣೆ (Delimitation) ವಿಚಾರದಲ್ಲಿ ಡಿಎಂಕೆ ಪಕ್ಷದ ಬೆಂಬಲ ಪಡೆಯಲು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ನಡೆಸಿದ ಕೊನೆಯ ಹಂತದ ಪ್ರಯತ್ನವೂ ವಿಫಲವಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ತಮ್ಮಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿಂದು ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ನಾಯಕರೊಂದಿಗೆ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಸ್ಟಾಲಿನ್ ತಮ್ಮ ನಿಲುವು ತಿಳಿಸಿದ್ದಾರೆ. ಆರಂಭದಿಂದಲೂ ಡಿಎಂಕೆ ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಯನ್ನ ಬೆಂಬಲಿಸುತ್ತಾ ಬಂದಿದೆ. ಮುಂದೆಯೂ ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಬದ್ಧವಾಗಿರಲಿದೆ ಎಂದು ಹೇಳಿದ್ದಾರೆ.
We mentioned to brother Stalin that this is a threat to the Tamil language, culture, its people and India.
Brother Stalin and all patriotic people must stand against this threat.
: LoP Shri @RahulGandhi
📍Tamil Nadu https://t.co/a5eOWvEjLt
— Congress (@INCIndia) November 29, 2026
ಅಲ್ಲದೆ, ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ದೊರೆತಿರುವ ಹಿನ್ನೆಲೆ ಪ್ರಸ್ತಾವಿತ ಮಸೂದೆಗೆ ಬೆಂಬಲ ನೀಡಲು ಪಕ್ಷ ನಿರ್ಧರಿಸಿದೆ ಎಂದು ಸೋನಿಯಾ ಗಾಂಧಿ ಅವರಿಗೆ ತಮ್ಮ ನಿರ್ಧಾರ ತಿಳಿಸಿದ್ದಾರೆ. ಹೀಗಾಗಿ, ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಡಿಎಂಕೆ ಮಸೂದೆಯ ಪರವಾಗಿ ಮತ ಚಲಾಯಿಸುವುದು ಬಹುತೇಕ ಖಚಿತವಾಗಿದೆ.
ಲೋಕಸಭೆಯಲ್ಲಿ ಡಿಎಂಕೆಯ (DMK) 22 ಸದಸ್ಯರು ಹಾಗೂ ರಾಜ್ಯಸಭೆಯಲ್ಲಿ 8 ಸದಸ್ಯರಿದ್ದಾರೆ. ಈ ಬೆಂಬಲ ಕೇಂದ್ರ ಸರ್ಕಾರಕ್ಕೆ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ 3ನೇ ಎರಡರಷ್ಟು ಬಹುಮತ ಪಡೆಯಲು ನೆರವಾಗಲಿದೆ.
ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗೆ ಡಿಎಂಕೆ ಬೆಂಬಲ
ಸುಮಾರು 1 ಗಂಟೆ 15 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಸ್ಟಾಲಿನ್, ಡಿಎಂಕೆ ಯಾವಾಗಲೂ ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಯ ಪರವಾಗಿದೆ. ಅಲ್ಲದೆ, ಪಕ್ಷ ಮುಂದಿಟ್ಟಿದ್ದ ಎರಡೂ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಲಿಖಿತವಾಗಿ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
🔹 We had a very nice, cordial meeting with Thiru Stalin ji. We explained our view to him.
🔹 Our view is that an 850-seat Parliament, with delimitation and allowing the BJP to completely shape those 850 seats and change the nature of the constituencies in India, is not only damaging to the nation, but also damaging to South India and particularly to Tamil Nadu.
🔹 They (Modi-Shah) have already tested this idea in Assam and J&K, and they want to implement this idea in the whole of India.
🔹 That is why we requested brother Stalin, who is a staunch defender of Tamil Nadu, that he needs to defend Tamil Nadu and ensure that this dirty design of the BJP is not allowed to happen.
🔹 Remember that the RSS is an anti-Tamil force. The RSS hates the idea of Tamil civilization, of Tamil language, of Tamil culture, and wants to put an end to it, wants to control it.
👉 That is why we are telling everybody, please do not allow the BJP to achieve what they want. Once the BJP reshapes the 850-seat Lok Sabha, democracy in India will be finished.
🔺 A full-scale attack on Tamil culture and Tamil language will begin.
: LoP Shri @RahulGandhi
📍Tamil Nadu
— Congress (@INCIndia) November 29, 2026
ಆದಾಗ್ಯೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸ್ಟಾಲಿನ್ ಅವರನ್ನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಸ್ಟಾಲಿನ್ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದೇ ವೇಳೆ ಸೋನಿಯಾ ಗಾಂಧಿ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದೂ ತಿಳಿಸಿರುವುದಾಗಿ ಆಪ್ತ ಮೂಲಗಳು ಹೇಳಿವೆ.
ರಾಹುಲ್ ವಾದಕ್ಕೂ ಮಣಿಯದ ಸ್ಟಾಲಿನ್
ಇನ್ನೂ ಸಭೆಯ ವೇಳೆ ಕ್ಷೇತ್ರ ಪುನರ್ವಿಂಗಡಣೆಯಿಂದ ಉಂಟಾಗಬಹುದಾದ ರಾಜಕೀಯ ಪರಿಣಾಮಗಳ ಬಗ್ಗೆ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದ ಉದಾಹರಣೆಗಳನ್ನ ನೀಡಿ ಸ್ಟಾಲಿನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕೂಡ ಮಸೂದೆಯಲ್ಲಿರುವ ಕೆಲವು ಅಂಶಗಳ ಬಗ್ಗೆ ಆಕ್ಷೇಪ ಎತ್ತಿದರು. ಆದ್ರೆ ಸ್ಟಾಲಿನ್ ತಮ್ಮ ನಿರ್ಧಾರಕ್ಕೆ ಬದ್ಧವಾದರು.

