ತೆಲುಗು ಚಿತ್ರರಂಗದ ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ (Slumdog 33 Temple Road). ಬಹುಮುಖ ಪ್ರತಿಭೆ ವಿಜಯ್ ಸೇತುಪತಿ (Vijay Sethupathi) ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ನಡೆದಿದೆ.
‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಟೀಸರ್ ಕುತೂಹಲ ಹೆಚ್ಚಿದೆ. ಕಣ್ಣು ಕಾಣದ ಭಿಕ್ಷುಕನ ರೀತಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವು ನಿಜವಾಗಿಯೂ ಕುರುಡಾಗಿದೆಯೇ ಅಥವಾ ಅವರ ನೋಟದ ಹಿಂದೆ ಆಳವಾದ ರಹಸ್ಯವಿದೆಯೇ? ಅನ್ನೋದು ಚಿತ್ರದಲ್ಲಿಯೇ ನೋಡಬೇಕು. ಇದನ್ನೂ ಓದಿ: ಜಾನ್ವಿ ಕಪೂರ್ ಪೆದ್ದಿ ಸೌಂದರ್ಯಕ್ಕೆ ಕತ್ತರಿ

ವಿಜಯ್ ಸೇತುಪತಿ ಎದುರು ಕನ್ನಡದ ಸಲಗ ದುನಿಯಾ ವಿಜಯ್ ಕುಮಾರ್ (Duniya Vijay) ಅಬ್ಬರಿಸಿದ್ದಾರೆ. ಖಡಕ್ ಖಳನಾಯಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಟಬು ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಸಂಯುಕ್ತಾ ಮೆನನ್, ಜರೀನಾ ವಹಾಬ್, ವಿಟಿವಿ ಗಣೇಶ್ ಮತ್ತು ಬ್ರಹ್ಮಾಜಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದ್ದು, ಕನ್ನಡದಲ್ಲಿ ಕೂಡ ಟೀಸರ್ ರಿಲೀಸ್ ಆಗಿದೆ. ಪುರಿ ಕನೆಕ್ಟ್ಸ್ ಬ್ಯಾನರ್‌ನಡಿ ಪುರಿ ಜಗನ್ನಾಥ್, ಚಾರ್ಮಿ ಕೌರ್, ಜೆಬಿ ನಾರಾಯಣ ರಾವ್ ಕೊಂಡ್ರೋಲಾ ಚಿತ್ರ ನಿರ್ಮಾಣ ಮಾಡಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತ, ಸ್ಯಾಮ್ ಕೆ ನಾಯ್ಡು ಛಾಯಾಗ್ರಹಣ, ಸಂತೋಷ್ ನೂಜಿಲ್ಲಾ ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ರಣವೀರ್ ಜೊತೆ ಬಾಲ್ಕನಿಯಲ್ಲಿ ನಿಂತ ದೀಪಿಕಾ – ಬೇಬಿ ಬಂಪ್ ಫೋಟೋ ವೈರಲ್
