ರಾಮ್ ಚರಣ್ ನಟನೆಯ ಪೆದ್ದಿ ಸಿನಿಮಾದ (Peddi Movie) ಒಂದು ವಿವಾದಕ್ಕೆ ವಿರಾಮ ಸಿಕ್ಕಿದೆ. ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಚಿತ್ರದಲ್ಲಿ ನಾಯಕಿಯಾದರೂ, ಕೇವಲ ತಮ್ಮನ್ನು ಗ್ಲಾಮರ್ ಗೊಂಬೆಯಾಗಿ ಬಳಕೆ ಮಾಡಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದರು. ಜಾನ್ವಿಯ ಈ ಅಸಮಾಧಾನಕ್ಕೆ ಹಲವರು ಧ್ವನಿಗೂಡಿಸಿದ್ದರು. ಕೊನೆಗೂ ಚಿತ್ರದ ನಿರ್ದೇಶಕರು ಜಾನ್ವಿಯ ಕೋಪವನ್ನು ತಣಿಸಿದ್ದಾರೆ.
ತಮ್ಮನ್ನು ಅಶ್ಲೀಲ ಎನ್ನುವಂತೆ ಚಿತ್ರಿಸಲಾಗಿದೆ ಅನ್ನುವ ಆರೋಪವನ್ನು ಚಿತ್ರದ ನಿರ್ದೇಶಕ ಬುಚ್ಚಿಬಾಬು (Buchi Babu) ಮೇಲೆ ಮಾಡಿದ್ದ ಜಾನ್ವಿ. ಅದಕ್ಕಾಗಿ ಕ್ಷಮೆಯನ್ನೇ ಕೇಳಿದ್ದರು ನಿರ್ದೇಶಕರು. ಆಕ್ಷೇಪಣೆ ವ್ಯಕ್ತಪಡಿಸಿದ್ದ ದೃಶ್ಯಗಳನ್ನು ಕತ್ತರಿಸುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ದೃಶ್ಯಗಳನ್ನು ತಗೆದುಹಾಕಿರೋದಾಗಿ ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ: ಪೆದ್ದಿಗೆ ಮತ್ತೊಂದು ಸಂಕಷ್ಟ – ಬಚಾವಾದ್ರು ರಾಮ್‌ಚರಣ್

ಸಿನಿಮಾದಲ್ಲಿ ಜಾನ್ವಿ ಅವರದ್ದು ಬರುವ ದೃಶ್ಯಗಳೇ ಬೆರಳೆಣಿಕೆಯಷ್ಟು. ಅದರಲ್ಲೂ ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ನಡೆದರೆ, ಅತಿಥಿ ಪಾತ್ರದಂತೆ ಬಂದು ಹೋಗುತ್ತಾರೆ ಜಾನ್ವಿ. ಇಂತಹ ಪಾತ್ರಗಳಿಗೆ ಅವರು ಒಪ್ಪಬೇಕಿತ್ತು ಅನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದಾರೆ. ಅದು ಏನೇ ಇರಲಿ, ತಮಗೆ ಸರಿ ಅನಿಸದೇ ಇರುವುದನ್ನು ತಗೆದು ಹಾಕಿಸುವಲ್ಲಿ ಜಾನ್ವಿ ಗೆದ್ದಿದ್ದಾರೆ.
ಜಾನ್ವಿ ಆರೋಪ ಮಾಡುತ್ತಿದ್ದಂತೆಯೇ ಬಾಲಿವುಡ್ ನಟಿ ಕಂಗನಾ ರಣಾವತ್ ಗರಂ ಆಗಿದ್ದರು. ಚಿತ್ರೀಕರಣ ಮಾಡುವಾಗಲೇ ಆಕ್ಷೇಪಣೆ ಮಾಡಬೇಕು ಅಂತ ಸಲಹೆ ಕೂಡ ನೀಡಿದ್ದರು. ಇತ್ತ ಕನ್ನಡದ ನಟಿ ಆಶಿಕಾ ರಂಗನಾಥ್ ಕೂಡ ಜಾನ್ವಿ ಬೆನ್ನಿಗೆ ನಿಂತಿದ್ದರು. ಒಟ್ಟಿನಲ್ಲಿ ಜಾನ್ವಿ ಗೆದ್ದಿದ್ದಾರೆ. ಇದನ್ನೂ ಓದಿ: ಪೆದ್ದಿ ಸಿನಿಮಾ ವಿವಾದ – ಜಾಹ್ನವಿ ಕಪೂರ್ ಚಾಟ್ ಲಿಸ್ಟ್ ವೈರಲ್
