ಕನ್ನಡದ ರಾಕಿಂಗ್‌ಸ್ಟಾರ್ ಯಶ್, (Yash) ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ ದಲ್ಲಿ (Ramayana) ರಾವಣನ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬುದರ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಇತ್ತೀಚೆಗೆ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದರು. ಈ ವೇಳೆ ತಮ್ಮ ಸಿನಿಮಾ ಜರ್ನಿ ಹಾಗೂ ಮುಂಬರುವ ಸಿನಿಮಾಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ‘ರಾಮಾಯಣ’ದಲ್ಲಿ ರಾಮನ ಪಾತ್ರ ಬಿಟ್ಟು ರಾವಣನ ಪಾತ್ರವನ್ನು ಯಾಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಯಶ್, ರಾಮನ ಒಳ್ಳೆಯತನ ತೋರಿಸಬೇಕಾದರೆ ರಾವಣನ ಕೆಟ್ಟತನವನ್ನೂ ತೋರಿಸಬೇಕು ಎಂದಿದ್ದಾರೆ.
ನಿರೂಪಕರು, ಎಲ್ಲಾ ಕೆಟ್ಟತನ ತೋರಿಸುವ ಜವಾಬ್ದಾರಿಯನ್ನೇ ನೀವು ತೆಗೆದುಕೊಂಡಿದ್ದೀರಾ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಯಶ್ ಕೂಡ ತಮ್ಮದೇ ಸ್ಟೈಲ್‌ನಲ್ಲಿ ಉತ್ತರಿಸಿದ್ದಾರೆ.
ರಾವಣನ ಪಾತ್ರ ಸುಲಭವಾದದ್ದಲ್ಲ. ಅವನ ಬಳಿ ಅಪಾರ ಶಕ್ತಿ, ಜ್ಞಾನ ಹಾಗೂ ಸಾಮರ್ಥ್ಯವಿದೆ. ಆದರೆ, ಕೊನೆಯಲ್ಲಿ ತನ್ನ ಅಹಂಕಾರದಿಂದಲೇ ಸೋಲುತ್ತಾನೆ. ಶ್ರೀರಾಮನೇ ಅವನನ್ನು ಸೋಲಿಸುತ್ತಾನೆ. ನಾವು ನಮ್ಮ ಅಹಂಕಾರವನ್ನು ಬದಿಗಿಟ್ಟು ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು ಎಂದು ಯಶ್ ಹೇಳಿದ್ದಾರೆ. ಇದನ್ನೂ ಓದಿ: ಪಾನ್ ಮಸಾಲಾ ಪರೋಕ್ಷ ಜಾಹೀರಾತು: ಶಾರುಖ್, ದೇವಗನ್, ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ನೋಟಿಸ್
‘ರಾಮಾಯಣ’ದ ಮೊದಲ ಭಾಗವು 2026ರ ದೀಪಾವಳಿ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸಿನಿಮಾದ ಎರಡನೇ ಭಾಗವನ್ನು 2027ರ ದೀಪಾವಳಿ ವೇಳೆಗೆ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.ಇದನ್ನೂ ಓದಿ: ರೈಲಿನಲ್ಲೇ ಭಾರೀ ಹೈಡ್ರಾಮಾ, RPF ಸಿಬ್ಬಂದಿ ಬಟ್ಟೆ ಬಿಚ್ಚಿ, ರೇಜರ್‌ನಿಂದ ಹಲ್ಲೆ; ನಟಿ ಅಂತರಾ ಬ್ಯಾನರ್ಜಿ ಅರೆಸ್ಟ್
