`ಪೆದ್ದಿ’ (Peddi) ಚಿತ್ರದಲ್ಲಿ ತಮ್ಮನ್ನು ಗ್ಲ್ಯಾಮರ್ ಬೊಂಬೆಯನ್ನಾಗಿ ಚಿತ್ರೀಕರಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದರು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್. ದೇಹದ ಭಾಗಗಳನ್ನೇ ಹೈಲೈಟ್ ಮಾಡುವ ಮೂಲಕ ಪಾತ್ರಕ್ಕೆ ನ್ಯಾಯ ದೊರಕಿಸಿಲ್ಲ ಎಂದು ನಿರ್ದೇಶಕ ಬುಚ್ಚಿಬಾಬು ವಿರುದ್ಧ ಹರಿಹಾಯ್ದಿದ್ದರು ಜಾಹ್ನವಿ ಕಪೂರ್. ಆದರೆ ಇದೆಲ್ಲವೂ ಜಾಹ್ನವಿ ಕಪೂರ್ ಅನುಮತಿ ಇಲ್ಲದೆ ಚಿತ್ರೀಕರಣ ಆಗಲು ಸಾಧ್ಯವಿಲ್ಲ ಎಂಬ ಟೀಕೆಗಳೂ ಬಂದಿದ್ದವು. ದೊಡ್ಡ ಸಿನಿಮಾ ಹಿನ್ನೆಲೆಯ ಕುಟುಂಬದ ಸ್ಟಾರ್ ಕಿಡ್‌ಗೇ ಹೀಗಾಗೋಕೆ ಸಾಧ್ಯವಿಲ್ಲ ಎಂಬ ಮಾತು ಕೇಳಿಬಂದಿತ್ತು. ಈ ಚರ್ಚೆಯ ನಡುವೆಯೇ ಜಾಹ್ನವಿ ಕಪೂರ್‌ರದ್ದು (Janhvi Kapoor) ಎನ್ನಲಾದ ಚಾಟ್‌ಲಿಸ್ಟ್ ಲೀಕ್ ಆಗಿದೆ. ಜಾಹ್ವನಿ ಕಪೂರ್ ಅವರ ಸೋಶಿಯಲ್ ಮೀಡಿಯಾ ಫ್ಯಾನ್ ಪೇಜ್‌ನಲ್ಲಿ ವೈರಲ್ ಆಗಿದೆ.
ಆಪ್ತರೊಬ್ಬರ ಬಳಿ ಚಿತ್ರೀಕರಣದ ವೇಳೆಯೇ ಜಾಹ್ನವಿ ಕಪೂರ್ ನಿರ್ದೇಶಕ ಬುಚ್ಚಿಬಾಬು ವಿರುದ್ಧ ಆರೋಪ ಮಾಡಿದ್ದರು. ನನಗೆ ಇಷ್ಟವಿಲ್ಲದಿದ್ದರೂ ಕ್ಯಾಮೆರಾದಲ್ಲಿ ನೇರವಾಗಿ ನನ್ನ ಎದೆ ಹಾಗೂ ಸೊಂಟದ ಭಾಗವನ್ನೇ ಹೈಲೈಟ್ ಮಾಡಿ ಚಿತ್ರೀಕರಿಸಲಾಗುತ್ತಿತ್ತು. ಇದನ್ನು ನಿರಾಕಸಿದಾಗ ನಿರ್ದೇಶಕರಿಗೆ ನಿರಾಸೆ ಉಂಟಾಯಿತು. ರಾಮ್‌ಚರಣ್ ಕೂಡ ಮಧ್ಯೆ ಪ್ರವೇಶಿಸಿ ನಿರ್ದೇಶಕರಿಗೆ ಹೀಗೆ ಮಾಡುವುದು ಸರಿಯಲ್ಲ ಎಂದು ತಡೆದರೂ ನಿರ್ದೇಶಕರು ನಮ್ಮ ಮಾತಿಗೆ ಒಪ್ಪಲಿಲ್ಲ ಎಂದಿರುವ ಚಾಟ್ ಲಿಸ್ಟ್ ವೈರಲ್ ಆಗಿದೆ.
ಇಡೀ ಬಾಲಿವುಡ್ ಅನ್ನೇ ಆಳಿದ ಖ್ಯಾತ ನಟಿ ಶ್ರೀದೇವಿ, ಇನ್ನು ಬಾಲಿವುಡ್ ನಟರನ್ನ ಗಿರಿಗಿಟ್ಲೆ ಥರ ಆಡಿಸಿದವರು ನಿರ್ಮಾಪಕ ಬೋನಿ ಕಪೂರ್. ಇಂಥಹ ಸ್ಟಾರ್ ದಂಪತಿ ಪುತ್ರಿಗೇ ಹೀಗೆ ಅನ್ಯಾಯವಾಗಲು ಸಾಧ್ಯವೇ ಎಂಬ ಮಾತು ಕೇಳಿಬಂದಿತ್ತು. ಈ ಹಿನ್ನೆಲೆ ಜಾಹ್ನವಿ ಕಪೂರ್ ಚಿತ್ರೀಕರಣ ವೇಳೆಯೇ ತಮಗಾಗುತ್ತಿದ್ದ ಮುಜುಗರವನ್ನ ಇನ್ನೊಬ್ಬರ ಬಳಿ ಹೇಳಿಕೊಂಡಿದ್ದರು ಎನ್ನಲಾದ ವಾಟ್ಸಪ್ ಚಾಟ್ ಲಿಸ್ಟ್ ಇದೀಗ ವೈರಲ್ ಆಗಿದೆ.
