ಚಿಕನ್ ಖಾದ್ಯಗಳನ್ನು ವಿವಿಧ ಬಗೆಯಲ್ಲಿ ತಯಾರಿಸಬಹುದು, ಅವುಗಳಲ್ಲಿ ರುಚಿಕರವಾದ ಸೋಯಾ ಚಿಕನ್ ಕೂಡ ಒಂದು. ಮನೆಯಲ್ಲಿರುವ ಕೇವಲ ಆರು ಪದಾರ್ಥಗಳನ್ನು ಬಳಸಿ ಅತ್ಯಂತ ಸುಲಭವಾಗಿ ಈ ರೆಸಿಪಿಯನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಚಿಕನ್ – ಅರ್ಧ ಕೆಜಿ
ಸೋಯಾ ಸಾಸ್ – 5 ಟೀ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 3 ಟೀ ಚಮಚ
ಅಚ್ಚಖಾರದ ಪುಡಿ – 3 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಒಂದು ಚಿಟಿಕೆ
ಚಿಕನ್ – ಅರ್ಧ ಕೆಜಿ
ಸೋಯಾ ಸಾಸ್ – 5 ಟೀ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 3 ಟೀ ಚಮಚ
ಅಚ್ಚಖಾರದ ಪುಡಿ – 3 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಒಂದು ಚಿಟಿಕೆ

ತಯಾರಿಸುವ ವಿಧಾನ:
ಮೊದಲು ಒಂದು ಬೌಲ್ನಲ್ಲಿ ಸ್ವಚ್ಛಗೊಳಿಸಿದ ಚಿಕನ್ ತೆಗೆದುಕೊಂಡು, ಅದಕ್ಕೆ ಸೋಯಾ ಸಾಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆ ಬೆರೆಸಿದ ಈ ಚಿಕನ್ ಅನ್ನು ಸುಮಾರು ಒಂದು ಗಂಟೆಯವರೆಗೆ ಫ್ರಿಡ್ಜ್ನಲ್ಲಿಟ್ಟು ಮ್ಯಾರಿನೇಟ್ ಆಗಲು ಬಿಡಿ. ಒಂದು ಗಂಟೆಯ ನಂತರ ಫ್ರಿಡ್ಜ್ನಿಂದ ಹೊರತೆಗೆದು, ಸಾಮಾನ್ಯ ತಾಪಮಾನಕ್ಕೆ ಬರಲು 10 ನಿಮಿಷಗಳ ಕಾಲ ಹಾಗೆಯೇ ಇಡಿ.

ಈಗ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಒಂದು ಚಿಟಿಕೆ ಸಕ್ಕರೆ ಹಾಕಿ ಬಿಸಿ ಮಾಡಿ. ಸಕ್ಕರೆ ಕರಗಲು ಶುರುವಾದ ತಕ್ಷಣ ನೆನೆಸಿಟ್ಟ ಚಿಕನ್ ತುಂಡುಗಳನ್ನು ಅದಕ್ಕೆ ಹಾಕಿ ಚೆನ್ನಾಗಿ ಹುರಿಯಿರಿ. ಈ ಅಡುಗೆಗೆ ಎಣ್ಣೆ ಬಳಸುವ ಅಗತ್ಯವಿರುವುದಿಲ್ಲ. ಒಂದು ವೇಳೆ ತಳ ಹಿಡಿಯುತ್ತಿದೆ ಎನಿಸಿದರೆ ಮಾತ್ರ ಸ್ವಲ್ಪ ನೀರನ್ನು ಚಿಮುಕಿಸಿಕೊಳ್ಳಬಹುದು.
ಮಧ್ಯಮ ಉರಿಯಲ್ಲಿ ಆಗಾಗ ಸೌಟಿನಿಂದ ತಿರುಗಿಸುತ್ತಾ, ಚಿಕನ್ನಲ್ಲಿರುವ ನೀರಿನಂಶ ಪೂರ್ತಿಯಾಗಿ ಆವಿಯಾಗುವವರೆಗೆ ಚೆನ್ನಾಗಿ ಫ್ರೈ ಮಾಡಿದರೆ ಬಿಸಿಬಿಸಿಯಾದ ಸೋಯಾ ಚಿಕನ್ ಸವಿಯಲು ಸಿದ್ಧ.